Janardhan Kodavoor/ Team KaravaliXpress
30.6 C
Udupi
Sunday, October 2, 2022
Sathyanatha Stores Brahmavara

ಪ್ರವೀಣ್ ಹತ್ಯೆ ; ಪೇಜಾವರ ಶ್ರೀ ತೀವ್ರ ಕಳವಳ

ದ.ಕ‌. ಜಿಲ್ಲೆಯ ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ದುಷ್ಕರ್ಮಿಗಳು ಹಿಂದೂ ಸಂಘಟನೆಯ ಧುರೀಣ ಪ್ರವೀಣ್ ಹತ್ಯೆಗೈದಿರುವ ಘಟನೆಯ ಬಗ್ಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಇಂಥಹ ಹೇಯಕೃತ್ಯ ನಾಗರಿಕ ಸಮಾಜವೇ ತಲೆತಗ್ಗಿಸುವಂತದ್ದಾಗಿದೆ . ಮೃತ ಪ್ರವೀಣನ ಆತ್ಮಕ್ಕೆ ಸದ್ಗತಿ ದೊರೆಯಲಿ ಮತ್ತು ಆತನ‌ ಕುಟುಂಬಸ್ಥರಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿರುವ ಶ್ರೀಗಳು , ನಾಡಿನಲ್ಲಿ ಇಂಥಹ ದುಷ್ಕೃತ್ಯಗಳು ಮೇಲಿಂದ ಮೇಲೆ ನಡೀತಾ ಇರೋದ್ರಿಂದ ಜನಾಕ್ರೋಶಗೊಂಡು ಸರ್ಕಾರದ ಮೇಲೆ ವಿಶ್ವಾಸವನ್ನೇ ಕಳಕೊಳ್ಳುವ ಸ್ಥಿತಿ ತಲುಪುತ್ತಿರುವಂತಿದೆ ಅದಕ್ಕೂ ಮೊದಲೇ ಸರ್ಕಾರ ಇಂಥಹ ಪಾತಕಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ .
ಹಿಂದೂ ಕಾರ್ಯಕರ್ತರು ಧೈರ್ಯ ಕಳಕಳೊಳ್ಳಬೇಡಿ : ಶ್ರೀಗಳ ಕಿವಿಮಾತು
ಪ್ರವೀಣ ನ‌ಹತ್ಯೆಯಿಂದ ನಾಡಿನ ಸಹಸ್ರಾರು ಹಿಂದೂ ಯುವ ಕಾರ್ಯಕರ್ತರು ಆಕ್ರೋಶ ಉಲ್ಬಣಿಸಲು ಕಾರಣವಾಗುತ್ತಿದೆ . ಇತ್ತೀಚೆಗಷ್ಟೆ ಹರ್ಷನ ಹತ್ಯೆಯ ದುಃಖ ನೋವಿನಿಂದ ಹೊರಬರುವ ಹೊತ್ತಿಗೇ ಇನ್ನೊಬ್ಬ ತರುಣನ ಕೊಲೆಯಾಗಿರೋದು ಸಹನೆಯ ಕಟ್ಟೆ ಒಡೆಯುವಷ್ಟು ದುಃಖ ಆಕ್ರೋಶ ತರಿಸೋದು ಸಹಜವೇ ಆಗಿದ್ದರೂ ಯಾರೊಬ್ಬರೂ ಧೈರ್ಯ ಕಳಕೊಳ್ಳಬಾರದು . ಸಂಯಮವನ್ನು ಒಗ್ಗಟ್ಟನ್ನು ಕಾಯ್ದುಕೊಂಡು ಕೆಲಸ ಮಾಡಬೇಕಾಗಿದೆ . ನಾವುಗಳೂ ತಮ್ಮೆಲ್ಲರ ನೋವಿನಲ್ಲಿ ಸಹಾನುವರ್ತಿಗಳು ಎಂದು ಶ್ರೀಗಳು ತಿಳಿಸಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!