Janardhan Kodavoor/ Team KaravaliXpress
31 C
Udupi
Friday, February 26, 2021

ನಿರಂತರ ಸೋಲಿನಿಂದ ಕಂಗೆಟ್ಟು ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಮಾಜಿ ಸಿ.ಎಂ. ಸಿದ್ದರಾಮಯ್ಯ

ಪ್ರಧಾನಿ ನರೇಂದ್ರ ಮೋದಿ ಒಬ್ಬ ಗೋಮುಖ ವ್ಯಾಘ್ರ ಎಂದಿರುವ ಮಾಜಿ ಸಿ.ಎಂ. ಸಿದ್ಧರಾಮಯ್ಯ ಕಾಂಗ್ರೆಸಿನ ನಿರಂತರ ಸೋಲಿನಿಂದ ಕಂಗೆಟ್ಟು ತನ್ನ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ದೇಶದ ಪ್ರಧಾನಿಗೆ ಗೌರವ ನೀಡದ ಸಿದ್ಧರಾಮಯ್ಯ ತನ್ನ ಅಧಿಕಾರದ ಅವಧಿಯಲ್ಲಿ ರಾಜ್ಯದಲ್ಲಿ ಅದೆಷ್ಟು ಹಿಂದೂಗಳ ಸರಣಿ ಹತ್ಯೆ ನಡೆದಿದೆ ಎಂಬುದನ್ನು ಒಮ್ಮೆ ಅವಲೋಕಿಸಿದರೆ ಯಾರು ಗೋಮುಖ ವ್ಯಾಘ್ರ ಎಂಬುದನ್ನು ತಿಳಿಯಲು ಸಾಧ್ಯ.

ಬಾಯ್ತೆರೆದರೆ ಕೋಮುವಾದ ಎಂಬಿತ್ಯಾದಿ ಸದಾ ವಿವಾದಿತ ಹೇಳಿಕೆಗಳನ್ನು ನೀಡುತ್ತಾ, ಧರ್ಮ-ಜಾತಿಗಳನ್ನು ಒಡೆಯುತ್ತಾ, ಒಂದೇ ವರ್ಗದ ಓಲೈಕೆ ಮಾಡುತ್ತಿರುವ ಸಿದ್ದರಾಮಯ್ಯಗೆ ದೇಶದ ಪ್ರಧಾನಿ ಮತ್ತು ಜಾತ್ಯಾತೀತ ತೆಯ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕುಯಿಲಾಡಿ ಹೇಳಿದ್ದಾರೆ.

ದೇಶದ ಸ್ವಾತಂತ್ರ್ಯಾ ನಂತರ ಕಾಂಗ್ರೆಸನ್ನು ವಿಸರ್ಜಿಸಬೇಕು ಎಂದಿದ್ದ ಮಹಾತ್ಮಾ ಗಾಂಧಿ ಮಾತನ್ನೇ ಈಡೇರಿ ಸದ ಕಾಂಗ್ರೆಸ್ ಪಕ್ಷ ಇಂದು ತನ್ನ ದೇಶ ವಿರೋಧಿ ನೀತಿಯಿಂದಾಗಿ ಅಧಪತನದತ್ತ ಸಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ವಿಚಾರದಲ್ಲೂ ರಾಜಕೀಯ ಮಾಡುತ್ತಿರುವ ಕೀಳು ಮನಸ್ಥಿತಿಯ ಸಿದ್ಧರಾಮಯ್ಯ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮರನ್ನು ಅವಮಾನಿಸಿದಂತಾಗಿದೆ.

