ಸಚಿವನಾಗಿ, ಮಂತ್ರಿಯಾಗಿ ಸತ್ತರೆ ಮಾತ್ರ ಸ್ವರ್ಗಕ್ಕೆ ಹೋಗುವುದಲ್ಲ~ ಹಾಲಾಡಿ ಶ್ರೀನಿವಾಸ ಶೆಟ್ಟಿ

ಕುಂದಾಪುರ: ಮಾಜಿ ಸಚಿವನಾಗಿ ಸತ್ತರೆ ಸ್ವರ್ಗಕ್ಕೆ ಹೋಗಲ್ಲ, ಸಚಿವ ಸ್ಥಾನ ಸಿಗದೆ ಇರುವುದಕ್ಕೆ ಪ್ರತಿಭಟನೆ ಮಾಡುವುದು ಸರಿಯಲ್ಲ ಬದಲಾಗಿ ಜನರ ಆಶೋತ್ತರಗಳನ್ನು ಈಡೇರಿಸದೇ ಇದ್ದಾಗ ಮಾತ್ರ ಪ್ರತಿಭಟನೆ ಮಾಡಬೇಕು ಎಂದು ಸಚಿವ ಸ್ಥಾನ ವಂಚಿತ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದ್ದಾರೆ.

ಬಸವರಾಜ ಬೊಮ್ಮಾಯಿಯವರ ಕ್ಯಾಬಿನೆಟ್‌ ನಲ್ಲಿ ಸಚಿವ ಸ್ಥಾನ ಸಿಗದೆ ಇರುವುದರ ಕುರಿತು ಮಾತನಾಡಿದ ಅವರು ನಾನು ಎಂದೂ ಕೂಡ ಸಮತೋಲನ ಕಳೆದು ಕೊಂಡಿಲ್ಲ. ಜಾತಿ, ಧರ್ಮದವರ ಮತ ಪಡೆದು ಜನಪ್ರತಿ ನಿಧಿಯಾಗಿ ಆಯ್ಕೆ ಆದವರು ಜಾತಿ ಆಧಾರಿತ ಸ್ಥಾನ-ಮಾನ ಕೇಳೋದು ಸರಿಯಲ್ಲ. ಜಾತಿವಾದಿಗಳು ಜಾತಿ ಸಂಘದ ಚುನಾವಣೆಗೆ ನಿಲ್ಲಬೇಕೆ ಹೊರತು ಸಾರ್ವತ್ರಿಕ ಚುನಾವಣೆಗಳಿಗಲ್ಲ.

ಸಚಿವ ಸ್ಥಾನ ನೀಡದೇ ಇರುವುದರ ಕುರಿತು ನಾನೇನೂ ಪ್ರತಿಕ್ರಿಯಿಸುವುದಲ್ಲಿ ಇದರಿಂದ ನನಗೆ ಖುಷಿಯೂ ಇಲ್ಲ ದುಃಖವೂ ಇಲ್ಲ. ಹಾಗೆಂದು ಪ್ರತಿನಿತ್ಯ ಹೇಳಿಕೆ ಕೊಡುವ ಕೆಲಸ ಮಾಡಲು ಯಾವುದೇ ಪ್ರಚಾರ ಪ್ರೀಯ ರಾಜ ಕಾರಣಿಯೂ ಅಲ್ಲ. ಯಾವತ್ತೂ ಅಲಂಕಾರದ ಹುದ್ದೆ ಒಳ್ಳೆಯದಲ್ಲ ಎನ್ನುವುದು ನನ್ನ ಅಭಿಪ್ರಾಯವಾಗಿದೆ. ಒಬ್ಬ ಶಾಸಕನಾಗಿ ಚುನಾವಣೆಯಲ್ಲಿ ಎಲ್ಲಾ ಜನರ ಮತ ಪಡೆದು ಗೆದ್ದು ಬಂದು ಅವರ ಆಶೋತ್ತರಗಳಿಗೆ ಸ್ಪಂದಿಸಿದಾಗ ಮತ್ತು ಕ್ಷೇತ್ರದಲ್ಲಿ ಅಭಿವೃದ್ದಿ ಮಾಡಿ ಬದಲಾವಣೆ ತಂದರೆ ಅದೇ ನನಗೆ ತೃಪ್ತಿ ಎಂದರು.

