ನಮೋ ರವರನ್ನು 20/20/20 ಎಂದು ಕರೆಯಲು ಇಷ್ಟ ಪಡುತ್ತೇನೆ ~ಪ್ರಮೋದ್‌ ಮಧ್ವರಾಜ್

ಬೆಂಗಳೂರು: ದೇಶದ ಪ್ರಧಾನಿ ನರೇಂದ್ರ ಮೋದಿಯವರ ಕೈಗಳನ್ನು ಬಲಪಡಿಸುವುದು ಇಡೀ ದೇಶದ ಜನರ ಜವಾಬ್ದಾರಿಯಾಗಿದೆ ಎಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

ಅವರು ಬೆಂಗಳೂರಿನಲ್ಲಿ ಬಿಜೆಪಿ ಪಕ್ಷ ಸೇರ್ಪಡೆಗೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಇಂದು 130 ಕೋಟಿ ಜನರ ದೇಶ ಒಂದಾಗಿ ನಡೆಯಬೇಕಾದರೆ ದೇಶಕ್ಕೆ ಒಂದು ಪ್ರಬಲವಾದ ನಾಯಕತ್ವ ಮತ್ತು ಪಕ್ಷ ಅಗತ್ಯವಿದೆ. ಇಂದು ನಿಸ್ಸಂದೇಹವಾಗಿ ಅತ್ಯಂತ ಪ್ರಬಲವಾದ ನಾಯಕರು ಈ ದೇಶದಲ್ಲಿ ಇದ್ದರೆ ಅದು ನರೇಂದ್ರ ಮೋದಿಯವರು. ನಾನು ನರೇಂದ್ರ ಮೋದಿಯವರನ್ನು 20-20-20 ಎಂದು ಕರೆಯಲು ಇಷ್ಟಪಡುತ್ತೇನೆ. ನಮ್ಮ ಬಾಯಲ್ಲಿ ಯಾವತ್ತು ಇರುವುದು 20-20 ಮಾತ್ರ ಆದರೆ ನಾನು ಇವತ್ತು 20-20-20 ಎಂದು ಹೇಳುತ್ತೇನೆ. ಏಕೆಂದರೆ 20 ವರ್ಷ ಅವರ ಜೀವನವನ್ನು ಆರ್‌ ಎಸ್‌ ಎಸ್‌ ನಲ್ಲಿ ಕಳೆದು ಜನಸಾಮಾನ್ಯರ ಹಾಗೂ ತಳಮಟ್ಟದ ಸಮಸ್ಯೆಗಳ ಅನುಭವ ಅವರು ಪಡೆದುಕೊಂಡರು.

ಮತ್ತೊಂದು 20 ವರ್ಷ ಅವರು ಭಾರತೀಯ ಜನತಾ ಪಕ್ಷದ ನೇತೃತ್ವವನ್ನು ವಹಿಸಿ ಪಕ್ಷವನ್ನು ಮತ್ತು ಚುನಾವಣೆಯನ್ನು ಹೇಗೆ ನಡೆಸಬೇಕು ಎನ್ನುವುದನ್ನು ತೋರಿಸಿದರು. ಮತ್ತೊಂದು 20 ವರ್ಷ ಮುಖ್ಯಮಂತ್ರಿಯಾಗಿ ಪ್ರಧಾನಿಯಾಗಿ ಆಡಳಿತವನ್ನು ಹೇಗೆ ಮಾಡಬೇಕು ಎನ್ನುವುದನ್ನು ತೋರಿಸಿದ್ದಾರೆ. ಅಂತಹ ಮೋದಿಯವರ ಕೈಗಳನ್ನು ಬಲಪಡಿಸುವುದು ಇಡೀ ದೇಶದ ಜನರ ಜವಾಬ್ದಾರಿಯಾಗಿದೆ ಎಂದರು.

ನಾನು ಪಕ್ಷವನ್ನು ಸೇರುವಾಗ ಯಾವುದೇ ನೀರಿಕ್ಷೆಯನ್ನು ಇಟ್ಟುಕೊಂಡಿಲ್ಲ ಯಾಕಂದ್ರೆ ನನ್ನ ಭಾಗದಲ್ಲಿ ಯಾವುದೇ ಜಾಗ ಕೂಡ ಖಾಲಿ ಇಲ್ಲ ಪಕ್ಷಕ್ಕಾಗಿ ಮತ್ತು ರಾಜ್ಯಕ್ಕಾಗಿ ದುಡಿಯುತ್ತೇನೆ. ಪಕ್ಷ ಯಾವ ಅವಕಾಶ ಮತ್ತು ಜವಾಬ್ದಾರಿಯನ್ನು ನೀಡುತ್ತೋ ಅದರಂತೆ ಕೆಲಸ ಮಾಡಿಕೊಂಡು ಹೋಗುತ್ತೇನೆ. 2023 ರಲ್ಲಿ ಮರಳಿ ರಾಜ್ಯದಲ್ಲಿ 150 ಕ್ಕೂ ಅಧಿಕ ಸ್ಥಾನಗಳೊಂದಿಗೆ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರುವಲ್ಲಿ ನನ್ನ ಅಳಿಲ ಸೇವೆಯನ್ನು ಮಾಡಲು ಈ ಪಕ್ಷಕ್ಕೆ ಸೇರಿದ್ದೇನೆ ಎಂದರು.

 
 
 
 
 
 
 
 
 
 
 

Leave a Reply