ಕೆಪಿಸಿಸಿ ಪದಾಧಿಕಾರಿಗಳು ಮತ್ತು ಸಂಯೋಜಕರ ಸಭೆ

ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಕೆಪಿಸಿಸಿ ಪದಾಧಿಕಾರಿಗಳು ಮತ್ತು ಸಂಯೋಜಕರ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಭಾರತ ಐಕ್ಯತಾ ಯಾತ್ರೆಯ ಬಗ್ಗೆ ಹಲವು ಭಾಗಗಳಲ್ಲಿ ಪಾದಯಾತ್ರೆ ಸಿದ್ಧತೆಗೆ ಮತ್ತು ಪಾದಯಾತ್ರೆ ಸಾಗುವ ಭಾಗಗಳ ಶಾಸಕರಿಂದ ಸೂಕ್ತ ಸ್ಪಂದನೆ ದೊರೆಯದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

“ಹಲವರು ನನ್ನ ಬಿಟ್ಟರೆ ನಮ್ಮ ಕ್ಷೇತ್ರದಲ್ಲಿ ಏನು ಮಾಡಲು ಸಾಧ್ಯ ಎಂಬ ಭ್ರಮೆಯಲ್ಲಿದ್ದಾರೆ. ಕೇರಳದಲ್ಲಿ ಸುಮಾರು 13 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ದಿನಕ್ಕೆ 5 ಸಾವಿರ ಜನರನ್ನು ಕರೆ ತರಲಾಗದು ಎಂದರೆ ಒಪ್ಪದ ಮಾತು. ಹೈಕಮಾಂಡ್ ನಿಮ್ಮ ಬಗ್ಗೆ ಯಾವ ನಿರ್ಧಾರವನ್ನು ಕೂಡ ತೆಗೆದುಕೊಳ್ಳಬಹುದು. ಯಾತ್ರೆಗೆ ಯಾವ ಶಾಸಕ ಕೆಲಸ ಮಾಡುವುದಿಲ್ಲವೋ ಅಂತವರಿಗೆ ವಿಶ್ರಾಂತಿ ನೀಡಲಾಗುತ್ತದೆ. ಯಾತ್ರೆಯ ಜವಾಬ್ದಾರಿಯನ್ನು ಯಾರು ಹಗುರವಾಗಿ ಪರಿಗಣಿಸಬೇಡಿ” ಎನ್ನುವ ಮೂಲಕ ಖಡಕ್ ಎಚ್ಚರಿಕೆ ನೀಡಿದ್ದಾರೆ.

 
 
 
 
 
 
 
 
 
 
 

Leave a Reply