ಕಾಪು ಪುರಸಭೆ ಮರಳಿ ಬಿಜೆಪಿ ತೆಕ್ಕೆಗೆ

ಉಡುಪಿ: ಕಾಪು ಪುರಸಭೆಗೆ ನಡೆದ ಚುನಾವಣೆಯ ಪೂರ್ಣ ಫಲಿತಾಂಶ ಪ್ರಕಟವಾಗಿದ್ದು ಬಿಜೆಪಿ 12 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಮೊದಲ ಸ್ಥಾನಿಯಾಗಿದ್ದು ಕಾಂಗ್ರೆಸ್‌ ಏಳು ವಾರ್ಡ್‌ ನಲ್ಲಿ, ಜೆಡಿಎಸ್‌ -1 ಮತ್ತು ಎಸ್‌ ಡಿಪಿಐ 3ರಲ್ಲಿ ಗೆಲುವು ಸಾಧಿಸಿದೆ.

23ವಾರ್ಡ್ ಗಳನ್ನು ಹೊಂದಿರುವ ಕಾಪು ಪುರಸಭೆಯ ಚುನಾವಣೆಗೆ ಒಟ್ಟು 67 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಎಸ್‌ ಡಿಪಿಐ, ವೆಲ್ಫೇರ್‌ ಪಾರ್ಟಿ ಮತ್ತು ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಡಿಸೆಂಬರ್‌ 27ರಂದು ಚುನಾವಣೆ ನಡೆದಿದ್ದು, ಶೇ. 73.95 ಮತದಾನ ನಡೆದಿದೆ.

 
 
 
 
 
 
 
 
 
 
 

Leave a Reply