ಕಾಂಗ್ರೆಸ್ ನಿಂದ ಹೊಸ ವರಸೆ: 6 ಸಚಿವರಿಗೆ ಬಹಿಷ್ಕಾರ

ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಕೆಡವಿದ ಸಚಿವರ ವಿರುದ್ಧ ತನ್ನ ಹೋರಾಟ ಆರಂಭಿಸಿದೆ. ವಿಧಾನ ಸಭೆಯಲ್ಲಾಗಲಿ ಅಥವಾ ವಿಧಾನ ಪರಿಷತ್‌ನಲ್ಲಾಗಲಿ ಮಿತ್ರಮಂಡಳಿಯ 6 ಸಚಿವರಿಗೆ ಏನನ್ನು ಕೇಳಬಾರದು ಅಂತ ನಿರ್ಧಾರ ಮಾಡಿದೆ. ಕಾಂಗ್ರೆಸ್ ಈ ನಿರ್ಧಾರ ಎಷ್ಟರಮಟ್ಟಿಗೆ ಉಪಯೋಗ ಆಗುತ್ತೊ ಗೊತ್ತಿಲ್ಲ ಆದರೆ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ಕೋರ್ಟ್ನಿಂದ ತಡೆಯಾಜ್ಞೆ ತಂದಿರುವ 6 ಸಚಿವರಿಗೆ ಮಾತ್ರ ತುಸು ಮುನಿಸು ತಂದಿದೆ.

ಸಮ್ಮಿಶ್ರ ಸರ್ಕಾರದ ಅಧಃಪತನಕ್ಕೆ ಕಾರಣರಾಗಿ ಬಿಜೆಪಿ ಅಧಿಕಾರ ಹಿಡಿಯಲು ನೆರವಾದ ಶಾಸಕರ ವಿರುದ್ಧ ಕಾಂಗ್ರೆಸ್ ತಿರು ಮಂತ್ರ ಹೂಡಿದೆ. ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ಕೋರ್ಟ್ನಿಂದ ತಡೆಯಾಜ್ಞೆ ತಂದಿರುವ 6 ಸಚಿವರಿಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಬಹಿಷ್ಕಾರ ಹಾಕಿದೆ. ಕಾಂಗ್ರೆಸ್ ಈಗಾಗಲೇ ಬಜೆಟ್ ಮಂಡನೆ ವೇಳೆ ಸಭಾತ್ಯಾಗ ಮಾಡಿ, ಟೀಕೆಗೆ ಗುರಿಯಾಗಿತ್ತು. ಈಗ ಸಚಿವರುಗಳಿಗೆ ಪ್ರಶ್ನೆ ಕೇಳುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದೆ.

ಕಾಂಗ್ರೆಸ್ ಈ ಸಚಿವರಿಗೆ ಪ್ರಶ್ನೆ ಕೇಳುವುದಿಲ್ಲ ಎಂದಾದರೆ, ವಿಪಕ್ಷ ಯಾಕೆ ಬೇಕು ಅನ್ನುವ ವಾದವೂ ಇದೀಗ ಕೇಳಿಬರುತ್ತಿದ್ದು, ಈ ಹೊಸ ವರಸೆಯಿಂದ ಮುಂದೇನು ಬೆಳವಣಿಗೆ ಆಗುತ್ತದೆ ಎಂದು ಕಾದು ನೋಡಬೇಕಿದೆ.

 
 
 
 
 
 
 
 
 
 
 

Leave a Reply