SSLC ಮುಗಿಸಿದವರಿಗೆ ಕರ್ನಾಟಕ ಅಂಚೆ ವೃತ್ತದಲ್ಲಿ ಉದ್ಯೋಗಾವಕಾಶದ ಸುರಿಮಳೆ 

ಕರ್ನಾಟಕ ಅಂಚೆ ವೃತ್ತದಲ್ಲಿ ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಣೆ ಮಾಡಿದೆ. ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-01-2021.

• ಹುದ್ದೆಗಳ ವಿವರ : ಹುದ್ದೆಯ ಹೆಸರು : ಗ್ರಾಮೀಣ ದಕ್ ಸೇವಕ್ ಒಟ್ಟು ಹುದ್ದೆಗಳು : 2443 •

ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಮತ್ತು ಕಂಪ್ಯೂಟರ್ ಜ್ಞಾನ ಕಡ್ಡಾಯ, ಇದಲ್ಲದೆ ಸೈಕ್ಲಿಂಗ್‌ನ ಜ್ಞಾನವೂ ಅವಶ್ಯಕತೆಯಾಗಿದೆ. ಒಂದು ವೇಳೆ ಅಭ್ಯರ್ಥಿಗೆ ಸ್ಕೂಟರ್ ಅಥವಾ ಮೋಟಾರ್ ಸೈಕಲ್ ಸವಾರಿ ಮಾಡುವ ಅಭ್ಯಾಸವಿದ್ದರೆ ಅದನ್ನೂ ಪರಿಗಣಿಸಲಾಗುತ್ತದೆ.

• ಅರ್ಜಿ ಶುಲ್ಕ : ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ. 100. ಹಾಗೂ ಇತರ ವರ್ಗದ ಅಭ್ಯರ್ಥಿಗಳಿಗೆ ಶುಲ್ಕದ ವಿನಾಯಿತಿ ಇದೆ . • ವಯೋಮಿತಿ : ದಿನಾಂಕ 21.12.202 ಕ್ಕೆ ಅನ್ವಯವಾಗುವಂತೆ ಕನಿಷ್ಠ ವಯೋಮಿತಿ 18 ವರ್ಷ ಹಾಗೂ ಗರಿಷ್ಟ ವಯೋಮಿತಿ ಗರಿಷ್ಠ ವಯೋಮಿತಿ 40 ವರ್ಷ ( ನಿಯಮಗಳನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ)

• ವೇತನ ಶ್ರೇಣಿ : 12,000 ದಿನದ 14,000/- • ಅರ್ಜಿ ಸಲ್ಲಿಸಲು ಆರಂಭದ ದಿನಾಂಕ : 21-12-2020 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-01-2021 • ಅರ್ಜಿ ಸಲ್ಲಿಸುವುದು ಹೇಗೆ..? ಅರ್ಹ ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್ಲೈನ್ ಮೂಲಕವೇ ಸಲ್ಲಿಸತಕ್ಕದ್ದು.

ಅರ್ಜಿಯನ್ನು ಸಲ್ಲಿಸುವ ವಿಧಾನ , ಅಗತ್ಯ ದಾಖಲೆಗಳ ವಿವರ, ಅರ್ಜಿ ಶುಲ್ಕ ಪಾವತಿಸುವ ವಿಧಾನ ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಅಧಿಸೂಚನೆಯನ್ನು ನೋಡಿ.

• ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಲು : https://bit.ly/34xxAW4 • ಅರ್ಜಿ ಸಲ್ಲಿಸಲು ಅಧಿಕ್ರತ ವೆಬ್ಸೈಟ್ ವಿಳಾಸ :

https://www.indiapost.gov.in/VAS/Pages/Content/Recruitments.aspx?Category=Recruitment

 
 
 
 
 
 
 
 
 
 
 

Leave a Reply