ಸಂಸ್ಕಾರ ನೀಡುವ ಶಿಬಿರ ಅರ್ಥಪೂರ್ಣ -ಪೂಜಾ ಭಟ್

ಕೋಟ: ಶಿಬಿರಗಳು ಅರ್ಥಪೂರ್ಣವಾಗಬೇಕಾದರೆ ಸಂಸ್ಕಾರಯುತ ಶಿಬಿರಗಳನ್ನು ನೀಡಬೇಕು ಆ ಮೂಲಕ ವಿದ್ಯಾ ಸಮೂಹಕ್ಕೆ ನೈಜತೆಯನ್ನು ಅರಿವು ಸಿಕ್ಕಂತ್ತಾಗುತ್ತದೆ ಎಂದು ಪ್ರಜ್ಞಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆಯಾಗಿರುವ ಪೂಜಾ ಪ್ರಕಾಶ್ ಭಟ್ ಹೇಳಿದರು.

ಕೋಟದ ಸೇವಾ ಸಂಗಮ ಶಿಶುಮಂದಿರದ ಬಾಲಗೋಕುಲ ವಿದ್ಯಾರ್ಥಿಗಳಿಗೆ ಮೂರು ದಿನಗಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಪ್ರಸ್ತುತ ಕಾಲಘಟ್ಟದಲ್ಲಿ ಮಕ್ಕಳಿಗೆ ಮೌಲ್ಯಯುತವಾದ ಶಿಬಿರಗಳನ್ನು ಆಯೋಜಿಸಿದರೆ ಅದರ ಸಾರ್ಥಕತೆ ಸಂಪನ್ಮೂಲ ವ್ಯಕ್ತಿಗಳಿಗೆ ಹಾಗೂ ಅದನ್ನು ಪಡೆದುಕೊಂಡ ವಿದ್ಯಾರ್ಥಿ ಸಂತೃಪ್ತಿ ಕಾಣಬಹುದಾಗಿದೆ.
ಎಲ್ಲಾ ಭಾಗಗಳಲ್ಲಿ ಬೇಸಿಗೆ ಶಿಬಿರಗಳು ಆಯೋಜನೆಗೊಳ್ಳುವುದನ್ನು ಕಾಣಬಹುದು ಆದರೆ ಸಂಸ್ಕಾರ ನೀಡುವ ಭಗವದ್ಗೀತೆ ,ಭಜನೆ,ಶ್ಲೋಕ ಪಟಿಸುವ ಹಾಗೆ ಇನ್ನಿತರ ಧಾರ್ಮಿಕತೆಯನ್ನು ಶಿಬಿರಗಳಲ್ಲಿ ಇಟ್ಟುಕೊಂಡಾಗ ಮಕ್ಕಳಲ್ಲಿ ಶಿಸ್ತು,ಶ್ರದ್ಧೆ ಸಾಮಾಜಿಕ ಪ್ರಜ್ಞೆ ನೋಡಬಹುದಾಗಿದೆ ಈ ನಿಟ್ಟಿನಲ್ಲಿ ಸೇವಾಸಂಗಮ ಶಿಶುಮಂದಿರದ ಪುಟಾಣಿಗಳು ಅರ್ಥಪೂರ್ಣ ಶಿಬಿರದ ಪ್ರಯೋಜನವನ್ನು ಪಡೆದಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆಯನ್ನು ಶಿಶುಮಂದಿರದ ಅಧ್ಯಕ್ಷೆ ನಾಗಲಕ್ಷ್ಮೀ  ಹೆಗ್ಡೆ ವಹಿಸಿದ್ದರು
ಸತತ ಮೂರು ದಿನಗಳ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪ್ರಕಾಶ್ ಭಟ್,ಸುಜಾತ ಬಾಯರಿ,ವನೀತಾ ಉಪಾಧ್ಯ,ಸ್ಮೀತಾರಾಣಿ, ಜ್ಯೋತಿ ಉಪಾಧ್ಯಾಯ,ಸದಾರಾಮೆ ಕಾರಂತ್ ,ಪೂಜಾ ಭಟ್ ಕಸದಿಂದ ರಸ,ಕ್ರೀಡೆಯಿಂದ ಮನೋವಿಕಾಸ,ಕಥೆ ಮತ್ತು ಅಭಿನಯ ಗೀತೆ,ದೇಶಭಕ್ತಿಗೀತೆ,ಭಜನೆ,ಸತ್ಸಂಗದ ಪರಿಣಾಮದ ಕುರಿತು ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಶಿಶುಮಂದಿರದ ವ್ಯವಸ್ಥಾಪಕಿ ಭಾಗ್ಯವಾದಿರಾಜ್,ಸ್ಥಾನೀಯ ಸಮಿತಿಯ ಕೋಶಾಧಿಕಾರಿ ಗೋಪಾಲಕೃಷ್ಣ ಭಟ್, ಕಾರ್ಯದರ್ಶಿ ಸುಷ್ಮಾ ಡಿ ಹೊಳ್ಳ ಮಾತಾಜಿ ದೀಪಾ ಮತ್ತಿತರರು ಉಪಸ್ಥಿತರಿದ್ದರು.

ಕೋಟದ ಸೇವಾ ಸಂಗಮ ಶಿಶುಮಂದಿರದ ಬಾಲಗೋಕುಲ ವಿದ್ಯಾರ್ಥಿಗಳಿಗೆ ಮೂರು ದಿನಗಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪ್ರಜ್ಞಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆಯಾಗಿರುವ ಪೂಜಾ ಪ್ರಕಾಶ್ ಭಟ್ ಮಾಹಿತಿ ನೀಡಿದರು. ಭಾಗ್ಯವಾದಿರಾಜ್,ಸ್ಥಾನೀಯ ಸಮಿತಿಯ ಕೋಶಾಧಿಕಾರಿ ಗೋಪಾಲಕೃಷ್ಣ ಭಟ್, ಕಾರ್ಯದರ್ಶಿ ಸುಷ್ಮಾ ಡಿ ಹೊಳ್ಳ ಮಾತಾಜಿ ದೀಪಾ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply