Janardhan Kodavoor/ Team KaravaliXpress
24.6 C
Udupi
Sunday, September 25, 2022
Sathyanatha Stores Brahmavara

‘PAYCM’ ಕಾಂಗ್ರೆಸ್ ಅಭಿಯಾನಕ್ಕೆ ಬಿಜೆಪಿ ತಿರುಗೇಟು

ಬೆಂಗಳೂರು ನಗರದ ಕೆಲವೆಡೆ ಪೇಟಿಎಂ ಕ್ಯೂ ಆರ್ ಕೋಡ್ ಮಾದರಿಯಲ್ಲಿ ರಾತ್ರೋರಾತ್ರಿ ಸಿಎಂ ಬೊಮ್ಮಾಯಿ‌ ಫೋಟೋ ಸಹಿತ ‘ಪೇ ಸಿಎಂ’ ಪೋಸ್ಟರ್​ ಅಂಟಿಸಿ ಕಾಂಗ್ರೆಸ್​ ಅಭಿಯಾನ ನಡೆಸಿದೆ. ರೇಸ್ ಕೋರ್ಸ್ ರೋಡ್​ ಸೇರಿದಂತೆ ಬೆಂಗಳೂರು ನಗರದ ಹಲವೆಡೆ QR ಕೋಡ್‌ ಇರುವ ‘PAY CM’ ಪೋಸ್ಟರ್‌ಗಳು ಕಂಡು ಬಂದಿದ್ದು, ಈ ಪೋಸ್ಟರ್​ ವಿರುದ್ಧ ಸಿಎಂ ಗರಂ ಆಗಿದ್ದಾರೆ. 

‘PAYCM’ ಕಾಂಗ್ರೆಸ್ ಅಭಿಯಾನಕ್ಕೆ ಗರಂ ಆಗಿರುವ ಬಿಜೆಪಿ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಫೋಟೋ ಹಾಕಿ ಅಣಕಿಸಿದೆ. ಪೇಟಿಎಂ ಕ್ಯೂ ಆರ್ ಕೋಡ್ ಮಾದರಿಯಲ್ಲಿ ಮಂಗಳವಾರ ರಾತ್ರೋರಾತ್ರಿ ಸಿಎಂ ಬೊಮ್ಮಾಯಿ ಫೋಟೋ ಸಹಿತ ‘ಪೇ ಸಿಎಂ’ ಪೋಸ್ಟರ್‌ಗಳನ್ನು ಬೆಂಗಳೂರಿನಾದ್ಯಂತ ಅಂಟಿಸಿ ಕಾಂಗ್ರೆಸ್ ಅಭಿಯಾನ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡ QR
ಕೋಡ್ ಸ್ಕ್ಯಾನ್ ಬಿಡುಗಡೆ ಮಾಡಿದೆ.

ಸಿದ್ದರಾಮಯ್ಯ ಮತ್ತು ಡಿಕೆಶಿ ಅವರ ಫೋಟೋ ಹಾಕಿ ‘ರಾಜ್ಯವನ್ನ ಲೂಟಿ ಮಾಡಿ ಹಾಳು ಮಾಡಿರುವ ಈ ಭ್ರಷ್ಟ ಜೋಡಿಯನ್ನ ರಾಜ್ಯದಿಂದ ಕಿತ್ತೆಸೆಯಲು ಇದನ್ನ ಸ್ಕ್ಯಾನ್ ಮಾಡಿ, ರಾಜ್ಯವನ್ನ ಹಾಳು ಮಾಡುವುದು ಹೇಗೆ. ಸುಳ್ಳು ಸುದ್ದಿ, ಅಶಾಂತಿ ಹೇಗೆ ಹರಡಿಸಬೇಕು ಗಹನ ಚರ್ಚೆಯಲ್ಲಿರೋ ರಿಡೂ ಸಿದ್ದರಾಮಯ್ಯ, ಇಡಿ ಡಿಕೆಶಿ’ ಎಂದು ಬರಹವುಳ್ಳ ಪೋಸ್ಟರ್ ಅನ್ನು ಬಿಜೆಪಿ ಬಿಡುಗಡೆ ಮಾಡಿದೆ.

‘ಸಾರ್ವಜನಿಕರ ಗಮನಕ್ಕೆ ನಿಮ್ಮ ಹತ್ತಿರ ಇವರನ್ನ ಸುಳಿದಾಡಲು ಬಿಡಬೇಡಿ’ ಎಂದು ಬರೆದು ಸಿದ್ದರಾಮಯ್ಯ ಮತ್ತು ಡಿಕೆಶಿ ಅವರ ಫೋಟೋ ಹಾಕಿ ಅದರ ಕೆಳಗೆ ‘ರಿಡೂ ಸಿದ್ದರಾಮಯ್ಯ’ ಮತ್ತು ‘ಇಡಿ ಡಿ.ಕೆ. ಶಿವಕುಮಾರ್’ ಎಂದು ಹಾಕಿ ‘ಸಮಾಜವಾದಿ ಮುಖವಾಡ ಧರಿಸಿ ರಾಜ್ಯವನ್ನು ಲೂಟಿ ಮಾಡಿರುವ ಕಾಂಗ್ರೆಸ್ ಗಂಜಿ ಗಿರಾಕಿಗಳಿಂದ ದೂರವಿರಿ’ ಅಂತ ಅಭಿಯಾನ ಆರಂಭಿಸಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!