ಕೇಂದ್ರ ಸರ್ಕಾರ ಗ್ಯಾಸ್ ದರ ಏರಿಸಿ ಗೃಹಿಣಿಯರನ್ನು ಜೀವಂತ ಸುಡುತ್ತಿದೆ – ಗೀತಾ ವಾಗ್ಳೆ ಆರೋಪ

ಉಡುಪಿ : ಕೇಂದ್ರದಲ್ಲಿನ ಆಡಳಿತಾರೂಢ ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರಕಾರವು ಮನ ಬಂದಂತೆ ಗ್ಯಾಸ್ ದರವನ್ನು ಪದೇ ಪದೇಪದೇ ಏರಿಸುವುದರ ಮೂಲಕ ಬಡ ಹಾಗೂ ಮಧ್ಯಮ ವರ್ಗದ ಗೃಹಿಣಿಯರನ್ನು ಜೀವಂತವಾಗಿ ಸುಡುತ್ತಿದೆ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಆರೋಪಿಸಿದ್ದಾರೆ.

ಏಳು ವರ್ಷಗಳ ಹಿಂದೆ ಇದೇ ಬಿಜೆಪಿ ಪಕ್ಷದ ನಾಯಕರು ಅಡುಗೆಅನಿಲದ ದರ ಏರಿಕೆಯನ್ನು ಖಂಡಿಸಿ ದೇಶಾದ್ಯಂತ ಇರುವ ಪೆಟ್ರೋಲ್ ಬಂಕ್ ಗಳಲ್ಲಿ ಆಕರ್ಷಕ ಫ್ಲೆಕ್ಸ್ ಗಳನ್ನು ಅಳವಡಿಸಿ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಗೃಹಿಣಿಯರಿಗೆ ಬಹಳ ಅನ್ಯಾಯವಾಗುತ್ತಿದೆ,ಬೆಲೆ ಏರಿಕೆಯಿಂದಾಗಿ ಗೃಹಿಣಿಯರು ಕಣ್ಣೀರು ಹಾಕುವಂತಾಗಿದೆ ಎಂಬಂತೆ ಬಿಂಬಿಸುವ ಮೂಲಕ ಮಹಿಳೆಯರನ್ನು ಮರುಳುಮಾಡಿ,ಅದೇನೋ ದೇಶದಲ್ಲಿ ದೊಡ್ಡ ಪವಾಡವೇ ನಡೆಯಲಿದೆ ಎನ್ನುವ ರೀತಿಯಲ್ಲಿ ಆಡಳಿತ ಚುಕ್ಕಾಣಿ ಯನ್ನು ಹಿಡಿದ ವಿಚಾರವನ್ನು ಯಾರೂ ಮರೆತಿಲ್ಲ. ಆದರೆ ಅಧಿಕಾರ ಕೈಗೆ ಬರುತ್ತಿದ್ದಂತೆಯೇ,ಈ ಸರ್ಕಾರ ಮಾಡಿದ್ದೇನು?ಕಳೆದ ಏಳು ವರ್ಷಗಳಿಂದ ತಿಂಗಳಿಗೆ ಎರಡು ಮೂರು ಬಾರಿ ಎಂಬಂತೆ ಗ್ಯಾಸ್ ದರವನ್ನು ಏರಿಸಲಾಗುತ್ತಿದೆ.

ಗೃಹಿಣಿಯರ ಕಣ್ಣೀರನ್ನು ಒರೆಸುವ ವಾಗ್ದಾನ ವಿತ್ತ ಸರಕಾರ ಇಂದು ಗೃಹಿಣಿಯರ ಕಣ್ಣೀರು ಉಕ್ಕಿ ಬರುವಂತೆ ಮಾಡುತ್ತಿದೆ.ಅಸಹಾಯಕ ಪರಿಸ್ಥಿತಿಯಲ್ಲಿ ಏನೂ ಹೇಳಲಾರದಂತಹ ಪರಿಸ್ಥಿತಿಯಲ್ಲಿ ನಮ್ಮ ಗೃಹಿಣಿಯರು ಇಂದು ಇದ್ದಾರೆ.ಅವರ ಯಾವ ಪ್ರತಿಭಟನೆ, ಹಾಹಾಕಾರಗಳಿಗೂ ಕಿವಿಗೊಡದ ಸರ್ಕಾರವು ಕೋಮಾಗೆ ಹೋಗಿರುವಂತೆ ವರ್ತಿಸುತ್ತಿದೆ .ಯಾವ ಕಾಳಜಿಯೂ ಇಲ್ಲದ,ಕರುಣೆಯೂ ಇಲ್ಲದ ದುರಹಂಕಾರೀ ಮತ್ತು ದುರುಳ ಸರಕಾರ ಇದಾಗಿದೆ.ಇಂತಹ ಸರಕಾರಕ್ಕೆ ಮುಂದಿನ ದಿನಗಳಲ್ಲಿ ಜನರೇ ಬುದ್ಧಿ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.

ಬಡವರ ಬಗ್ಗೆ ಒಂದಿನಿತೂ ಕಾಳಜಿ ಇಲ್ಲದ ಈ ಸರಕಾರದ ನಿರ್ಲಜ್ಜ ಸರ್ಕಾರದ ಬಗ್ಗೆ ಮಹಿಳೆಯರ ತಾಳ್ಮೆಯ ಕಟ್ಟೆಯೊಡೆದು ಸರ್ಕಾರದ ಮೇಲೆ ಗದಾ ಪ್ರಹಾರ ಮಾಡುವ ಮೊದಲು ಎಚ್ಚೆತ್ತು ಕೊಂಡು ಗ್ಯಾಸ್ ದರವನ್ನು ಕಡಿಮೆ ಮಾಡಿ ಬಡವರಿಗೆ ಒಂದು ಹೊತ್ತಿನ ಊಟ ವನ್ನಾದರೂ ನೆಮ್ಮದಿಯಿಂದ ಮಾಡುವುದಕ್ಕೆ ಅವಕಾಶ ಮಾಡಿಕೊಂಡಿ ಎಂದು ಗೀತಾ ವಾಗ್ಳೆ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

 
 
 
 
 
 
 
 
 
 
 

Leave a Reply