Janardhan Kodavoor/ Team KaravaliXpress
24.6 C
Udupi
Tuesday, July 5, 2022
Sathyanatha Stores Brahmavara

ಡಿ.ವಿ.ಸದಾನಂದ ಗೌಡರು ನೇಣಿಗೆ ಶರಣಾಗುವ ಬದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಜನತೆಗೆ ಶರಣಾಗುವುದು ಒಳಿತು: ವಿನಯ್ ಕುಮಾರ್ ಸೊರಕೆ

ಕೋವಿಡ್ ಎರಡನೇ ಅಲೆಯ ತೀವ್ರತೆಯ ಬಗ್ಗೆ ತಜ್ಞರ ವರದಿ ಹಾಗೂ ಸಲಹೆ ಸೂಚನೆಯಂತೆ ಸಿದ್ಧತೆ ಮಾಡಿಕೊಳ್ಳದೆ ಅಸಡ್ಡೆ ತೋರಿಸಿ, ಸಹಸ್ರಾರು ಜನರ ಸಾವಿಗೆ ಕಾರಣವಾಗಿರುವ ಮತ್ತು ಜನರನ್ನು ದುಸ್ಥಿತಿಗೆ ತಳ್ಳಿರುವ ಆಡಳಿತಾರೂಢ ಬಿ.ಜೆ.ಪಿ ನೇತೃತ್ವದ ರ‍್ಕಾರದ ಕರ‍್ಯವೈಖರಿಯಿಂದಾಗಿ ವಿಶ್ವದಾದ್ಯಂತ ಭಾರತವು ತಲೆ ತಗ್ಗಿಸುವಂತಾಗಿದೆ.ಈ ಕುರಿತ್ತು ಬೇಜವಾಬ್ದಾರಿತ ಹೇಳಿಕೆ ನೀಡಿದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಕೇಂದ್ರ ಕ್ಯಾಬಿನೆಟ್ ಸಚಿವಾಲಯಕ್ಕೆ ತಕ್ಷಣ ರಾಜೀನಾಮೆ ನೀಡುವಂತೆ ಮಾಜಿ ಸಚಿವ ಹಾಗೂ ಮಾಜಿ ಸಂಸದರಾದ ವಿನಯ್ ಕುಮಾರ್ ಸೊರಕೆಯವರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
.
ಆಸ್ಪತ್ರೆಗಳಲ್ಲಿ ಹಾಸಿಗೆ ಇಲ್ಲ, ಆಮ್ಲಜನಕ ಇಲ್ಲ, ವೆಂಟಿಲೇಟರ್ ಇಲ್ಲ, ವ್ಯಾಕ್ಸಿನ್ ಇಲ್ಲ, ಔಷದಿ ಇಲ್ಲ, ಆಂಬ್ಯುಲೆನ್ಸ್ ಇಲ್ಲ ಒಟ್ಟಾರೆ ಕೋವಿಡ್ ನರ‍್ವಹಣೆಗೆ ಯಾವುದು ಅತ್ಯಗತ್ಯವೋ ಅದ್ಯಾವುದೂ ಇಲ್ಲ ಎಂಬ ಪರಿಸ್ಥಿತಿ ನಿರ‍್ಮಾಣವಾಗಿದೆ . ಇದಕ್ಕೆ ಸರಕಾರದ  ಆಡಳಿತವೇ ಪ್ರಮುಖ ಕಾರಣವಾಗಿದೆ. ಇದನ್ನೆಲ್ಲಾ ಮನಗಂಡು ಮೂಕ ಪ್ರೇಕ್ಷಕನಾಗಿರಲು ಬಯಸದ ಸುಪ್ರೀಂಕೋರ್ಟ್ ಸ್ವಯಂಪ್ರೇರಿರಿತವಾಗಿ ಮಧ್ಯಸ್ಥಿಕೆ ವಹಿಸಿ ತಜ್ಞರು ಮತ್ತು ಅನುಭವಿ ವೈದ್ಯರನ್ನೊಳಗೊಂಡ ಟಾಸ್ಕ್ ಫೋರ್ಸ್ ರಚಿಸಿ  ಕಾರ‍್ಯಪ್ರವೃತ್ತ ರಾಗುವಂತೆ ನಿರ್ದೇಶನ  ನೀಡಿತ್ತು.
ಆದರೆ,( ಕೇಂದ್ರ ಮತ್ತುಕರ್ನಾಟಕ ರಾಜ್ಯ) ಸರಕಾರದ  ಆಡಳಿತ ವೈಫಲ್ಯವನ್ನು ಬೊಟ್ಟು ಮಾಡಿ ತೋರಿಸಿರುವ ನ್ಯಾಯಾಲಯದ ಆದೇಶವನ್ನು ಅರಗಿಸಿಕೊಳ್ಳಲು ಆಗದೆ, ಬಾಲಿಶವಾಗಿ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಸಂಸದ ಹಾಗೂ ಕೇಂದ್ರ ಮಂತ್ರಿ ಮಂಡಲದ ಹಿರಿಯ ಸಚಿವರಲ್ಲೊಬ್ಬರಾದ ಡಿ.ವಿ.ಸದಾನಂದ ಗೌಡರು ನಾವೇನು ನೇಣುಹಾಕಿ ಕೊಂಡು ಸಾಯಬೇಕಾ ಎಂದು ಕೇಳಿದರೆ, ರಾಜ್ಯದ ಮತ್ತೊಬ್ಬ ಮಹಾನ್ ಬಿ .ಜೆ.ಪಿ ನಾಯಕ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಎಂಬವರು ನ್ಯಾಯಾಧೀಶ ರನ್ನೇ ಅಣಕಿಸಿ ಮಾತನಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನ ಮತ್ತು ನ್ಯಾಯಾಂಗ ನಿಂದನೆ ಎಸಗಿರುತ್ತಾರೆ.
ಸಂವಿಧಾನ ಬಧ್ಧವಾಗಿ ಪ್ರಮಾಣ ವಚನ ಸ್ವೀಕರಿಸಿರುವ ಈ ಜನಪ್ರತಿನಿಧಿಗಳು ತಮ್ಮ ಹೊಣೆಗಾರಿಕೆಯನ್ನು ಮರೆತು ರಾಜ್ಯದ ಮತ್ತು ಜನರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ವಿಫಲರಾಗಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನದ ಸಲುವಾಗಿ ಈ ರೀತಿಯ ಹೇಳಿಕೆಗಳನ್ನು ನೀಡಿ ಜನರಿಗೆ ದ್ರೋಹ ಎಸಗುತ್ತಿದ್ದಾರೆ.
ಸದಾನಂದ ಗೌಡರೇ, ತಾವು ನೇಣಿಗೆ ಶರಣಾಗುವ ಬದಲು ತಮ್ಮ ಸಂಸದ ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಜನರಿಗೆ ಶರಣಾಗುವುದು ಒಳಿತು ಹಾಗೂ ಶಾಸಕ ಸಿ. ಟಿ. ರವಿಯವರು ನ್ಯಾಯಾಧೀಶರ ಬಗ್ಗೆ ನೀಡಿರುವ ಹೇಳಿಕೆಯು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಯೋಗ್ಯವಾಗಿರುವುದರಿಂದ ತಮ್ಮ ಶಾಸಕ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕೆಂದು ವಿನಯ್ ಕುಮಾರ್ ಸೊರಕೆ ಆಗ್ರಹಿಸಿರುತ್ತಾರೆ.
