ವಿಶ್ವ ಏಡ್ಸ್ ದಿನಾಚರಣೆ: ಜಾಗೃತಿ ಕಾರ್ಯಕ್ರಮ

ಪೂರ್ಣಪ್ರಜ್ಞ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ಘಟಕ- ೧ ಮತ್ತು ಘಟಕ-೨ ರ ವತಿಯಿಂದ ವಿಶ್ವ ಏಡ್ಸ್ ದಿನಾಚರಣೆಯ ಪ್ರಯುಕ್ತ ಎಚ್.ಐ.ವಿ./ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಕೆ.ಎಂ.ಸಿ.
ಮಣಿಪಾಲದ ಕಮ್ಯುನಿಟಿ ಮೆಡಿಸಿನ್ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಸಂಜಯ್ ಕಿಣಿ ಅವರು ಆಗಮಿಸಿ ಏಡ್ಸ್ ರೋಗದ ಇತಿಹಾಸ, ಎಚ್.ಐ.ವಿ. ರೋಗವು ಹೇಗೆ ಹರಡುತ್ತದೆ, ಹೇಗೆ ಹರಡುವುದಿಲ್ಲ ಎಂದು ತಿಳಿಸಿಕೊಡುತ್ತ ಈ ಏಡ್ಸ್ ರೋಗವನ್ನು ತಡೆಗಟ್ಟುಬಹುದಾದ ಸುರಕ್ಷತಾ ಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಆಂತರಿಕ ಗುಣಮಟ್ಟ ಖಾತರಿ ಘಟಕದ ಸಂಯೋಜಕರಾದ ಡಾ. ವಿನಯ್‌ಕುಮಾರ್ ಡಿ., ಎನ್.ಎಸ್.ಎಸ್. ಯೋಜನಾಧಿಕಾರಿಗಳಾದ ಸಂದೀಪ್ ಶೆಟ್ಟಿ, ಶ್ರೀಮತಿ ಸುಪರ್ಣ ಸಹಾಯಕ ಯೋಜನಾಧಿಕಾರಿಗಳಾದ ಕುಮಾರಿ ಸ್ವಾತಿ ಮತ್ತು ಡಾ.
ನಾಗರಾಜ ಜಿ.ಪಿ. ಅವರು ಉಪಸ್ಥಿತರಿದ್ದರು. ಕುಮಾರಿ ಸ್ನೇಹಾರವರು ಕಾರ್ಯಕ್ರಮವನ್ನು ನಿರೂಪಿಸಿ, ರಿಶಬ್‌ರವರು ಸ್ವಾಗತಿಸಿದರು ಮತ್ತು ಕುಮಾರಿ ನಂದಿನಿಯವರು ವಂದನಾರ್ಪಣೆಯನ್ನು ನೆರವೇರಿಸಿದರು.

 
 
 
 
 
 
 
 
 
 
 

Leave a Reply