ಸನ್ಮಾನ್ಯ ಪ್ರಧಾನಿಗಳ ಹುಟ್ಟೂರಿನಲ್ಲಿ ಅವರ ಜನ್ಮ ದಿನದ೦ದು ಪ್ರಸಾದ್ ನೇತ್ರಾಲಯದ ವತಿಯಿ೦ದ ನೇತ್ರ ಶಿಬಿರ

ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಜನ್ಮದಿನದಂದು ಅವರ ಹುಟ್ಟೂರಾದ ಗುಜರಾತಿನ ವಾಡ್‌ನಗರದಲ್ಲಿ, ಉಡುಪಿಯ ಪ್ರಸಾದ ನೇತ್ರಾಲಯ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ , ರ‍್ವೋದಯ ಸೇವಾ ಟ್ರಸ್ಟ್, ಅಹಮದಾಬಾದ್, ಜಿ ಎ೦ ಇ ಆರ್ ಎಸ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ವಾಡ್ ನಗರ ಹಾಗೂ ವನ್
ಸೈಟ್ ಎಸ್ಸೀಲಾರ್ ಲಕ್ಸೊಟ್ಟಿಕಾ ಫೌಂಡೇಶನ್, ಬೆ೦ಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಬೃಹತ್ ಉಚಿತ ನೇತ್ರ ಚಿಕಿತ್ಸಾ ಶಿಬಿರ, ಉಚಿತ ಕನ್ನಡಕ ವಿತರಣೆ ಮತ್ತು ನೇತ್ರ ದಾನ ನೋಂದಣಿ ಶಿಬಿರ ನಡೆಯಿತು. ಈ ಕರ‍್ಯಕ್ರಮವನ್ನು ಪ್ರಧಾನ ಮಂತ್ರಿ ಶ್ರೀ ಮೋದಿಯವರ ಹಿರಿಯ ಸಹೋದರ ಶ್ರೀ ಸೋಮ ಭಾಯ್ ಮೋದಿಯವರು ಉದ್ಘಾಟಿಸಿದರು. ಕರ‍್ಯಕ್ರಮದಲ್ಲಿ ಲೋಕ ಸಭಾ ಸದಸ್ಯರಾದ ಶ್ರೀಮತಿ ಶಾರದಾ ಬೆನ್
ಪಟೇಲ್, ರಾಜ್ಯಸಭಾ ಸದಸ್ಯರಾದ ಶ್ರೀ ಜುಗಲ್ ಜಿ ಲೋಖಂಡ್ ವಾಲ , ಪ್ರಸಾದ ನೇತ್ರಾಲಯದ ಮುಖ್ಯಸ್ಥರಾದ ಡಾ. ಕೃಷ್ಣ ಪ್ರಸಾದ ಕೂಡ್ಲು, ವನ್ ಸೈಟ್ ಫೌಂಡೇಶನ್ ನ ವ್ಯವಸ್ಥಾಪಕ ಶ್ರೀ ರ‍್ಮಪ್ರಸಾದ್ ರೈ, ಮುಂಬೈ ಭಾಜಪ ಕರ‍್ಯರ‍್ಶಿ ಶ್ರೀ ಮೋಹನ್ ಗೌಡ, ಅಭಿನವ ಗ್ಲೋಬಲ್ ಅಕಾಡೆಮಿಯ ಶ್ರೀ ವಿದ್ಯಾಶಂಕರ್ ,ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಕಿರಿಯ ಸಹೋದರ ಶ್ರೀ ಪ್ರಹ್ಲಾದ ಮೋದಿ ಮತ್ತು ಗುಜರಾತ್ ಸರಕಾರ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಶಿಬಿರದಲ್ಲಿ ನರೇಂದ್ರ ಮೋದಿಯವರ ಕುಟುಂಬದ ಸದಸ್ಯರೂ ಸೇರಿ ಏಳು ನೂರಕ್ಕೂ ಹೆಚ್ಚು ಜನರು ತಮ್ಮ ಕಣ್ಣಿನ ತಪಾಸಣೆಯನ್ನು ಮಾಡಿಕೊಂಡರು. ಸುಮಾರು ಐನೂರಕ್ಕೂ ಹೆಚ್ಚು ಜನರಿಗೆ ಉಚಿತ ಕನ್ನಡಕವನ್ನು ವಿತರಿಸಲಾಯಿತು. ನೂರಕ್ಕೂ ಮಿಕ್ಕಿ ಜನರಿಗೆ ಉಚಿತ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಗೆ ಶಿಫಾರಸ್ಸು ಮಾಡಲಾಯಿತು.

 
 
 
 
 
 
 
 
 
 
 

Leave a Reply