ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು : ಸಿಇಒ ಪ್ರಸನ್ನ

ಉಡುಪಿ, ಸೆಪ್ಟಂಬರ್ 22 (ಕವಾ): ನಮ್ಮ ಸುತ್ತಮುತ್ತಲಿನ ಪರಿಸರವನ್ನು ಉತ್ತಮವಾಗಿ ಇಟ್ಟುಕೊಂಡಾಗ ಮಾತ್ರ ನಾವುಗಳು ಆರೋಗÀ್ಯವಂತರಾಗಿ ಇರಲು ಸಾಧ್ಯ ಈ ಹಿನ್ನಲೆ ಗ್ರಾಮೀಣ ಭಾಗದ ಪ್ರತೀ ಮನೆಯ ಸುತ್ತಲೂ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಹೇಳಿದರು.
ಅವರು ಇಂದು ಮಣಿಪಾಲದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯ 2ನೇ ಹಂತದ ದ್ರವತ್ಯಾಜ್ಯ ನಿರ್ವಹಣೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಕುರಿತ ನಡೆದ ಸಭೆಯ ಅಧ್ಯಕ್ಷತೆ ವಹಿಸಿ
ಮಾತನಾಡಿದರು.

ಸಾಮಾನ್ಯವಾಗಿ ಸಾಂಕ್ರಮಿಕ ರೋಗಗಳು ರೋಗವಾಹಕಗಳಾದ ಸೊಳ್ಳೆ ಸೇರಿದಂತೆ ಕೀಟಜನ್ಯಗಳಿಂದ ಹರಡುತ್ತದೆ. ಇವುಗಳ ಸಂತಾತೋತ್ಪತ್ತಿ ತಾಣಗಳಿಗೆ ನಿಂತ ನೀರೇ ಪ್ರಮುಖ ಕಾರಣವಾಗಿದೆ. ಆದ್ದರಿಂದ ನಮ್ಮ ಮನೆಯ ಸುತ್ತಮುತ್ತಲಿನ
ಪರಿಸರದಲ್ಲಿ ಮನೆ ಬಳಕೆಯ ತ್ಯಾಜ್ಯ ನೀರು ಎಲ್ಲೆಂದರಲ್ಲಿ ನಿಲ್ಲದಂತೆ ಇಂಗುಗುAಡಿಗಳ ನಿರ್ಮಾಣವನ್ನು ಮಾಡಬೇಕು ಎಂದರು.

ಸರ್ಕಾರಿ ಶಾಲೆ, ಅಂಗನವಾಡಿ, ಆರೋಗ್ಯ ಕೆಂದ್ರಗಳಲ್ಲಿನ ತ್ಯಾಜ್ಯ ನೀರನ್ನು ಇಂಗುಗುoಡಿಗಳಲ್ಲಿ ಇಂಗಿಸುವ ಕಾಮಗಾರಿಗಳನ್ನು ಸ್ವಚ್ಚ ಭಾರತ್ ಮಿಷನ್ ಅನುದಾನದ ಬಳಕೆಯೊಂದಿಗೆ ನಿರ್ಮಾಣ ಮಾಡಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು
ಮುಂದಾಗಬೇಕು ಎಂದರು.

ನದಿ ಹಾಗೂ ಸಮುದ್ರದ ತಟದಲ್ಲಿರುವ ಮನೆಗಳ ಶೌಚಾಲಯದ ನೀರು ಸಮುದ್ರ ಹಾಗೂ ನದಿಗಳನ್ನು ಸೇರದಂತೆ ಗುಂಡಿಗಳ ನಿರ್ಮಾಣ ಮಾಡಬೇಕು ಆದರೆ ಅವುಗಳನ್ನು ನೇರವಾಗಿ ನದಿ ಸಮುದ್ರಕ್ಕೆ ಬಿಟ್ಟಿರುವುದು ಗ್ರಾಮೀಣ ಭಾಗದಲ್ಲಿ ಕಂಡುಬರುತ್ತಿದೆ
ಈ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಂಬAದಿಸಿದ ಮನೆ/ಕಟ್ಟಡಗಳ ಮಾಲೀಕರಿಗೆ ಪಂಚಾಯತ್ ರಾಜ್ ಕಾಯ್ದೆ ಅನ್ವಯ ನೋಟಿಸ್ ನೀಡಿ ಸರಿಪಡಿಸುವ ಕಾರ್ಯವಾಗಬೇಕು ,ಒಂದೊಮ್ಮೆ ಅವರುಗಳು ಇದಕ್ಕೆ ಸ್ಪಂದಿಸದೇ ಇದ್ದಲ್ಲಿ ಅವರುಗಳ
ಮೇಲೆ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದರು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕಡಲ ತೀರಗಳ ಅಭಿವೃಧ್ದಿಯನ್ನು ಕೈಗೊಳ್ಳುವ ಮೂಲಕ ಪ್ರವಾಸಿಗರನ್ನು ಆಕರ್ಷಿಸುವಂತಾಗಬೇಕು ಇದಕೆ ಅನುಗುಣವಾಗಿ ಅಗತ್ಯವಿರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು
ಯೋಜನೆಗಳನ್ನು ರೂಪಿಸಿ , ಅಭಿವೃದ್ಧಿಪಡಿಸಲು ಮುಂದಾಗಬೇಕು ಎಂದರು .

ಗ್ರಾಮೀಣ ಭಾಗದಲ್ಲಿ ಮನೆಮನೆಗಳಿಂದ ಕಸವನ್ನು ಸಂಗ್ರಹಿಸುವ ಕಾರ್ಯವನ್ನು ತಪ್ಪದೇ ಮಾಡಿದಲ್ಲಿ ಜನಸಾಮಾನ್ಯರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ತಪ್ಪಿಸುವುದರ ಜೊತೆಗೆ ಸ್ವಚ್ಛಗ್ರಾಮ ವನ್ನಾಗಿಸಲು ಸಾಧ್ಯವಾಗುತ್ತದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಮತ್ತು ವಿವಿಧ ಪಂಚಯತ್ ಗಳ ಪಂಚಾಯತ್ ಅಭಿವೃಧ್ದಿ ಅಧಿಕಾರಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply