ಉಡುಪಿಯ ಹಲವು ಕಡೆ (ನ.23 ) ವಿದ್ಯುತ್ ಕಡಿತ 

ಉಡುಪಿ:  ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕೆಲಸಗಳು ನಡೆಯುತ್ತಿರುವ ಕಾರಣ ನ.23ರಂದು ಕೆಲವು ಸ್ಥಳಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ನ.23 ರಂದು ವಿದ್ಯುತ್‌ ಉಪಕೇಂದ್ರ ಮತ್ತು ಬೆಳ್ಮಣ್ಣ್‌ ಉಪಕೇಂದ್ರದಿಂದ ಹೊರಡುವ ಫೀಡರ್‌ ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನಿಟ್ಟೆ, ನಿಟ್ಟೆ ಕಾಲೇಜು, ನಿಟ್ಟೆ ವಾಟರ್‌ ಸಪ್ಲೈ, ಬೋರ್ಗಲ್‌ ಗುಡ್ಡೆ, ದೂಪದಕಟ್ಟೆ, ಕೆಮ್ಮಣ್ಣು, ನೆಲ್ಲಿಗುಡ್ಡೆ, ನಂದಳಿಕೆ ಕೆದಿಂಜೆ, ಮಾವಿನಕಟ್ಟೆ, ಪದವುಕೊರಜೆ, ಮುಂಡ್ಕೂರು, ಕಾಂಜರಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್‌ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ.

ಕುಂದಾಪುರದ (Power cut in Udupi) ಅಂಪಾರು, ಹಳ್ನಾಡು, ಕಾವ್ರಾಡಿ, ಶಂಕರನಾರಾಯಣ, ಕೋಣಿ, ಬಳ್ಕೂರು, ಕಂಡ್ಲೂರು, ಮೂಡ್ಲಕಟ್ಟೆ, ಕುಂದಾಪುರ ಪುರಸಭೆ, ಬಸ್ರೂರು, ಆನಗಳ್ಳಿ, ಮತ್ತು ಕಂದಾವರ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶ, ಮಣಿಪಾಲ, ನಿಟ್ಟೂರು, ಬ್ರಹ್ಮಾವರ, ಕುಂಜಿಬೆಟ್ಟು, ಮಲ್ಪೆ, ಶಿರ್ವ, ಉಡುಪಿ ತಾಲೂಕು, ಮಣಿಪಾಲ ಉಪ ವಿಭಾಗ, ಬ್ರಹ್ಮಾವರ ತಾಲೂಕು, ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 10 ರಿಂದ ಸಂಜೆ 5 ರವರೆಗೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಮೂಡುಬೆಳ್ಳೆ, ಮಣಿಪುರ, ಮರ್ಣೆ, ಕಟ್ಟಿಂಗೇರಿ, ಕೆಮ್ತೂರು, ಕೊರಂಗ್ರಪಾಡಿ, ಮಾರ್ಪಳ್ಳಿ, ಕುಕ್ಕಿಕಟ್ಟೆ, ಉದ್ಯಾವರ-2, ಕಟಪಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ, ಮಟಪಾಡಿ, ಹೇರೂರು, ಕೊಳಲಗಿರಿ, ಚೇರ್ಕಾಡಿ, ನಿಟ್ಟೂರು, ಕಲ್ಯಾಣಪುರ, ಹೆಗ್ಗುಂಜೆ, ಉಪ್ಪೂರು, ಮಾಯಾಡಿ, ಸಾಲ್ಮರ, ಕುದ್ರುಬೆಟ್ಟು, ಕೆ.ಜಿ.ರೋಡ್‌, ಕೋಟೆರೋಡ್‌, ನಿಡಂಬಳ್ಳಿ, ಉಗ್ಗೇಲ್‌ ಬೆಟ್ಟು, ಜಾತಬೆಟ್ಟು, ಹಾವಂಜೆ, ಆದರ್ಶನಗರ, ಕೀರ್ತಿನಗರ, ಸಾಲಿಕೇರಿ, ಬಿರ್ತಿ, ಹೊನ್ನಾಳ, ಕುಕ್ಕುಡೆ, ಹೇರೂರು, ಚಾಂತಾರು, ಕುಂಜಾಲು, ಆರೂರು, ಚೇರ್ಕಾಡಿ, ಹಲುವಳ್ಳಿ, ಪಡುನೀಲಾವರ, ಎಳ್ಳಂಪಳ್ಳಿ, ತಡೆಕಲ್ಲು, ಪ್ರಗತಿನಗರ, ಜಾರ್ಜೆಡ್ಡು, ಕೆ.ಕೆ.ಪಾರ್ಮ್ಸ್‌, ಸಂತೆಕಟ್ಟೆ, ನೇಜಾರು, ಮೂಡುತೋನ್ಸೆ, ಕೋಡಿಬೇಂಗ್ರೆ, ಬಡಾನಿಡಿಯೂರು, ಕಾಡೂರು, ಪೆಜಮಂಗೂರು, ಕೊಕ್ಕರ್ಣೆ, ಕೆಂಜೂರು, ಶಿರೂರು, ಹಿಲಿಯಾಣ, ನಂಚಾರು, ಮುದ್ದೂರು, ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 9:30 ರಿಂದ 5 :30 ರವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ.

ಮಣಿಪಾಲ ಶಿರ್ವ ಲೈನ್ ನಲ್ಲಿ ಮತ್ತು ಶಿರ್ವ ಎಂಯುಎಸ್‌ಎಸ್ ನ ಉಪಕೇಂದ್ರದಿಂದ ಹೊರಡುವ ಎಲ್ಲಾ ಫೀಡರ್‌ ಮಾರ್ಗಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5 :30 ರ ವರೆಗೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

 
 
 
 
 
 
 
 
 
 
 

Leave a Reply