Janardhan Kodavoor/ Team KaravaliXpress
24.6 C
Udupi
Sunday, September 25, 2022
Sathyanatha Stores Brahmavara

ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಸಂಸ್ಕೃತ ವಿಭಾಗದ ವತಿಯಿಂದ ವಿಶೇಷ ಉಪನ್ಯಾಸ

ಪ್ರಾಚೀನ ಭಾರತದ ಋಷಿಮುನಿಗಳ ಜ್ಞಾನಪರಂಪರೆಯು ಕೇವಲ ಜಪ, ಧ್ಯಾನ,ಅನುಷ್ಠಾನ, ಯೋಗ ಮೊದಲಾದ ವಿಷಯದಲ್ಲಿ ಮಾತ್ರ ಸೀಮಿತವಾದದಲ್ಲ. ವಿಜ್ಞಾನ ಕ್ಷೇತ್ರದಲ್ಲಿಯೂ ಅಪಾರವಾಗಿತ್ತು. ಕಲ್ಪ, ಮನ್ವಂತರ, ಯುಗ‌, ಸಂವತ್ಸರಾದಿ ಕಾಲದಿಂದ ಅತ್ಯಂತ ಕಡಿಮೆಯ ತ್ರುಟೀ ಯವರೆಗೂ ನಿಖರವಾಗಿ ಜ್ಞಾನವುಳ್ಳವರಾಗಿದ್ದರು. ಗ್ರಹಣಾದಿ ವಿಚಾರಗಳ‌ ಕುರಿತು, ಭೂಮಿಯ ಗುರುತ್ವಾಕರ್ಷಣೆ, ಖಗೋಳೀಯ ವಿಷಯಗಳೇ ಮೊದಲಾದ ವಿಷಯಗಳಲ್ಲಿ ತಲಸ್ಪರ್ಷಿ ವಿದ್ವತ್ ಪಡೆದವರಾಗಿದ್ದರು. ಪ್ರಾಯೋಗಿಕವಾಗಿ ಆಚರಣೆಗೆ ತಂದರು. ಇಂತಹ ವಿಚಾರಗಳನ್ನು ತಿಳಿದು ಅದರಲ್ಲಿ ಆಸಕ್ತಿ ಹೊಂದಿ ನಮ್ಮ ದೇಶದ ಕೀರ್ತಿ ಯನ್ನು ಎತ್ತರಕ್ಕೆ ಏರಿಸುವಲ್ಲಿ ವಿದ್ಯಾರ್ಥಿಗಳು ಸಫಲರಾಗಬೇಕೆಂದು ಪ್ರಜ್ಞಾಪ್ರವಾಹ ದ ದಕ್ಷಿಣ ಮಧ್ಯಕ್ಷೇತ್ರೀಯ ಸಂಯೋಜಕ ರಾದ ಶ್ರೀಯುತ ರಘುನಂದನ್ ಜಿಯವರು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಸಂಸ್ಕೃತ ವಿಭಾಗದ ವತಿಯಿಂದ ಜರುಗಿದ ” ಪ್ರಾಚೀನ ಭಾರತದ ವೈಜ್ಞಾನಿಕ ಸಾಧನೆಗಳು” ಎಂಬ ವಿಷಯದ ಕುರಿತು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಘವೇಂದ್ರ ಎ ಇವರು ವಹಿಸಿದ್ದರು. ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ. ರಮೇಶ್. ಟಿ.ಎಸ್ ಪ್ರಾಸ್ತಾವಿಕ ಮಾತಗಳನ್ನಾಡಿ ಸ್ವಾಗತಿಸಿದರು. ಸಂಸ್ಕೃತ ಉಪನ್ಯಾಸಕ ಡಾ. ಆನಂದ ಆಚಾರ್ಯ ಇವರು ಕಾರ್ಯಕ್ರಮ ನಿರ್ವಹಿಸಿ ಧನ್ಯವಾದವಿತ್ತರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!