Janardhan Kodavoor/ Team KaravaliXpress
24.6 C
Udupi
Thursday, September 29, 2022
Sathyanatha Stores Brahmavara

ದೇಶ ಭಕ್ತ ಸಾವರ್ಕರ್ ಗೆ ಅವಮಾನ ಮಾಡಿರುವ SDPI ಮತ್ತು ಮತೀಯ ಸಂಘಟನೆಯ ಕೃತ್ಯಖಂಡನೀಯ ~ ನಯನಾ ಗಣೇಶ್

ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮದ  ಸಂದರ್ಭ ದೇಶ ಭಕ್ತ ಸಾವರ್ಕರ್ ಗೆ ಅವಮಾನ ಮಾಡಿರುವ SDPI ಮತ್ತು ಮತೀಯ ಸಂಘಟನೆಯ ಕೃತ್ಯವನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಯನಾ ಗಣೇಶ್ ತೀವ್ರವಾಗಿ ಖಂಡಿಸಿದ್ದಾರೆ. ಕಾಶ್ಮೀರ ದಿಂದ ಕನ್ಯಾ ಕುಮಾರಿ ವರೆಗೆ ದೇಶಕ್ಕೆ ದೇಶವೇ 3 ದಿನಗಳ ಘರ್ ಘರ್ ತಿರಂಗಾ ಮೂಲಕ ಮನೆ-ಮನಗಳನ್ನು  ಮುಟ್ಟುವ ಕಾರ್ಯವಾಗಿದ್ದು, ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಅದ್ದೂರಿಯಾಗಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಮಾಡಿದ್ದಾರೆ.

ಆದರೆ ರಾಜ್ಯದಲ್ಲಿ ಕೆಲವು ಮತೀಯ ಶಕ್ತಿಗಳು ಮತ್ತು SDPI ಶಿವಮೊಗ್ಗದಲ್ಲಿ ಅಂಡಮಾನ್ ನಲ್ಲಿ ಕರಿ ನೀರಿನ ಶಿಕ್ಷೆ ಅನುಭವಿಸಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದೇಶ ಭಕ್ತ ಸಾವರ್ಕರ್ ಫೋಟೋ ತೆರವುಗೊಳಿಸುವ ಮೂಲಕ ದೇಶ ದ್ರೋಹದ ಕೆಲಸವನ್ನು ಮಾಡಿದೆ ಅಲ್ಲದೆ ಮಂಗಳೂರು ಗುರುಪುರದಲ್ಲಿ ಶಿಕ್ಷಣ ಸಂಸ್ಥೆಯ ಮಕ್ಕಳ ನೃತ್ಯ ಕಾರ್ಯ ಕ್ರಮದಲ್ಲಿ ಪ್ರದರ್ಶನಕ್ಕೆ ಈ ಸಂಘಟನೆ ಅಡ್ಡಿ ಮಾಡಿದ್ದು ಖಂಡನೀಯ, ಪದೇ ಪದೇ ರಾಜ್ಯದಲ್ಲಿ SDPI ಮತ್ತು ಕೆಲ ಸಂಘಟನೆಗಳು ಅಶಾಂತಿಯ ಮತ್ತು ಸಾರ್ವಜನಿಕ ವಲಯದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿದೆ, ರಾಜ್ಯ ಸರ್ಕಾರ ಈ ಘಟನೆಗಳ ಹಿಂದಿರುವ ಶಕ್ತಿಗಳನ್ನು ಮಟ್ಟ ಹಾಕಲಿದೆಯೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ನಯನಾ ಗಣೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!