ಎನರ್ಜಿ ಸಚಿವರಿಗೆ ಗೃಹ ಖಾತೆ ಒಲಿಯುವ ಸಾಧ್ಯತೆ

ರಾಜ್ಯದ ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿರುವ ಕಾರ್ಕಳದ ಶಾಸಕ ವಿ. ಸುನಿಲ್ ಕುಮಾರ್  ಗೃಹ ಖಾತೆ ಒಲಿಯುವ ಸಂಭವ ನಿಚ್ಚಳವಾಗಿದೆ.  

​ರಾಜ್ಯದ ಪ್ರಸ್ತುತ ವಿದ್ಯಮಾನಗಳನ್ನು ​ಪರಿಗಣಿಸಿ ಹೆಚ್ಚಿನ ಹೊಣೆಗಾರಿಕೆಯನ್ನು ನೀಡುವುದು ಬಿಜೆಪಿ ಹೈ ಕಮಾಂಡ್ ಪ್ಲಾನ್ ಎಂದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.   

ಕಾರ್ಕಳ ಕ್ಷೇತ್ರವನ್ನು ಪ್ರತಿನಿಧಿಸುವ ಭಾರತೀಯ ಜನತಾ ಪಾರ್ಟಿ ಯಿಂದ ವಿಧಾನಸಭೆಗೆ ಆಯ್ಕೆಯಾದ ಸುನಿಲ್ ಕುಮಾರ್ ಇದಕ್ಕೂ ಮೊದಲು ಕರ್ನಾಟಕ ಶಾಸಕಾಂಗ ಸಭೆಯ ಬಿಜೆಪಿ ಸರ್ಕಾರದ ಮುಖ್ಯ ಸಚೇತಕರಾಗಿ ಸೇವೆ ಸಲ್ಲಿಸಿರುವರು. 2020 ನವೆಂಬರ್‌ನಲ್ಲಿ ಇವರನ್ನು ಕೇರಳದ ಬಿಜೆಪಿಯ ಸಹ-ಉಸ್ತುವಾರಿಯಾಗಿ ನೇಮಿಸಲಾಯಿತು.

  1. ಹಿಂದುತ್ವದ ಸಿದ್ದಾಂತವನ್ನು ಮೈಗೂಡಿಸಿಕೊಂಡು ಬಜರಂಗದಳದ ಮೂಲಕ ಹಿಂದೂಪರ ಹೋರಾಟ ನಡೆಸಿ 1997ರಲ್ಲಿ ರಾಷ್ಟ್ರದ ಗಮನ ಸೆಳೆದ ದತ್ತಪೀಠದ ಹೋರಾಟವನ್ನು ಒಂದು ವ್ರತದಂತೆ ಕೈಗೊಂಡ ರೀತಿ ಲಕ್ಷಾಂತರ ಜನರ ಮೆಚ್ಚುಗೆಯನ್ನು ಗಳಿಸಿತು.
  2. ಸಹಸ್ರ ಸಹಸ್ರ ಹಿಂದುಗಳನ್ನು ಒಟ್ಟುಗೂಡಿಸಿದರಲ್ಲದೆ ಅವರನ್ನು ದತ್ತಮಾಲೆಯನ್ನು ಧರಿಸಿ ಒಂದು ದೀಕ್ಷೆಯನ್ನು ಪಡೆಯುವಂತೆ ಪ್ರೇರೇಪಿಸಿತು. ಮುಂದೆ ಬಜರಂಗದಳ ಚಿಕ್ಕಮಗಳೂರು ಜಿಲ್ಲಾ ಸಂಚಾಲಕರಾಗಿ, ಕರ್ನಾಟಕ ರಾಜ್ಯ ಸಂಚಾಲಕರಾಗಿ ಸಂಘಟನೆಯನ್ನು ಬಲಪಡಿಸಿದ್ದು ಈಗ ಇತಿಹಾಸ.
  1. ನಿರಂತರ ಹೋರಾಟ, ಕಠಿಣ ಪರಿಶ್ರಮ, ನ್ಯಾಯ ನಿಷ್ಠುರತೆ , ಜನಪರ ಕಾಳಜಿ, ದೇಶಪ್ರೇಮ, ಅಂದಿನ ಸರಕಾರಗಳ ಸುಳ್ಳು ಪ್ರಕರಣಗಳ ಯಾವುದೇ ಬೆದರಿಕೆಗಳಿಗೆ ಜಗ್ಗದೆ, ಎದೆಗುಂದದೆ ಧೈರ್ಯವಾಗಿ ಎದುರಿಸಿದ್ದರಿಂದಲೇ ಮುಂದೆ ಅವಕಾಶಗಳು ಅರಸುತ್ತಾ ಬಂದುವು. 
  2. ಪರಿಣಾಮವಾಗಿ 2004ರಲ್ಲಿ ಭಾರತೀಯ ಜನತಾ ಪಕ್ಷದ ಪ್ರತಿನಿಧಿಯಾಗಿ ಮೂರು ದಶಕಗಳ ಹಿನ್ನೆಲೆಯನ್ನು ಹೊಂದಿದ್ದು ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದ ಕಾರ್ಕಳದಲ್ಲಿ ಭಾರೀ ಬಹುಮತದೊಂದಿಗೆ ವಿಜಯ ಪತಾಕೆಯನ್ನು ಹಾರಿಸಿದ್ದು ಒಂದು ಐತಿಹಾಸಿಕ ದಾಖಲೆ.
  3. 2013ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಶಾಸಕಾರಿ ಆಯ್ಕೆಯಾಗಿ ಬಂದು ಪ್ರಸ್ತುತ ರಾಜ್ಯ ಸಚಿವರ ಸ್ಥಾನಮಾನ ಹೊಂದಿರುವ ಕರ್ನಾಟಕ ಸರಕಾರದ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ಆಯ್ಕೆಯಾಗಿದ್ದು ಶ್ರೀ ವಿ.ಸುನಿಲ್ ಕುಮಾರ್ ರವರ ನಾಯಕತ್ವಕ್ಕೆ ಸಾಕ್ಷಿ.
 
 
 
 
 
 
 
 
 
 
 

Leave a Reply