ಪಟೇಲ ಕೆ. ಪ್ರಭಾಕರ ಶೆಟ್ಟರಿಂದ ವಿದ್ಯಾಸಂಸ್ಥೆಗಳಿಗೆ ನಿಧಿ ಸಮರ್ಪಣೆ

ಸದಾ ಸಾಮಾಜಿಕ-ಸಾಂಸ್ಕøತಿಕ ಕಾರ್ಯಗಳಿಗೆ ಸ್ಪಂದಿಸುತ್ತಾ ಬಂದ ಕರ್ಮಯೋಗಿ, ಆದರ್ಶ ಕೃಷಿಕ ಕೆ. ಪ್ರಭಾಕರ ಶೆಟ್ಟಿಯವರು ತಾವು ಮತ್ತು ತಮ್ಮ ಮಕ್ಕಳು ಕಲಿತ ಶಾಲೆಗಳಾದ ವಿದ್ಯಾಸಮುದ್ರತೀರ್ಥ ಪ್ರೌಢಶಾಲೆ ಕಿದಿಯೂರು, ಸೈಂಟ್ ಕ್ಸೇವಿಯರ್ ಪ್ರೌಢಶಾಲೆ ಉದ್ಯಾವರ, ಕ್ರಿಶ್ಚಿಯನ್ ಪ್ರೌಢಶಾಲೆ ಉಡುಪಿ ಅಲ್ಲದೇ ಆಡಳಿತ ಮಂಡಳಿ ಕೈಯಿಂದ ಶಿಕ್ಷಕರ ಸಂಭಾವನೆ ಕೊಟ್ಟು ನಡೆಸುತ್ತಿರುವ ಸರಕಾರಿ ಪ್ರಾಥಮಿಕ ಶಾಲೆ ಕಡೆಕಾರು, ಹಿಂದು ಪ್ರಾಥಮಿಕ ಶಾಲೆ ಉದ್ಯಾವರ ವಿದ್ಯಾಸಂಸ್ಥೆಗಳಿಗೆ ಒಂದೊಂದು ಮೊತ್ತ ನೀಡುತ್ತಾ ನವೆಂಬರ್ 24, 2022ನ್ನು ಸಾರ್ಥಕಗೊಳಿಸಿಕೊಂಡರು. ಯಕ್ಷಗಾನ ಕಲಾರಂಗದ ಕಛೇರಿಗೆ ಬಂದು ವಿದ್ಯಾಪೋಷಕ್‍ಗೆ ರೂಪಾಯಿ 50,000/- ಮೊತ್ತ ನೀಡಿ 87ರ ಹರೆಯದ ಹಿರಿಯ ಜೀವ ಎಲ್ಲರಿಗೆ ಮಾದರಿಯಾದರು. ಶಿಕ್ಷಣದ ಕುರಿತು ಅವರಿಗಿರುವ ಕಾಳಜಿಯನ್ನು ಗೌರವಿಸಿ ಯಕ್ಷಗಾನ ಕಲಾರಂಗದಲ್ಲಿ ಅವರನ್ನು ಶಾಲು ಸ್ಮರಣಿಕೆಯೊಂದಿಗೆ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಮುರಲಿ ಕಡೆಕಾರ್, ಪ್ರೊ. ನಾರಾಯಣ ಎಂ. ಹೆಗಡೆ, ಮನೋಹರ ಕೆ. ಹಾಗೂ ಅನಂತರಾಜ ಉಪಾಧ್ಯ ಉಪಸ್ಥಿತರಿದ್ದರು.

 
 
 
 
 
 
 

Leave a Reply