ತಮ್ಮ ಪರವಾಗಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದವರ ವಿರುದ್ದ ಆಕ್ರೋಶ ಹೊರ ಹಾಕಿದ ಹಾಲಾಡಿ ಅಧಿಕಾರಕ್ಕಾಗಿ ಯಾರೂ ಕೂಡ ಪ್ರತಿಭನಡೆ ಮಾಡಬಾರದು. ಅಂತಹ ಪ್ರತಿಭಟನೆಗಳಿಗೆ ನನ್ನ ಬೆಂಬಲ ಇಲ್ಲ. ಪಕ್ಷದಲ್ಲಿ ನನ್ನ ಕೆಲಸ ಪ್ರಾಮಾಣಿಕವಾಗಿ ಮಾಡುತ್ತೇನೆ ಹಾಗಂತ ಒಂದು ಜಾತಿಗೆ ಕೆಲಸ ಮಾಡುವವರ ಬಗ್ಗೆ ನನ್ನ ಬೆಂಬಲ ಇಲ್ಲ. ನಮ್ಮ ಜಿಲ್ಲೆಯಲ್ಲೂ ಹಲವಾರು ಮಂದಿ ಜಾತಿವಾದಿ ಜನಪ್ರತಿನಿಧಿಗಳಿದ್ದಾರೆ. 

ಹುಲ್ಲಿನ ಮನೆಯನ್ನು ತೋರಿಸಿ, ಮನೆಯಿಂದ ಹೊರಗಡೆ ಹೊರಡುವಾಗ ಇಸ್ತ್ರೀ ಹಾಕಿದ ಬಟ್ಟೆ ಹಾಕಿ ಜನರ ಬಳಿ ಬರುವಾಗ ಅದನ್ನು ಮುದ್ದೆ ಮಾಡಿಕೊಂಡು ಸರಳತೆ ಪ್ರದರ್ಶಿಸುವವರೂ ಕೂಡ ಇದ್ದಾರೆ. ಅಂತಹ ಸರಳತೆ ನನಗೆ ಅಗತ್ಯವಿಲ್ಲ ಬದಲಾಗಿದ ಸರಳತೆ ಇರುವುದು ಹೃದಯದಲ್ಲಿ, ಉದಾರತೆಯಿಂದ ಮತ್ತು ಸಾಮಾಜಿಕ ನ್ಯಾಯ ಒದಗಿಸುವುದರ ಮೂಲಕ ಎಂದು ಅವರು ಹೇಳಿದರು.

ಸಚಿವನಾಗಿ ಬಳಿಕ ಮಾಜಿ ಮಂತ್ರಿಯಾಗಿ ಸತ್ತರೆ ಮಾತ್ರ ಸ್ವರ್ಗಕ್ಕೆ ಹೋಗುವುದಲ್ಲ.  ಸ್ವರ್ಗ ನರಕ ಇರುವುದು ಭೂಮಿಯಲ್ಲೇ ಎಂದು ನಂಬಿಕೊಂಡು ಬಂದವನು.  ನಾನು ಆದ್ದರಿಂದ ನನಗೆ ಯಾವುದೇ ಸಚಿವ ಸ್ಥಾನದ ಆಸೆಯೂ ಇಲ್ಲ.  ಶಾಸಕನಾಗಿ ಕ್ಷೇತ್ರಕ್ಕೆ ಉತ್ತಮ ಸೇವೆ ನೀಡುತ್ತೇನೆ.

ನನಗೆ ಸಚಿವ ಸ್ಥಾನ ಸಿಗಲಿ ಎಂದು ಆಸೆ ಪಟ್ಟುಕೊಂಡು ಕೂತಿಲ್ಲ.  ಹೊಸ ಸೀರೆ ಬರುತ್ತದೆ ಎಂದು ಹಳೆ ಸೀರೆ ಹರಿದು ಹಾಕಿ ಮಾನ ಕಳೆದುಕೊಳ್ಳುವ ಜಾಯಮಾನ ನನ್ನದಲ್ಲ.  ನಾನು ಎಂದಿಗೂ ಸಮತೋಲನ ಕಳೆದು ಕೊಳ್ಳುವ ವ್ಯಕ್ತಿಯಲ್ಲ. ಮತದಾರರು ಹಾಗೂ ಕಾರ್ಯಕರ್ತರ ಋಣ ಇದೆ. ಅದನ್ನು ನಾನು ಕ್ಷೇತ್ರದಲ್ಲಿ ಉತ್ತಮ ಸೇವೆ ಮಾಡುವ ಮೂಲಕ ಋಣ ತೀರಿಸುವೆ ಎಂದರು.

 
 
 
 
 
 
 
 
 
 
 

Leave a Reply