ಮಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ಪೂರ್ಣಪ್ರಜ್ಞ ಕಾಲೇಜು, ಉಡುಪಿಯ ರಾಷ್ಟ್ರೀಯ ಸೇವಾಯೋಜನೆಯ ಘಟಕವು 18.05.2022 ರಿಂದ 24.05.2022 ರ ವರೆಗೆ ವಾರ್ಷಿಕ ಶಿಬಿರವನ್ನು ನೀಲಾವರ ಗೋಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಶಿಬಿರದ ಸಮಾರೋಪ ಸಮಾರಂಭದಲ್ಲಿ ಬ್ರಹ್ಮಾವರ ತಾಲೂಕಿನ ತಹಶೀಲ್ದಾರ್ ರಾಜಶೇಖರ ಮೂರ್ತಿ, ಉಡುಪಿ ಜಿಲ್ಲೆಯ ಎನ್.ಎಸ್.ಎಸ್. ನೋಡಲ್ ಅಧಿಕಾರಿಗಳಾದ ಪ್ರವೀಣ್ ಶೆಟ್ಟಿ, ಬ್ರಹ್ಮಾವರ ತಾಲೂಕು ಪಂಚಾಯತ್ನ ಮಾಜಿ ಅಧ್ಯಕ್ಷರಾದ ಸುಧೀರ್ಕುಮಾರ್ ಶೆಟ್ಟಿ ಅವರು ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಘವೇಂದ್ರ ಎ. ಅವರು ವಹಿಸಿದ್ದರು. ರಾಜಶೇಖರ್ ಮೂರ್ತಿ ಅವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ ಇಂದಿನ ರಾಜಕೀಯದಲ್ಲಿ ಯುವಕರು ಪಾಲ್ಗೊಳ್ಳಲು ಹಿಂದೆ ಸರಿಯುತ್ತಿದ್ದಾರೆ. ರಾಜಕೀಯದಲ್ಲಿ ಒಲವು ತೋರಿಸಬೇಕು ಎಂದು ತಿಳಿಸಿದರು. ಯುವಕರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಲು ಪ್ರತ್ಯೇಕವಾದಂತಹ ವ್ಯವಸ್ಥೆಯ ಅವಶ್ಯಕತೆ ಇದೆ ಎಂಬುದಾಗಿ ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಘವೇಂದ್ರ ಎ. ಅವರು ಮಾತನಾಡುತ್ತ ಶಿಬಿರವನ್ನು ಮಾಡುವುದಕ್ಕಿಂತ ಹಿಂದೆ ನಾವು ಕೆಲವು ಉದ್ದೇಶಗಳನ್ನು ಇಟ್ಟುಕೊಂಡಿದ್ದೆವು. ಆ ಉದ್ದೇಶಗಳನ್ನು ನಾವು ಸಾಧಿಸಿದ್ದೇವೆ. ಸುಮಾರು ಎರಡು ಎಕರೆಗೆ ಜೋಳದ ಕಡಿಯನ್ನು ನಾಟಿ ಮಾಡಲಾಗಿದೆ. ಗೋಶಾಲೆಯ ಇಡೀ ಆವರಣವನ್ನೂ ಸ್ವಚ್ಛಗೊಳಿಸಲಾಗಿದೆ ಇದಲ್ಲದೆ ಶಿಬಿರಾರ್ಥಿಗಳು ಗ್ರಾಮ ಸಮೀಕ್ಷೆಯ ಮೂಲಕ ಗ್ರಾಮೀಣ ಜನರ ಬದುಕನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಯೋಜನಾಧಿಕಾರಿಗಳಾದ ಶ್ರೀಮತಿ ಸುಪರ್ಣ ಇವರು ಸ್ವಾಗತಿಸಿದರು, ಶ್ರೀ ಸಂದೀಪ್ ಇವರು ವಂದಿಸಿದರು. ಸಹಯೋಜನಾಧಿಕಾರಿಗಳಾದ ಡಾ. ನಾಗರಾಜ ಜಿ.ಪಿ. ಹಾಗೂ ಘಟಕ- ೧ ಮತ್ತು ಘಟಕ- ೨ ರ ನಾಯಕ, ನಾಯಕಿಯರು ಉಪಸ್ಥಿತರಿದ್ದರು.
KaravaliXpress.com - ವಿಶ್ವಾಸದ ನಡೆ
ಬದಲಾವಣೆ ಜಗದ ನಿಯಮ. ಅದಕ್ಕೆ ಮಾಧ್ಯಮ ಲೋಕವೂ ಹೊರತಲ್ಲ.
ಪತ್ರಿಕಾರಂಗದಲ್ಲಿ ಸುಮಾರು ಎರಡು ದಶಕಗಳ ಅನುಭವ, ಸಹೃದಯರ ಒಡನಾಟದ ಅನುಭವಾಮೃತದಿಂದ ಮೊಳಕೆಯೊಡೆದಿದೆ ಈ ವೆಬ್ ಸುದ್ದಿಜಾಲ.