ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಪೂರಕ –  ಪ್ರದೀಪ್ ಕುಮಾರ್

“ ಪ್ರಸಕ್ತ ವಿದ್ಯಮಾನಗಳಿಂದ ನೋಡುವಾಗ ವಿದ್ಯಾರ್ಥಿಗಳನ್ನು ವೃತ್ತಿ ಕೌಶಲಾಧಾರಿತ  ಶಿಕ್ಷಣದ ಅಗತ್ಯವಿದೆ. ಪದವಿ ಶಿಕ್ಷಣ ಮುಗಿಸಿದ ಬಳಿಕ ವಿದ್ಯಾರ್ಥಿಗಳು ಕೇವಲ ಸರ್ಟಿಫಿಕೇಟ್ ಪಡೆದುಕೊಂಡರೆ ಸಾಲದು.
ಸೂಕ್ತ ಉದ್ಯೋಗವನ್ನು ಪಡೆಯಲು ಹಾಗೂ ಉದ್ಯೋಗದಾತನಾಗಲು ಅರ್ಹತೆಯನ್ನು ಹೊಂದಿರುವ೦ತೆ ಮಾಡಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕೇಂದ್ರ ಸರಕಾರದ ಕ್ರಾಂತಿಕಾರಕ ಹೆಜ್ಜೆಯಾಗಿದೆ” ಎಂದು ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಗೌರವಾನ್ವಿತ ಕಾರ್ಯದರ್ಶಿ, ಖ್ಯಾತ ನ್ಯಾಯವಾದಿ ಪ್ರದೀಪ್ ಕುಮಾರ್ ರವರು ಹೇಳಿದರು.

ಉಡುಪಿ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಪೂರ್ವ ಮಾಹಿತಿ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ಲಾರ್ಡ್ ಮೆಕಾಲೆ ಪ್ರಣೀತ ಶಿಕ್ಷಣವು ಭಾರತೀಯ ಸಂಸ್ಕೃತಿಗೆ ಮಾರಕವಾಗಿದೆ. ಬ್ರಿಟಿಷರು ಭಾರತವನ್ನು ವಶಪಡಿಸಿಕೊಳ್ಳಬೇಕಾದರೆ ಇಲ್ಲಿಯ ಸಂಸ್ಕೃತಿ ಮತ್ತು ಸಂಸ್ಕಾರಯುತ ಶಿಕ್ಷಣವನ್ನು ನಾಶ ಪಡಿಸಬೇಕಾಗಿತ್ತು.
 
ಇದಕ್ಕೆ ಮೆಕಾಲೆ ಶಿಕ್ಷಣ ನೀತಿಯಾಗಿತ್ತು. ಇಂದು ಪಾಶ್ಚಾತ್ಯ ಸಂಸ್ಕೃತಿಯ ಶಿಕ್ಷಣದಿಂದ ಮುಕ್ತಗೊಳಿಸಲು ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅಗತ್ಯ ಶೈಕ್ಷಣಿಕ ನೀತಿಯನ್ನು ಅಳವಡಿಸಿಕೊಳ್ಳುವ ಅನಿವಾರ್ಯತೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬೇಕಾಗಿತ್ತು.
ಇದನ್ನು ಮನಗಂಡು ನೂತನ ಶಿಕ್ಷಣ ನೀತಿಯಿಂದ ಜಾಗತಿಕವಾಗಿ ಭಾರತವನ್ನು ಜ್ಞಾನದ ಜಗದ್ಗುರುವನ್ನಾಗಿಸಲು ಮೋದಿಯವರ ಶೈಕ್ಷಣಿಕ ನೀತಿಯಾಗಿದೆ ಎಂದು ಹೇಳಿದರು.

ಕಾಲೇಜಿನ  ಪ್ರಾಚಾರ್ಯರಾದ ಡಾ ಸುಕನ್ಯಾ ಮೇರಿ ಜೆ ಅಧ್ಯಕ್ಷತೆಯನ್ನು ವಹಿಸಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣದ ಶಿಸ್ತನ್ನು ತಿಳಿಸಿ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳಾದ ಪೂರ್ಣರಾಜ್ ಹಾಗೂ ನಾಗೇಂದ್ರರವರ  ಸಹಕಾರದಿಂದ ರೂಪಿಸಿದ ಪರಿಷ್ಕೃತ ಜಾಲತಾಣವನ್ನು  ಲೋಕಾರ್ಪಣೆ ಮಾಡಲಾಯಿತು.

ಆಂಗ್ಲ ಭಾಷಾ ಸಹಾಯಕ ಪ್ರಾಧ್ಯಾಪಕ ಸಂದೀಪ್ ಕುಮಾರ್ ಸತ್ಯಮೂರ್ತಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಪ್ರಾಸ್ತಾವಿಕ ಮಾತು ಗಳನ್ನಾಡಿದರು. ಕಾಲೇಜಿನ ಉಪ ಪ್ರಾಂಶುಪಾಲ ವಿನಾಯಕ ಪೈ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು.
ಕನ್ನಡ ಉಪನ್ಯಾಸಕ ರಮಾನಂದ ರಾವ್ ಹಾಗೂ ಶ್ರೀಲತಾ ಆಚಾರ್ಯ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಂಸ್ಕೃತ ಪ್ರಾಧ್ಯಾಪಕ ಡಾ. ರಾಮಕೃಷ್ಣ ಉಡುಪ ವಂದಿಸಿದರು. ಸಭಾಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗೆ ಪೂರ್ವಮಾಹಿತಿ ಕಾರ್ಯಕ್ರಮವು ನಡೆಯಿತು.
 
 
 
 
 
 
 
 
 
 
 

Leave a Reply