ವಿಜಯಪುರ: ನಾನು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದ್ದು ಮಾಜಿ ಸಿಎಂ ಯಡಿಯೂರಪ್ಪ. ಯತ್ನಾಳ್ ನನ್ನು ಮುಖ್ಯಮಂತ್ರಿ ಮಾಡಿದರೆ ಮೂರು ತಿಂಗಳಿನಲ್ಲಿ ಸರ್ಕಾರ ಕೆಡವುದಾಗಿ ಧಮ್ಕಿ ಹಾಕಿದ್ದರಿಂದ ಬಸವರಾಜ್ ಬೊಮ್ಮಾಯಿ ಅವರನ್ನು ಸಿಎಂ ಮಾಡಲಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ ಸಿಎಂ ರೇಸ್ ನಲ್ಲಿ ನನ್ನ ಹೆಸರು ಇತ್ತು. ಮುರುಗೇಶ್ ನಿರಾಣಿ, ಅರವಿಂದ್ ಬೆಲ್ಲದ್ ಹೆಸರಿರಲಿಲ್ಲ. ನಾನು ಸಿಎಂ ಆದರೆ ಯಡಿಯೂರಪ್ಪರ ಹಗರಣಗಳನ್ನು ಹೊರಗೆ ತರುತ್ತಿದ್ದೆ. ಧರ್ಮೇಂದ್ರ ಪ್ರಧಾನ್ ಸೇರಿದಂತೆ ಬಿಜೆಪಿ ನಾಯಕರನ್ನು ಹೆದರಿಸಿರುವ ಯಡಿಯೂರಪ್ಪರ ಆಟ ಇನ್ನುಮುಂದೆ ನಡೆಯದು ಎಂದು ಹೇಳಿದ್ದಾರೆ.
ಇದು ಭ್ರಷ್ಟ ವಿಜಯೇಂದ್ರನ ರಕ್ಷಿಸಲು ಹಾಗೂ ಉತ್ತರಾಧಿಕಾರಿಯನ್ನಾಗಿ ಮಾಡಲು ಯಡಿಯೂರಪ್ಪ ರೂಪಿಸಿರುವ ಸಂಚು. ವಿಜಯಪುರ ತಾಲೂಕಿಗೆ ಬರಬೇಕಿದ್ದ 125 ಕೋಟಿ ರೂಪಾಯಿ ಅನುದಾನ ಕೊಡಲಿಲ್ಲ. ಹತ್ತು ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.ಸೈಕಲ್ ತುಳಿದು ಪಕ್ಷ ಕಟ್ಟಿದ್ದೀರಾ. ನಿಮ್ಮ ಶ್ರಮಕ್ಕೆ ನಮ್ಮ ಅಭಿನಂದನೆ ಎಂದೆಲ್ಲಾ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹೊಗಳಿದ್ದಾರೆ. ಈ ಮೂಲಕ ಮಕ್ಕಳು ಹಾಗೂ ಮೊಮ್ಮಕ್ಕಳೊಂದಿಗೆ ಆಟವಾಡಿಕೊಂಡು ಮನೆಯಲ್ಲಿ ಇರಿ ಸಂದೇಶವಿದು ಎಂದು ಕಿಡಿಕಾರಿದರು.