ಸುಪ್ರೀಂ ಕೋರ್ಟಿನ ತೀರ್ಪಿನ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಮ ಮಂದಿರದ ದೇಣಿಗೆ ಸಂಗ್ರಹದ ಬಗ್ಗೆಯೂ ಅಪಸ್ವರ ಎತ್ತಿರುವ ಸಿದ್ಧರಾಮಯ್ಯ ವರ್ತನೆ ಹಿಂದೂ ವಿರೋಧಿ ನೀತಿಗೆ ಜ್ವಲಂತ ಉದಾಹರಣೆ. ಹೆಸರಲ್ಲಿ ರಾಮ ಎಂಬ ಪದ ಇರುವ ಮಾತ್ರಕ್ಕೆ ಹಿಂದೂ ವಿರೋಧಿಯೊಬ್ಬ ರಾಮಭಕ್ತನಾಗಲು ಸಾಧ್ಯವೇ ಎಂದು ಕುಯಿಲಾಡಿ ಪ್ರಶ್ನಿಸಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಕಿದಿಯೂರು ಹೋಟೆಲ್ ನಲ್ಲಿರುವ  ಶ್ರೀ ನಾಗದೇವರ ಸನ್ನಿಧಾನದಲ್ಲಿ 34 ನೇ ವಾರ್ಷಿಕ ಮಹಾಪೂಜೆ 

ಉಡುಪಿ:  ಕಿದಿಯೂರು ಹೋಟೆಲ್ ನಲ್ಲಿರುವ  ಶ್ರೀ ನಾಗದೇವರ ಸನ್ನಿಧಾನದಲ್ಲಿ 34 ನೇ ವಾರ್ಷಿಕ ಮಹಾಪೂಜೆ  ಶುಕ್ರವಾರ ವಿದ್ವಾನ್ ಕಬಿಯಾಡಿ​ ​ಜಯರಾಮ ​ಆಚಾರ್ಯ  ಮಾರ್ಗ ದರ್ಶನದಲ್ಲಿ  ಆಶ್ಲೇಷಾಬಲಿ , ನವಕ ಕಲಶ, ಪ್ರಧಾನ ಹೋಮ...

ಭಾರತೀಯ ಚಾರ್ಟರ್ಡ್ ಅಕೌಟೆಂಟ್ಸ್ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಮಂಡಳಿ ಉಡುಪಿ ಶಾಖೆಗೆ ಸಿಎ. ಕವಿತ ಎಮ್ ಪೈ ಟಿ ನೂತನ  ಅಧ್ಯಕ್ಷೆ 

ಉಡುಪಿ: ಭಾರತೀಯ ಚಾರ್ಟರ್ಡ್ ಅಕೌಟೆಂಟ್ಸ್ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಮಂಡಳಿ ಉಡುಪಿ ಶಾಖೆಗೆ ಸಿಎ. ಕವಿತ ಎಮ್ ಪೈ ಟಿ ಅವರು 2021-22 ನೇ ಸಾಲಿಗೆ 20ನೇ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಈ...

ಶ್ರೀ ದುರ್ಗಾ ದೇವಸ್ಥಾನ ಕುಂಜೂರುವಿನಲ್ಲಿ ಮಾರ್ಚ್,1ರಂದು ತ್ರಿಕಾಲ ಪೂಜೆ 

 ದುರ್ಗಾ ಸೇವಾ ಸಮಿತಿ ಕುಂಜೂರು ಇವರು ಆಯೋಜಿಸುವ  ಶ್ರೀ ದುರ್ಗಾ ದೇವಸ್ಥಾನ ಕುಂಜೂರು ಇಲ್ಲಿ ಮಾರ್ಚ್,1 ರಂದು  ತ್ರಿಕಾಲ ಪೂಜೆ ಅನ್ನಸಂತರ್ಪಣೆ ಮುಂತಾದ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ದಿನದ ತ್ರಿಸಂಧ್ಯಾ ಕಾಲಗಳಲ್ಲಿ  ಶ್ರೀ ದುರ್ಗಾ ಮಾತೆಗೆ ವಿಸ್ತೃತ...

ಹೆಸರಾಂತ ಆಯುರ್ವೇದ ವೈದ್ಯ ಜಿ. ಶ್ರೀನಿವಾಸ ಆಚಾರ್ಯ ನಿಧನ

ಉಡುಪಿ: ಇಲ್ಲಿನ ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಪ್ರಾಚಾರ್ಯ ಡಾ. ಜಿ. ಶ್ರೀನಿವಾಸ ಆಚಾರ್ಯ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ...
error: Content is protected !!