ನಾಟಕಗಾವುದ ಪುಂಚ ~ ಶಿಲ್ಪಾ ಜೋಶಿ

ನನ್ನ ಮಾತಿನ ಮನೆಯಿಂದ …..
ತುಳುಕೂಟ (ರಿ) ಉಡುಪಿ ಯವರು ಏರ್ಪಡಿಸಿದ ತುಳುನಾಟಕ ಸ್ಪರ್ಧೆಯ ನಾಟಕಗಾವುದ ಪುಂಚ …
ಕರಾವಳಿ ಕಲಾವಿದರು (ರಿ) ಮಲ್ಪೆ ಉಡುಪಿ, ತುಳುವಿಗೆ ಅನುವಾದ ಹಾಗು ನಿರ್ದೇಶನ ನಾಗರಾಜ್ ವರ್ಕಾಡಿ

ಸಾಮಾಜಿಕವಾಗಿ ಜನರ ಮನಸ್ಸಿನಲ್ಲಿ ಬೇರೊರಿರುವ ಧಾರ್ಮಿಕ ನಂಬಿಕೆ, ಆಚರಣೆ, ಸಮಾಜದ ಕಟ್ಟುಪಾಡಿನ ಆಧಾರವಾಗಿರುವ ಕಥೆ. ನಂಬಿಕೊಂಡು ಬಂದಂತಹ ಪದ್ಧತಿ ಕಾಕತಾಳೀಯವಾಗಿ ಆಗುವ ಘಟನೆ ನಂಬಿಕೆಯ ಅಸ್ಥಿತ್ವವನ್ನೇ ಬುಡಮೇಲು ಮಾಡಿ ಎಲ್ಲವನ್ನು ಪ್ರಶ್ನಿಸುವ ಧಿಕ್ಕರಿಸುವ ಮನಸ್ಥಿತಿಗೆ ತಂದು ನಿಲ್ಲಿಸುತ್ತದೆ.

ಊರಿಗೆ ಪರಿಹಾರ ಹೇಳುವ ಮನೆತನದಲ್ಲಿ ಆಕಸ್ಮಿಕವಾಗಿ ಆದ ಅನಾಹುತ ಮನೆತನದ ವಂಶದ ಕುಡಿಯನ್ನೇ ಬಲಿತೆಗೆದು ಕೊಂಡು .. ನಂಬಿದ ಶಕ್ತಿಯಲ್ಲಿ ಕೇಳಿಕೊಂಡಾಗ ಕಂಡು ಬಂದದ್ದು ಆ ವಂಶದಲ್ಲಿ ಹುಟ್ಟುವ ಹೆಣ್ಣಿನ ಧಾರೆಯೊಂದಿಗೆ ಶಾಪ ಮುಕ್ತಿ ಅನ್ನುವ ವಿಷಯ.

ನಂತರ ಹುಟ್ಟುವ ಮಗು ಗಂಡೋ ಹೆಣ್ಣೋ ಅನ್ನೋ ತೊಳಲಾಟ ಆತಂಕ, ಗಂಡು ಮಗು ಹುಟ್ಟಿದಾಗ ಆಗುವ ನಿರಾಸೆ , ಮತ್ತೆ ಮತ್ತೆ ಹುಟ್ಟಿದ ಮಗು ಸತ್ತು ಕೊನೆಗೆ ಹೆಣ್ಣು ಮಗುವನ್ನು ಭೂಮಿಗೆ ತಂದ ತಾಯಿಯ ಮರಣ … ಹುಟ್ಟಿನಿಂದಲೇ ಮಗುವಿನ ಮೇಲಿರುವ ಭರವಸೆ ವಯಸ್ಸಿಗೆ ಮೀರಿದ ಜವಾಬ್ದಾರಿ, ಕೆಳ ವರ್ಗದವನಿಗೆ ಮನಸ್ಸು ಕೊಟ್ಟು ಅದನ್ನು ಹಿರಿಯರೆದುರು ಹೇಳಲಾಗದೆ ಇಬ್ಬರು ಅನುಭವಿಸುವ ವೇದನೆ, ಮನೆತನದ ಶಾಪ ನಿವಾರಣೆಗೆ ಬಲಿ ಪಶುವಾಗಿ ಅನಿವಾರ್ಯವಾಗಿ ಮದುವೆಗೆ ಒಪ್ಪಿದವವಳು ಮನಸು ಕೊಟ್ಟವನು ಸಮಾಜದೆದುರು ಧೈರ್ಯ ತಾಳದೆ ಹೋದಾಗ .. ವಿಷ ಕುಡಿದು ತನ್ನ ಜೀವನವನ್ನು ಕೊನೆಗೊಳಿಸುವ ಕಥೆ .. ಬಾಯಿಂದ ಬಂದ ನೊರೆಗೆ ಬೇರೆ ಅರ್ಥ ಕಲ್ಪಿಸಿ ಇದು ಸಹ ಹಾವಿನ ಶಾಪ ಅಂತ ಮನೆತನದವರು ತಿಳಿಸುವುದು … ಕೊನೆಗೆ ಅವಳ ಗೆಳತಿ ಬಯಲು ಮಾಡಿದ ರಹಸ್ಯ . ಅನೇಕ ಕಡೆಯಲ್ಲಿ ಸಮಾಜದಲ್ಲಿ ನಡೆಯುವ ಘಟನೆಯ ಕನ್ನಡಿಯಂತೆ.

ಎಲ್ಲರೂ ಅವರವರ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನ ಪಟ್ಟಿದ್ದಾರೆ, ಕೆಲವೊಂದು ಪಾತ್ರಗಳನ್ನು ನಟರನ್ನು ಇನ್ನು ಉತ್ತಮವಾಗಿ ಬಳಸ ಕೊಳ್ಳಬಹುದಿತ್ತು .ತುಳು ಭಾಷೆಯ ಬಳಕೆಯಲ್ಲಿ ಗೊಂದಲ ಸ್ವಷ್ಟವಾಗಿತ್ತು . ನಾಟಕ ಆರಂಭವಾಗುವಾಗ ಹುತ್ತ ಒಡೆದು ಹಾಕುವ ದೃಶ್ಯ ಪ್ರೇಕ್ಷಕನ ಮನದಲ್ಲಿ ಕಥೆಯ ನಡೆಗೆ ಗಂಭೀರತೆ, ನಿರೀಕ್ಷೆ ಕುತೂಹಲವನ್ನು ಮೂಡಿಸುತ್ತದೆ.ಒಳ್ಳೆಯ ಕಥಾವಸ್ತು , ನಿರ್ದೇಶನ
– ಶುಭ ಹಾರೈಕೆಗಳು ~ ಶಿಲ್ಪಾ ಜೋಶಿ

 
 
 
 
 
 
 
 
 
 
 

Leave a Reply