ವ್ಯಕ್ತಗೊಂಡ ಪ್ರಮೋದಾಂತರಂಗ

ನನ್ನನ್ನು ಜನಪ್ರತಿನಿಧಿಯಾಗಿ ಆಯ್ಕೆ ಮಾಡಿದಾಗ ನನ್ನ ಮನಸ್ಸಿನಲ್ಲಿ ನಾನು ಅಧಿಕಾರಕ್ಕಾಗಿ ಕೆಲಸ ಮಾಡಬಾರದು, ನನ್ನ ಕೆಲಸ ಜನರಿಗೆ ಅಧಿಕಾರ ನೀಡುವಂತಿರಬೇಕು ಎಂಬುದಾಗಿತ್ತು. ನಾನು ಕೇವಲ ರಾಜಕೀಯ ಮಾಡುವುದಿದ್ದರೇ ಹೇಗೂ ಮಾಡಬಹುದು, ರಾಜಕೀಯ ವೃತ್ತಿಯಲ್ಲ ಅದೊಂದು ಪವಿತ್ರವಾದ ಜವಾಬ್ದಾರಿ.

ನಾನು ಜನಪ್ರತಿನಿಧಿಯಾಗಿದ್ದ ಸಂದರ್ಭ ನನ್ನ ಮೇಲೆ ಹಲವಾರು ಟೀಕೆಗಳನ್ನು ವಿರೋಧಿಗಳು ಮಾಡುತ್ತಿದ್ದರೂ ನಾನೆಂದು ಅದಕ್ಕೆ ಪ್ರತಿಕ್ರಿಯಿಸಲು ಇಚ್ಚಿಸಲಿಲ್ಲ ಕಾರಣ ನನ್ನ ಸಮಯ ಜನಪರ ಕಾರ್ಯಗಳಲ್ಲಿ ಇರಬೇಕೆ ಹೊರತು ಕೆಸರಿಗೆ ಕಲ್ಲು ಹೊಡೆಯುವುದರಲ್ಲಲ್ಲ ಎಂಬುದಾಗಿತ್ತು.

ನಾನು ಗ್ರಾಮೀಣ ಭಾಗಕ್ಕೆ ಮೊದಲ ಪ್ರಾಶಸ್ತ್ಯ ನೀಡಿ ಗ್ರಾಮಾಭಿವ್ರದ್ದಿಗೆ ಒತ್ತು ನೀಡಿದ್ದೆ.ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ದಿ, ಆರೋಗ್ಯ ಕೇಂದ್ರಗಳ ಅಭಿವೃದ್ದಿ, ಪಶು ಚಿಕಿತ್ಸಾಲಯಗಳ ಅಭಿವೃದ್ದಿ, ಕೆರೆಗಳ ಜೀರ್ಣೋದ್ದಾರ, ಕಿಂಡಿ ಅಣೆಕಟ್ಟುಗಳ ನಿರ್ಮಾಣ, ಸಂಪರ್ಕ ಸೇತುವೆಗಳ ನಿರ್ಮಾಣ, ಗ್ರಾಮೀಣ ಒಳರಸ್ತೆಗಳ ಕಾಂಕ್ರೀಟಿಕರಣ,

ಗ್ರಾಮೀಣ ಭಾಗದಲ್ಲಿದ್ದ ಲೋವೊಲ್ಟೇಜ್ ಸಮಸ್ಯೆ ಪರಿಹಾರಕ್ಕೆ ಟ್ರಾನ್ಫರ್ಮರ್ ಅಳವಡಿಕೆ, ಬಡವರ ಮನೆಗೆ ಉಚಿತ ವಿದ್ಯುತ್ ಸಂಪರ್ಕ,ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ನಿಲಯಗಳ ಸ್ಥಾಪನೆ, ಹೊಸ ಕೆಎಸ್ಆರ್ಟಿಸಿ ಡಿಪ್ಪೋ ಮತ್ತು ಬಸ್ ನಿಲ್ದಾಣ, ನರ್ಮ್ ಬಸ್ ಗಳ ಅನುಷ್ಠಾನ, ಕೃಷಿ ಡಿಪ್ಲೋಮಾ ಕಾಲೇಜು ಸ್ಥಾಪನೆ,ಹೊಸ ಆಂಬ್ಯುಲೆನ್ಸ್ ಮತ್ತು ಹೆಚ್ಚುವರಿ ಫೈರ್ ಇಂಜಿನ್ ವ್ಯವಸ್ಥೆ, ಇಂತಹ ಹತ್ತು ಹಲವು ಜನಪರ ಕಾರ್ಯಗಳ ಕ್ರೀಯಾ ಯೋಜನೆ ಮತ್ತು ಅನುಷ್ಟಾನಕ್ಕೆ ನಿರಂತರ ಕ್ರಮವಹಿಸಿದೆ.

ಸರಕಾರದ ಹತ್ತು ಹಲವು ಸವಲತ್ತು ಪಡೆಯಲು ಸಹಾಯವಾಗುವ ಬಿಪಿಎಲ್ ಕಾರ್ಡ್ ಗಳನ್ನು ವಿತರಿಸಿ ಇಂದು ಆಯುಷ್ಮಾನ್ ಕಾರ್ಡ್ ನಂತಹ ಸವಲತ್ತು ಪಡೆಯಲು ಅಂದು ನಾನು ಕ್ರಮವಹಿಸಿದ್ದೇನು ಎಂಬುದಕ್ಕೆ ನನಗೆ ಹೆಮ್ಮೆಯಿದೆ.

ಗುದ್ದಲಿ ಪೂಜೆ ಜನಪ್ರತಿನಿಧಿ ಎಂದು ಹೀಯಾಳಿಸಿ ಟೀಕೆ ಮಾಡಿದ ಜನರೆದುರು ನಿಂತ ನನ್ನ ಕನಸಿನ ಹಲವು ಯೋಜನೆಗಳಲ್ಲಿ ಉಪ್ಪೂರು ಗ್ರಾಮದಲ್ಲಿ ಸ್ಥಾಪಿಸಿದ ಸರಕಾರಿ ಜಿಟಿಟಿಸಿ ಕಾಲೇಜು. ಇದು ಸಂಪೂರ್ಣ ಉಚಿತವಾಗಿದ್ದು ಉಧ್ಯೋಗಾಧಾರಿತ ಕೌಶಲ್ಯಾಭಿವೃದ್ದಿ ತರಬೇತಿಗಳನ್ನು ನಡೆಸಲಾಗುತ್ತದೆ.

ನಾನು ನನ್ನ ಮಾತಿಗೆ ಬದ್ದನಾಗಿ ನಡೆದಿದ್ದೇನೆ. ನಾನು ಜನಪ್ರತಿನಿಧಿಯಾಗಿ ಜವಾಬ್ದಾರಿಯಿಂದ ಹಲವು ದೀರ್ಘಕಾಲಿಕ ಮುಂದಾಲೋಚನೆಯ ಯೋಜನೆಗಳನ್ನು ಅನುಷ್ಠಾನ ಮಾಡಿದ್ದೇನೆ.

– ಪ್ರಮೋದ್ ಮಧ್ವರಾಜ್

 
 
 
 
 
 
 
 
 

Leave a Reply