Janardhan Kodavoor/ Team KaravaliXpress
26.6 C
Udupi
Monday, November 28, 2022
Sathyanatha Stores Brahmavara

ಉಡುಪಿ: ಟೂಲ್ ಕಿಟ್ ವಿವಾದ ಬಹಿರಂಗ – ಕಾಂಗ್ರೆಸ್ ಅಂತರಂಗ ಅನಾವರಣ

ಕಾರ್ಕಳ: ಕೋವಿಡ್ ಸಂಕಟ ಕಾಲದಲ್ಲಿ ಕಾಂಗ್ರೆಸ್ ನ ಟೂಲ್ ಕಿಟ್ ವಿವಾದ ಹೊರಬಿದ್ದಿದ್ದು, ಇದು ನಾಚಿಕೆಗೇಡು.ದೇಶದ ಜನರಿಗೆ ಕಾಂಗ್ರೆಸ್ ಉತ್ತರ ಕೊಡಬೇಕಾಗಿದೆ ಎಂದು ಮುಖ್ಯ ಸಚೇತಕ,ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ.

ಕಾಂಗ್ರೆಸ್ ನಿರಂತರ ಅಪಪ್ರಚಾರದಲ್ಲಿ ತೊಡಗಿದೆ. ಪ್ರತಿಪಕ್ಷವಾಗಿ ಕಾಂಗ್ರೆಸ್, ಸರಕಾರ ಹಾಗೂ ಜನರ ಜೊತೆ ನಿಲ್ಲಬೇಕಾಗಿತ್ತು.ಟೂಲ್ ಕಿಟ್ ಬಹಿರಂಗವಾದ ನಂತರ ಕಾಂಗ್ರೆಸ್ ನ ಉದ್ದೇಶವೇನು ಅನ್ನೋದು ಜನರಿಗೆ ಗೊತ್ತಾಗಿದೆ ಎಂದರು.

ವ್ಯಾಕ್ಸಿನ್ ಬಂದಾಗ ತೆಗೆದುಕೊಳ್ಳಬೇಡಿ ಎಂದು ಕಾಂಗ್ರೆಸ್ ನವರು ಅಪಪ್ರಚಾರ ಮಾಡಿದರು.ಈಗ ವ್ಯಾಕ್ಸಿನ್ ಕೊರತೆ ನಿರ್ಮಾಣವಾಗಲು ಕಾಂಗ್ರೆಸ್ಸೇ ಕಾರಣ ಎಂದು ಆರೋಪಿಸಿದ ಸುನಿಲ್, ಜನರನ್ನು ತಪ್ಪುದಾರಿಗೆ ಎಳೆದು, ಕಾಂಗ್ರೆಸ್ ನಾಯಕರು ತಾವು ವ್ಯಾಕ್ಸಿನ್ ತೆಗೆದುಕೊಂಡರು. ತಮ್ಮ ಆರೋಗ್ಯ ಕಾಪಾಡಿಕೊಂಡು ಜನರ ಆರೋಗ್ಯ ಹಾಳು ಮಾಡಿದರು ಎಂದು ಕಿಡಿಕಾರಿದರು.

ಯಾವುದೋ ನದಿಯಲ್ಲಿ ತೇಲುತ್ತಿದ್ದ ಶವಗಳನ್ನು ಭಾರತದ್ದೆಂದು ಬಿಂಬಿಸುತ್ತಿದ್ದಾರೆ. ಇದು ಕಾಂಗ್ರೆಸ್ ನ ನೀಚ ಪ್ರವೃತ್ತಿ. ಕೊರೊನಾ ಕಾಲಘಟ್ಟದಲ್ಲಿ ಸಾಮಾಜಿಕ ಜವಾಬ್ದಾರಿ ಕಾಂಗ್ರೆಸ್ ತೋರಿಲ್ಲ. ಕಾಂಗ್ರೆಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವ ಹಾಳು ಮಾಡಿದೆ. ಬೆಂಗಳೂರು ಬೆಡ್ ಬ್ಲಾಕಿಂಗ್ ದಂಧೆ ಕೂಡ ಟೂಲ್ ಕಿಟ್ ನ ಒಂದು ಭಾಗ. ಜನರು ಕೊರೊನಾದಿಂದ ಹೊರಬರುವುದು ಕಾಂಗ್ರೆಸ್ ಗೆ ಬೇಕಿಲ್ಲ ಎಂದು ಸುನಿಲ್ ವಾಗ್ದಾಳಿ ನಡೆಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!