ದೇಶ ವಿಭಜನೆಯ ಭಯಾನಕ ದಿನಗಳ ‌ನೆನಪಿನ ಭಿತ್ತಿ ಚಿತ್ರ ಮಾಲೆ ಉದ್ಘಾಟನೆ:

ದೇಶ ವಿಭಜನೆ ಆಗುವಾಗ ಆದ ನೋವು ಕಷ್ಟ ಯಾತನೆಗಳ ಭೀಕರತೆಯನ್ನು ಜನರಿಗೆ ಮನದಟ್ಟು ಮಾಡಿಸಿ ಮುಂದೆ ಯಾರೂ ಕೂಡಾ ಜಾತಿ‌ಮತ ಅಥವಾ ಇನ್ನಾವುದೇ ಬೇಡಿಕೆಗಳನ್ನಿಟ್ಟುಕೊಂಡು ದೇಶ ವಿಭಜನೆಯಂತಹ ದುಸ್ಸಾಹಸಕ್ಕೆ ಮನ ಮಾಡಬಾರದು. ನಾವೆಲ್ಲ ಇಂದು ನಡೆದ ಘಟನೆಗಳನ್ನು ನಾಳೆ ಮರೆಯುವ ಕಾಲಘಟ್ಟದಲ್ಲಿ ಇರುವಾಗ ಸುಮಾರು ಎಪ್ಪತ್ತೈದು ವರುಷಗಳ ಹಿಂದೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಭಾರತ ವಿಭಜನೆ ಆದಾಗ ಲಕ್ಷಾಂತರ ಜನರ ಕಷ್ಟ ಯಾತನೆಗಳನ್ನು ಭಿತ್ತಿ ಚಿತ್ರಗಳ ಮೂಲಕ ಇನ್ನೊಮ್ಮೆ ನಮ್ಮ ಕಣ್ಣ ಮುಂದೆ ತಂದು ಕೊಟ್ಟಿದ್ದು ಇದನ್ನು ಎಲ್ಲರೂ ನೋಡಿ ಅರ್ಥೈಸಿಕೊಂಡು ಇನ್ನು ಮುಂದೆ ಇಂತಹ ಭಯಾನಕ ದೃಶ್ಯಗಳು ನಡೆಯದಂತೆ ಜಾಗೃತೆ ವಹಿಸಿ ಒಗ್ಗಟ್ಟಿನಿಂದ ಜೀವನ ನಡೆಸಬೇಕು ಎಂದು ನಿವೃತ್ತ ಯೋಧ ಕೃಷ್ಣ ಶೆಟ್ಟಿಬೆಟ್ಟು ಕರೆ ನೀಡಿದರು. ಅವರು ಉಡುಪಿ ಅಂಚೆ ವಿಭಾಗ ಹಮ್ಮಿಕೊಂಡಿದ್ದ ” ಪಾರ್ಟೀಶನ್ ಹಾರರ್ ರಿಮೆಂಬರೆನ್ಸ್ ಡೇ” ( ದೇಶ ವಿಭಜನೆಯ ಭಯಾನಕ ದಿನದ ನೆನಪು) ಭಿತ್ತಿಚಿತ್ರಗಳ ಸರಣಿಯನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ನವೀನ್ ಚಂದರ್ ರವರು ಮಾತನಾಡುತ್ತಾ ಪಠ್ಯ ಪುಸ್ತಕಗಳು ತಿಳಿಸಲಾರದ ಹಲವಾರು ವಿಷಯಗಳನ್ನು ಈ ಐವತ್ತೆರಡು ಭಿತ್ತಿಚಿತ್ರಗಳು ಬಿತ್ತರಿಸುತ್ತಲಿದ್ದು ಸಾರ್ವಜನಿಕರ ವೀಕ್ಷಣೆಗೆ ಇದು ನಮ್ಮ ಉಡುಪಿ ಅಂಚೆ ವಿಭಾಗದ ಉಡುಪಿ, ಮಣಿಪಾಲ ಹಾಗು ಕುಂದಾಪುರ ಪ್ರಧಾನ ಅಂಚೆ ಕಚೇರಿಗಳಲ್ಲಿ ಆಗಸ್ಟ್ 15 ರವರೆಗೆ ವೀಕ್ಷಣೆಗೆ ಲಭ್ಯವಿದೆ ಎಂದು ತಿಳಿಸಿದರು.ಸಹಾಯಕ ಅಂಚೆ ಅಧೀಕ್ಷಕರಾದ ಜಯರಾಮ ಶೆಟ್ಟಿ ಸ್ವಾಗತಿಸಿದರು. ಸಹಾಯಕ ಅಂಚೆ ಅಧೀಕ್ಷಕರಾದ ಕೃಷ್ಣರಾಜ ವಿಠಲ ಭಟ್ , ಉಡುಪಿ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ,ಛಾಯಾ ಪತ್ರ ಕರ್ತ ಜನಾರ್ದನ ಕೊಡವೂರು ಉಪಸ್ಥಿತಿತರಿದ್ದರು. ಪೂರ್ಣಿಮಾ ಜನಾರ್ದನ್ ಕಾರ್ಯ ಕ್ರಮ ನಿರೂಪಿಸಿ ಉಡುಪಿ ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕ ಗುರು ಪ್ರಸಾದ್ ಧನ್ಯವಾದವಿತ್ತರು.

 
 
 
 
 
 
 
 
 
 
 

Leave a Reply