ಉಡುಪಿಯ ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆದ ಪ್ರಮೋದ್ ವರ್ಗಾವಣೆ. ವರ್ಗಾವಣೆ ಸರ್ಕಾರದ ನಿಯಮ. ಆದರೆ ಅತೀ ಕಡಿಮೆ ಅವಧಿಯಲ್ಲಿ ದಕ್ಷ ಅಧಿಕಾರಿಯನ್ನು ವರ್ಗಾವಣೆ ಮಾಡಿಸಿದಲ್ಲಿ ಕಾಣದ ಕೈಗಳ ಕೆಲಸವಿದೆ ಎನ್ನುತ್ತಾರೆ ಉಡುಪಿ ನಾಗರಿಕರು.
ಹಿಂದುಳಿದ ವರ್ಗ, ಶೋಷಿತ ವರ್ಗ ಹಾಗು ಸಮಾಜದ ಅತಿ ದೌರ್ಜನ್ಯಕ್ಕೆ ಒಳಗಾದ ಅಸಹಾಯ ಕರಿಗೆ ನ್ಯಾಯ ಕೊಡಿಸಿದ ದಕ್ಷ ಪ್ರಾಮಾಣಿಕ ಅಧಿಕಾರಿ. ತನ್ನ ಪೊಲೀಸ್ ಖದರನ್ನು ಉಡುಪಿ ನಗರದಲ್ಲಿ ಎಲ್ಲರಿಗೂ ತೋರಿಸಿಕೊಟ್ಟಿದ್ದಾರೆ.
ಲಂಚ ಪಡೆಯದೆ ಸಂಬಳದಲ್ಲಿ ಅಚ್ಚುಕಟ್ಟಾಗಿ ಜೀವನ ಮಾಡಬಹುದೆಂದು ತನ್ನ ಸಹ ವರ್ತಿಗಳಿಗೂ ತೋರಿಸಿದ್ದಾರೆ. ಅಧಿಕಾರಿಗಳು ಬರುತ್ತಾರೆ, ಹೋಗುತ್ತಾರೆ. ಆದರೆ ಪ್ರಮೋದ್ ರವರ ನೆನಪು ಉಡುಪಿ ಜನ ಮಾತ್ರ ಮರೆಯಲು ಸಾಧ್ಯವಿಲ್ಲ. ಕೇವಲ ಸಿಂಗಂ ಎಂಬ ಹೆಸರಿದ್ದರೆ ಸಾಲದು. ಸಿಂಗಂ ತರ ಕೆಲಸವೂ ಮಾಡ ಬೇಕಾಗುತ್ತದೆ.
ಕೊರೋನಾ ಸಮಯದಲ್ಲಿ, ಪರ್ಯಾಯ ಉತ್ಸವದಲ್ಲಿ, ಕಾನೂನು ಸುವ್ಯವಸ್ಥೆ ಮತ್ತು ಎಲ್ಲ ರೀತಿಯ ಅಕ್ರಮಕ್ಕೆ ಕಡಿವಾಣ ಹಾಕಿ ಜನರ ಪ್ರೀತಿ ಗಳಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ ಉಡುಪಿಯಲ್ಲಿ ಯಾವುದೇ ರೌಡಿಸಂ, ಮರ್ಡರ್ ನಡೆಯಲೇ ಇಲ್ಲ. ಕೆಲವು ಪುಡಿ ರೌಡಿಗಳಂತೂ ತಮ್ಮ ಮನೆ ಗಳನ್ನು ಬೇರೆ ಠಾಣೆಯ ವ್ಯಾಪ್ತಿಗೆ ಬದಲಾಯಿಸಿ ಕೊಂಡಿದ್ದಾರೆ.
ಸಾಮಾಜಿಕ ಜಾಲತಾಣ ವಾಟ್ಸ್ ಅಪ್ ನಲ್ಲಿಯಂತೂ ಪ್ರಮೋದ್ ಕುಮಾರ್ ಹವಾ ಜೋರಾಗಿದೆ. ಮನುಷ್ಯ ಎಷ್ಟು ವರ್ಷ ಬದುಕಿದ ಎಂಬುದಕ್ಕಿಂತ, ಹೇಗೆ ಬದುಕಿದ ಎಂಬುದೇ ಮುಖ್ಯ. ಭ್ರಷ್ಟಾಚಾರ ತುಂಬಿದ ವ್ಯವಸ್ಥೆಯಲ್ಲಿ ಕೆಲಸ ಮಾಡುವುದು ಒಂದು ಸವಾಲು. ಸವಾಲಿನ ನಡುವೆ ಕಾರ್ಯದಕ್ಷತೆ ಯನ್ನುಮೆರೆದ ಪ್ರಮೋದ್ ಕುಮಾರ್ ರವರಿಗೊಂದು ಸಲಾಂ.