ಚರ್ಚೆಗೆ ಗ್ರಾಸವಾದ ರಘುಪತಿ -ಪ್ರಮೋದ್ ಚಾಯ್ ಪೇ ಚರ್ಚಾ~ ಉಡುಪಿಯಲ್ಲಿ ರಾಜಕೀಯ ಸಂಚಲನ

 ಉಡುಪಿ: ಬಿಆರ್‌ಎಸ್ ಅಸ್ಪತ್ರೆ ವಿಚಾರದಲ್ಲಿ ಪರಸ್ಪರ ಹೇಳಿಕೆಗಳ ಮೂಲಕ ಸುದ್ದಿಯಾಗಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಶಾಸಕ ರಘುಪತಿ ಭಟ್ ಸೋಮವಾರ ಇಬ್ಬರೂ ಒಟ್ಟಿಗೆ ಉಪಾಹಾರ ಸೇವಿಸುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ 

ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಕೇದಾರೋತ್ಥಾನ ಟ್ರಸ್ಟ್ ಮೂಲಕ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2 ಸಾವಿರ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯುವ ಹಡಿಲು ಭೂಮಿ ಕೃಷಿ ಅಂದೋಲನ ನಡೆಯುತ್ತಿದೆ.

ಸೋಮವಾರ ಉಪ್ಪೂರು ಅಮ್ಮುಂಜೆ ಚೌಂಡಿ ನಾಗಬನದ ಬಳಿ 15 ಎಕರೆಯಲ್ಲಿ ಭತ್ತ ನಾಟಿ ಕಾರ್ಯಕ್ಕೆ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಚಾಲನೆ ನೀಡಿದ್ದಾರೆ. 

ಪ್ರಮೋದ್ ಆಹ್ವಾನದ ಮೇರೆಗೆ ಅಮ್ಮುಂಜೆ ಮನೆಯ ಗೋಶಾಲೆಗೆ ಶಾಸಕ ಕೆ. ರಘುಪತಿ ಭಟ್ ಭೇಟಿ ನೀಡಿದ್ದರು. ಈ ಚಿತ್ರಗಳನ್ನು ಸ್ವತಃ ಪ್ರಮೋದ್ ಮಧ್ವರಾಜ್ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿದ್ದರು.
ಈ ಹಿಂದೆ ಪ್ರಮೋದ್ ಬಿಜೆಪಿ ಸೇರುತ್ತಾರೆ ಎಂಬ ವಿಷಯ ವ್ಯಾಪಕ ಪ್ರಚಾರ ಪಡೆದಿದ್ದ ಕಾರಣ ಜನರು ಬಗೆಬಗೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಲು ಪ್ರಮೋದ್ ನಿರಾಕರಿಸಿ ದ್ದಾರೆ. ಕೇದಾರೋತ್ಥಾನ ಟ್ರಸ್ಟ್ ಪದನಿಮಿತ್ತ ವಾಗಿದ್ದು, ಪಕ್ಷಾತೀತವಾಗಿದೆ. ಕೆಲವು ಗ್ರಾಮ ಪಂಚಾಯಿತಿಗಳ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರೂ ಪದಾಧಿಕಾರಿಗಳಾಗಿದ್ದಾರೆ.
ಹೀಗಾಗಿ ಮಾಜಿ ಮತ್ತು ಹಾಲಿ ಶಾಸಕರ ಭೇಟಿ ಹೆಚ್ಚಿನ ಅರ್ಥವಿಲ್ಲ ಎಂದು ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದಾರೆ.
 
 
 
 
 
 
 
 
 
 
 

Leave a Reply