ಉಡುಪಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ

ಶಿವರಾಮ ಕಾರಂತ, ಕಾರ್ನಾಡು ಸದಾಶಿವರಾವ್, ವಿಭುದೇಶ ತೀರ್ಥ ಸ್ವಾಮೀಜಿ, ರಾಕಿ ಫೆರ್ನಾಂಡಿಸ್ ಹೀಗೆ ಅನೇಕರ ಹೆಸರನ್ನು ಮತ್ತು ಆ ಕಾಲದ ಚಳುವಳಿಯ ತೀವ್ರತೆಯನ್ನು ಡಾಕ್ಟರ್ ರಾಮದಾಸ ಪ್ರಭು ಸಹಾಯಕ ಪ್ರಾಧ್ಯಾಪಕರು ಡಾ ಜಿ ಎಸ್ ಡಬ್ಲ್ಯೂ ಜಿ ಎಫ್ ಕಾಲೇಜು ಅಜ್ಜರ ಕಾಡು ಮಾತನಾಡಿದರು. ಇವರು ಆಜಾಧಿ ಕಾ ಅಮೃತ ಮಹೋತ್ಸವದ ಅಂಗವಾಗಿ ಪೂರ್ಣಪ್ರಜ್ಞ ಕಾಲೇಜು ಉಡುಪಿಯಲ್ಲಿ ಇತಿಹಾಸ ವಿಭಾಗದ ಆಶ್ರಯದಲ್ಲಿ ಗುರುವಾರ ನಡೆದ ಉಡುಪಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಇತಿಹಾಸ ವಿಭಾಗದ ಮುಖ್ಯಸ್ಥರಾದ ಪಾರ್ಶ್ವನಾಥ ಇವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಮಾತನಾಡುತ್ತಾ ನಾವು ಗಡಿ ಕಾಯುವ ಸೈನಿಕರಾಗಲು ಸಾಧ್ಯವಾಗದಿದ್ದರೂ ರಾಷ್ಟ್ರ ಕಟ್ಟುವ ಕಟ್ಟುವ ಸೈನಿಕರಾಗೋಣ ಎಂದರು. ಹಿರಿಯ ರಾಜಕೀಯ ಶಾಸ್ತ್ರ ಉಪನ್ಯಾಸಕರಾದ ನಿತ್ಯಾನಂದ ಇವರು ಅತಿಥಿಗಳನ್ನು ಗೌರವಿಸಿದರು. ಪ್ರಾಂಶುಪಾಲರಾದ ಡಾಕ್ಟರ್ ರಾಘವೇಂದ್ರ ಎ ಇವರು ಸಂಪನ್ಮೂಲ ವ್ಯಕ್ತಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿಯಾದ ವಿಂಧ್ಯ ಆಚಾರ್ಯ ಇವರು ಕಾರ್ಯಕ್ರಮ ನಿರೂಪಿಸಿದರು. ದ್ವಿತೀಯ ಬಿಎ ವಿದ್ಯಾರ್ಥಿ ಅನಿರುದ್ಧ ಪ್ರಾರ್ಥನೆಯನ್ನು ನೆರವೇರಿಸಿದರು. ಇತಿಹಾಸ ವಿಭಾಗದ ಸುಕನ್ಯಾ ಇವರು ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ತ್ರತಿಯ ಬಿಎ ವಿದ್ಯಾರ್ಥಿನಿ ನಮಿತಾ ಎಲ್ಲರನ್ನೂ ಅಭಿನಂದಿಸಿದರು. ಐಕ್ಯುಎಸಿ ಕಾರ್ಡಿನೇಟರ್ ಡಾಕ್ಟರ್ ವಿನಯ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply