Janardhan Kodavoor/ Team KaravaliXpress
27.6 C
Udupi
Saturday, September 18, 2021

ಹೈಕಮಾಂಡ್ ನಿಂದ ಬುಲಾವ್~ ಸಿಎಂ ದಿಡೀರ್ ದೆಹಲಿಗೆ

ಬೆಂಗಳೂರು: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿಗೆ ಹೈಕಮಾಂಡ್​ ಬುಲಾವ್ ನೀಡಿದೆ. ಹೀಗಾಗಿ ಇಂದು (ಆ.1) ಸಂಜೆ 5.40ಕ್ಕೆ ದೆಹಲಿಗೆ ತೆರಳಲಿದ್ದಾರೆ. ಕೆಐಎಬಿ ಯಿಂದ ಸಿಎಂ ಬೊಮ್ಮಾಯಿ ದೆಹಲಿಗೆ ಪ್ರಯಾಣ ಮಾಡಲಿದ್ದಾರೆ.
ನಾಳೆ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಭೇಟಿ ಮಾಡಿ, ಸಚಿವ ಸಂಪುಟ ರಚನೆ ಕುರಿತಂತೆ ಚರ್ಚಿಸುತ್ತೇನೆ, ಸಂಪುಟ ಸೇರಲಿರುವ ಸಚಿವರ ಪಟ್ಟಿ ಫೈನಲ್ ಮಾಡುತ್ತೇನೆ ಎಂದಿದ್ದಾರೆ. ಈಗಾಗಲೇ ಸಚಿವ ಸ್ಥಾನಕ್ಕೆ ಲಾಬಿ ನಡೆ ಯುತ್ತಿದ್ದು, ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೆ ಅನ್ನೋದು ಭಾರಿ ಕುತೂಹಲ ಮೂಡಿಸಿದೆ.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!