ಕರ್ನಾಟಕ ರಾಜಕೀಯದಲ್ಲಿ ತನ್ನ ತಾಕತ್ತು ತೋರಿಸಿದ ರಾಜಾಹುಲಿ

ಬಿಎಸ್‍ವೈ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟ ಬಳಿಕ ಅವರ ಯುಗ ಮುಗಿಯಿತು ಅಂತ ಹೇಳಿದವರೇ ಹೆಚ್ಚು. ಆದರೆ ಬಿಎಸ್‍ವೈ ರಾಜಕೀಯ ಜೀವನ ಈಗ ಕಿಂಗ್ ಮೇಕರ್ ಪಟ್ಟಕ್ಕೇರಿದೆ. ಕರ್ನಾಟಕದ ಮಟ್ಟಿಗೆ ಬಿಎಸ್‍ವೈ ಬಿಜೆಪಿಯ ಸೂಪರ್ ಲೀಡರ್. 
 
ಯಡಿಯೂರಪ್ಪ ರಾಜೀನಾಮೆ ನಂತರ ಕರ್ನಾಟಕದಲ್ಲಿ ಬಿಜೆಪಿ ನಾಯಕ ಯಾರು ಅನ್ನುವ ಚರ್ಚೆ ಜೋರಾಗಿತ್ತು. ಬಸವರಾಜ ಬೊಮ್ಮಾಯಿ ಅಚ್ಚರಿಯಾಗಿ ಮುಖ್ಯಮಂತ್ರಿಯಾಗಿ ಅಧಿಕಾರಿ ಸ್ವೀಕರಿಸಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಬಣದ ಟ್ರಬಲ್ ಶೂಟರ್ ಖ್ಯಾತಿಯ ಬೊಮ್ಮಾಯಿಗೆ ರಾಜಾಹುಲಿ ಬೆಂಬಲವೂ ಇತ್ತು.
ಕರ್ನಾಟಕದಲ್ಲಿ ಬಿಜೆಪಿ ಮಟ್ಟಿಗೆ ಅತ್ಯುನ್ನತ ನಾಯಕ ಎನಿಸಿರುವ ಬಿಎಸ್‍ವೈ ಬೊಮ್ಮಾಯಿ ಆಯ್ಕೆಯಲ್ಲೂ ತನ್ನ ಶಕ್ತಿ ತೋರಿದ್ದಾರೆ. ಇಷ್ಟು ದಿನ ಕಿಂಗ್ ಆಗಿದ್ದ ಯಡಿಯೂರಪ್ಪ ಈಗ ಕಿಂಗ್ ಮೇಕರ್ ಆಗಿದ್ದಾರೆ. ಯಡಿಯೂರಪ್ಪ ರಾಜೀನಾಮೆ ನಂತರ ಸಿಎಂ ಸ್ಥಾನಕ್ಕೆ ಮೂರು ನಾಲ್ಕು ಹೆಸರು ಕೇಳಿ ಬಂದಿದ್ದರೂ ಅಂತಿಮವಾಗಿ ಬಸವರಾಜು ಬೊಮ್ಮಯಿ ಆಯ್ಕೆಯಾದರು. ಆ ಮೂಲಕ ಕೇಂದ್ರದ ದೆಹಲಿಯ ಬಿಜೆಪಿ ನಾಯಕರು ಯಡಿಯೂರಪ್ಪ ಮಾತಿಗೆ ಮನ್ನಣೆ ನೀಡಿದ್ದಾರೆ. 
ಯಡಿಯೂರಪ್ಪ ವಿರುದ್ಧವಾಗಿ ಕರ್ನಾಟಕದಲ್ಲಿ ಯಾವುದೇ ನಿರ್ಣಯ ತೆಗೆದುಕೊಂಡರು ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇತ್ತು. ಅದು ದೆಹಲಿ ನಾಯಕರಿಗೆ ಮನವರಿಕೆ ಆಗಿದ್ದು ವಿಧಾನ ಸೌಧದಲ್ಲಿ ಯಡಿಯೂರಪ್ಪ ರಾಜೀನಾಮೆ ಪ್ರಕಟಿಸುವ ವೇಳೆ ಆನಂದ ಬಾಷ್ಪ ಸುರಿಸಿದರೂ, ಇದು ರಾಜ್ಯದ ಯಡಿಯೂರಪ್ಪ ಅಭಿಮಾನಿಗಳಲ್ಲಿ, ಪಕ್ಷದ ಸಾವಿರಾರು ಕಾರ್ಯಕರ್ತರುಗಳಲ್ಲಿ, ಮುಖ್ಯವಾಗಿ ಲಿಂಗಾಯತ ಸಮುದಾಯದಲ್ಲಿ ಸಾಕಷ್ಟು ಆಕ್ರೋಶಕ್ಕೆ ಗುರಿಯಾಗಿತ್ತು. 
ಇದರಿಂದ ಬಹುಬೇಗ ಎಚ್ಚೆತ್ತಾ ಹೈ ಕಮಾಂಡ್ ಯಡಿಯೂರಪ್ಪನವರ ಕಣ್ಣೀರಿಗೆ ಕರಗಿ ಅವರ ಆಪ್ತನಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಯಡಿಯೂರಪ್ಪ ಮೂಲಕವೇ ಬೊಮ್ಮಯಿ ಹೆಸರು ಘೋಷಣೆ ಮಾಡಿಸಿದರು.
ಯಡಿಯೂರಪ್ಪ ಸಿಎಂ ಕುರ್ಚಿ ಕಳೆದುಕೊಂಡರೂ ಶಕ್ತಿ ಕಳೆದುಕೊಂಡಿಲ್ಲ ಅನ್ನುವುದು ಸಾಭೀತಾಗಿದೆ. ತನ್ನ ಆಪ್ತನಿಗೆ ಸಿಎಂ ಪಟ್ಟ ಕೊಡಿಸುವಲ್ಲಿ ಗೆದ್ದಿದ್ದಾರೆ. ಬಿಎಸ್‍ವೈ ಕಣ್ಣೀರಿಗೆ ಬೆಲೆ ಸಿಕ್ಕಿದೆ. ಲಿಂಗಾಯತ ಸುಮುದಾಯವರನ್ನೇ ಸಿಎಂ ಹುದ್ದೆಗೆ ಕೂರಿಸುವಲ್ಲಿ ಸಕ್ಸಸ್ ಆದ ಬಿಎಸ್ ಯಡಿಯೂರಪ್ಪ ಸಮುದಾಯದ ಪ್ರೀತಿಯನ್ನು ಸಹ ಉಳಿಸಿಕೊಂಡಿದ್ದಾರೆ.
ಅಂದಹಾಗೇ ಬಸವರಾಜ ಬೊಮ್ಮಾಯಿ ಸಿಎಂ ಹುದ್ದೆಗೇರಲು ದೆಹಲಿ ಸುತ್ತಿಲ್ಲ. ಲಾಭಿಯೂ ಮಾಡಿಲ್ಲ. ಆದರೂ ಬಿಎಸ್‍ವೈ ಆಶೀರ್ವಾದ ಪಡೆದು ಮುಖ್ಯಮಂತ್ರಿಯಾಗಿದ್ದಾರೆ. ಈ ಮೂಲಕ ಕರ್ನಾಟಕದ ಮಟ್ಟಿಗೆ ಬಿಎಸ್‍ವೈ ಮಾತೇ ಅಂತಿಮ ಅನ್ನುವುದು ಸಾಭೀತಾಗಿದೆ.
 
 
 
 
 
 
 
 
 
 
 

Leave a Reply