ಮೋದಿಗೆ ಪಕ್ಷೇತರ ಸಂಸದರ ಬೆಂಬಲ; ಎನ್‌ಡಿಎ ಸಂಖ್ಯಾಬಲ 303ಕ್ಕೆ ಏರಿಕೆ!

ಕೇಂದ್ರದಲ್ಲಿ ಮೂರನೇ ಅವಧಿಗೆ ಸರ್ಕಾರ ರಚಿಸಲು ಹೊರಟಿಡಿರುವ ಎನ್ಡಿಎಗೆ ಏಳು ಜನ ಪಕ್ಷೇತರ ಸಂಸದರು ಹಾಗೂ ಮೂವರು ಪ್ರಾದೇಶಿಕ ಪಕ್ಷಗಳ ಸಂಸದರು ಬೆಂಬಲ ಸೂಚಿಸಿದ್ದಾರೆ. ಈ ಮೂಲಕ ಎನ್ಡಿಎ ಸಂಖ್ಯಾಬಲ ಈಗ 303ಕ್ಕೆ ಏರಿಕೆಯಾದಂತಾಗಿದೆ. 

ಮಂಗಳವಾರ ಪ್ರಕಟಗೊಂಡ ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ಪಕ್ಷ 293 ಸ್ಥಾನಗಳನ್ನು ಗೆಲ್ಲುವ ಮೂಲಕ ಸರಳ ಬಹುಮತ ಪಡೆದಿದೆ.

ಇತ್ತ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಸಹ 233 ಸ್ಥಾನಗಳಲ್ಲಿ ಗೆಲುವು ಪಡೆದಿದೆ. ಎನ್ಡಿಎಗಿಂತ ಕಡಿಮೆ ಸ್ಥಾನಗಳನ್ನು ಗೆದ್ದಿದ್ದರೂ ಸಹ ಇಂಡಿಯಾ ಮೈತ್ರಿಕೂಟ ಸರ್ಕಾರ ರಚನೆಗೆ ಕಸರತ್ತು ನಡೆಸಿತ್ತು. ಎನ್ಡಿಎ ಮಿತ್ರಪಕ್ಷಗಳನ್ನು ಸೆಳೆಯಲು ರಣತಂತ್ರ ಹೆಣೆದಿತ್ತು. ಆದರೆ, ಅದು ಫಲ ಕೊಟ್ಟಿಲ್ಲ.

ಬುಧವಾರ ಸಂಜೆ ನವದೆಹಲಿಯಲ್ಲಿ ನಡೆದ ಎನ್ಡಿಎ ಮಿತ್ರಕೂಟಗಳ ಸಭೆಯಲ್ಲಿ ಸರ್ಕಾರ ರಚನೆಗೆ ಒಮ್ಮತ ಪಡೆಯಲಾಯಿತು. ಇದೇ ಸಂದರ್ಭದಲ್ಲಿ ಏಳು ಜನ ಪಕ್ಷೇತರ ಸಂಸದರು ಹಾಗೂ ಮೂವರು ಪ್ರಾದೇಶಿಕ ಪಕ್ಷಗಳ ಸಂಸದರು ಸಹ ಮೋದಿ ಸರ್ಕಾರಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಇದರಿಂದ ಎನ್ಡಿಎ ಬಲ ಈಗ ಮತ್ತಷ್ಟು ವೃದ್ದಿಯಾದಂತಾಗಿದೆ.

 
 
 
 
 
 
 
 

Leave a Reply