ಮುತಾಲಿಕ್ ದಿಢೀರ್ ಭೇಟಿ ಕರಾವಳಿಯ ಶ್ರೀರಾಮಸೇನೆ ಗೊಂದಲಕ್ಕೆ ತೆರೆ

ಕಳೆದ 3-4 ದಿವಸದಿಂದ ಶ್ರೀರಾಮಸೇನೆಯ ರಾಜ್ಯ ನಾಯಕರ ಕಾರ್ಯವೈಖರಿಯಿಂದ ಬೇಸತ್ತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಶ್ರೀರಾಮ್ ಸೇನೆಯ ಕಾರ್ಯಕರ್ತರು ಹಾಗೂ ಪದಾಧಿಕಾರಿ ಗಳು ಎರಡು ತುರ್ತು ಬೈಠಕನ್ನು ನಡೆಸಿ ಮಂಗಳೂರು ವಿಭಾಗ ಅಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾಧ್ಯಕ್ಷರು ತಮ್ಮ ಪರಿವಾರದೊಂದಿಗೆ ಸಾಮೂಹಿಕ ರಾಜೀನಾಮೆಗೆ ನಿರ್ಧರಿಸಿದ್ದರು.

ಇದು ಪ್ರಖರ ಹಿಂದುತ್ವವಾದಿಗಳಲ್ಲಿ ಚರ್ಚೆಗೂ ಗ್ರಾಸವಾಯಿತು. ಇದನ್ನೆಲ್ಲ ಮನ ಗಂಡ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಪ್ರಮೋದ್ ಮುತಾಲಿಕ್ ಅವರು ಇಂದು ಹಠತ್ತಾಗಿ ಉಡುಪಿಗೆ ಭೇಟಿ ನೀಡಿ ಮಂಗಳೂರು ವಿಭಾಗ ಅಧ್ಯಕ್ಷರ ಮನೆಯಲ್ಲಿ ಉಡುಪಿ ಜಿಲ್ಲಾ ಶ್ರೀರಾಮಸೇನೆಯ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಸುಮಾರು ಮೂರು-ನಾಲ್ಕು ಗಂಟೆಗಳ ಕಾಲ ನಡೆದ ಚರ್ಚೆಯಲ್ಲಿ ಉಡುಪಿ ಜಿಲ್ಲಾ ಪದಾಧಿಕಾರಿಗಳು ಹಾಗೂ ವಿಭಾಗ ಅಧ್ಯಕ್ಷರು ಎಲ್ಲಿ ಲೋಪವಾಗಿದೆ ಹಾಗೂ ನಮಗೆ ಏಕೆ ಬೇಜಾರವಾಗಿದೆ ಎಂದು ಎಳೆ ಎಳೆಯಾಗಿ ಮುತಾಲಿಕ್ ರವರ ಎದುರಿಗೆ ಇಟ್ಟರು.

ಪದಾಧಿಕಾರಿಗಳ ಕಾರಣಗಳನ್ನು ಗಂಭೀರವಾಗಿ ಪರಿಗಣಿಸಿದ ಮುತಾಲಿಕ್ ರವರು ಇನ್ನು ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುತ್ತೇನೆ ಮತ್ತು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಉಸ್ತುವಾರಿ ಯನ್ನು ನಾನೇ ನೋಡಿಕೊಳ್ಳುತ್ತೇನೆ ಎಂದು ಸಂಘಟನೆ ಪದಾಧಿಕಾರಿಗಳಿಗೆ ಭರವಸೆಯನ್ನು ನೀಡಿದರು.

ಕಳೆದ 46 ವರ್ಷದಿಂದ ಹಿಂದುತ್ವಕ್ಕಾಗಿ ತನ್ನ ಸರ್ವಸವನ್ನೇ ತ್ಯಾಗ ಮಾಡಿದ ಸಂತ ಮುತಾಲಿಕ್ ರವರ ಮಾತುಗಳಿಂದ ಪ್ರೇರೇಪಿತರಾದ ಸಂಘಟನೆಯ ನಾಯಕರು ಹಾಗೂ ಕಾರ್ಯ ಕರ್ತರು ಪ್ರಮೋದ್ ಮುತಾಲಿಕ್ ರವರ ಮಾತಿಗೆ ಬೆಂಬಲ ಸೂಚಿಸಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವುದಾದರೂ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಬೇಕು ಹಾಗೂ ನಿಮ್ಮೊಂದಿಗೆ ನಾವು ಯಾವತ್ತೂ ಇದ್ದೇವೆ ಎಂಬ ಭರವಸೆಯನ್ನು ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಮುತಾಲಿಕ್ ರವರಿಗೆ ನೀಡಿದರು.

Leave a Reply