ಪ್ರಸಕ್ತ ಸಂದಿಗ್ಧ ಪರಿಸ್ಥಿತಿಯಲ್ಲಿ ಸೋಂಕಿತರ ಶುಶ್ರೂಷೆಗೆ ಸ್ಪಂದಿಸಿ ಅಗತ್ಯವಿರುವ ಔಷಧಿಗಳು, ಆಮ್ಲಜನಕ, ವೆಂಟಿಲೇಟರ್ ಗಳನ್ನು ಪೂರೈಸುವಲ್ಲಿ ಎಡವಿರುವ ರ‍್ಕಾರ ದಿನೇ ದಿನೇ ರೈತರಿಗೆ ಅಗತ್ಯವಿರುವ ರಸಗೊಬ್ಬರದ ಬೆಲೆಯನ್ನು ಏರಿಸುವುದರೊಂದಿಗೆ ಗಾಯದ ಮೇಲೆ ಬರೆ ಎಳೆದಂತೆ ತನ್ನ ಜನವಿರೋಧಿ ಧೋರಣೆಯನ್ನು ಮುಂದುವರಿಸಿದೆ.
ಲಾಕ್ದೌನ್ ನಿಂದಾಗಿ ಕೆಲಸ ಕಳೆದುಕೊಂಡು  ಆದಾಯವಿಲ್ಲದೆ ಒಪ್ಪೊತ್ತಿನ ಊಟಕ್ಕೆ ಪರದಾಡುತ್ತಿರುವ ದಿನಗೂಲಿ ಕಾರ್ಮಿಕರಿಗೆ ಯಾವುದೇ ರೀತಿಯ ಪರ‍್ಯಾಯ ವ್ಯವಸ್ಥೆಯನ್ನು ಕಲ್ಪಿಸದೇ ಬಡವರ ವಿರೋಧಿಯಾಗಿವರ್ತಿಸುತ್ತಿರುವುದು ಖಂಡನೀಯ ಎಂದು ಮಾಜಿ ಸಚಿವರು ಹೇಳಿದರು.
ಮಹಾಮಾರಿ ಕೊರೊನಾ ಸೋಂಕಿನ ಎರಡನೇ ಅಲೆಯಿಂದಾಗಿ ಇಡೀ ವಿಶ್ವವೇ ತತ್ತರಿಸಿ ಹೋಗಿ ಆಯಾ  ದೇಶದ ಆಡಳಿತಾರೂಢ ಸರಕಾರಗಳು ಸಮಯಪ್ರಜ್ಞೆ ಮತ್ತು ಕರ್ತವ್ಯ ಪ್ರಜ್ಞೆಯನ್ನು ಮೆರೆದು ಕಾರ‍್ಯಪ್ರವೃತ್ತರಾದುದರಿಂದ ಚೇತರಿಸಿಕೊಂಡಿದ್ದರೆ ಭಾರತದ ಮತ್ತು ಕರ್ನಾಟಕದ ಸ್ಥಿತಿ ಮಾತ್ರ ದಿನದಿಂದ ದಿನಕ್ಕೆ. ಅಧೋಗತಿಯತ್ತ ಸಾಗುತ್ತಿದೆ.
ಸರಕಾರದ  ಹೊಣೆಗೇಡಿತನದ ನೀತಿಗಳಿಂದಾಗಿ ಜನರ ಜೀವನದ ಜೊತೆಯಲ್ಲಿ ಚೆಲ್ಲಾಟವಾಡುತ್ತಿರುವ ಸರಕಾರವು ಒಂದು ಕ್ಷಣವೂ ಅಧಿಕಾರದಲ್ಲಿರಲು ನೈತಿಕತೆ ಯನ್ನು ಉಳಿಸಿಕೊಂಡಿಲ್ಲ. ಹಾಗಾಗಿ ದೇಶದ ಪ್ರಧಾನಮಂತ್ರಿ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿ ತಮ್ಮ ಹುದ್ದೆಗಳಿಂದ ಕೆಳಗಿಳಿದು ದೇಶವನ್ನು ಮತ್ತು ಜನರ ಪ್ರಾಣವನ್ನು ಉಳಿಸುವಂತೆ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿರುತ್ತಾರೆ.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!