​ಶಿಸ್ತಿನ ಪಕ್ಷದಲ್ಲಿ ​ವಲಸಿಗರಿಗೆ ಮಣೆ~ ಬಿಜೆಪಿ ಆಡಳಿತದ ನಾಲ್ಕು ಮುಖ್ಯಮಂತ್ರಿಗಳು ವಲಸಿಗರು

ದೇಶದಲ್ಲಿರುವ 12 ಬಿಜೆಪಿ ಮುಖ್ಯಮಂತ್ರಿಗಳಲ್ಲಿ ನಾಲ್ಕು ಮಂದಿ ಮೂಲ ಬಿಜೆಪಿಗರಲ್ಲವೆಂಬುವುದು ಸತ್ಯ. ಕರ್ನಾಟಕ ಸೇರಿದಂತೆ ಇನ್ನು ಮೂರು ಕಡೆ ವಲಸಿಗರನ್ನು ಬಿಜೆಪಿ ಅನಿವಾರ್ಯವಾಗಿ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಜನತಾದಳದಿಂದ 2008 ರಲ್ಲಿ ಬಿಜೆಪಿಗೆ ಸೇರ್ಪಡೆಯಾದ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನಮಾನ ನೀಡಿರುವುದು ಅಚ್ಚರಿಯೊಂದಿಗೆ ಮೂಲ ಬಿಜೆಪಿಗರಲ್ಲಿ ಸ್ವಲ್ಪ ಮಟ್ಟಿನ ಕಸಿವಿಸಿ ಉಂಟು ಮಾಡಿದ್ದು ಸುಳ್ಳಲ್ಲ.

ಶಿಸ್ತಿನ ಪಕ್ಷ, ಪ್ರಮಾಣಿಕ ಪಕ್ಷವೆಂದಲ್ಲ ಪಂಚ್ ಲೈನ್ ಹೇಳುವ ಬಿಜೆಪಿ ಇಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಲಾಬಿ ಮತ್ತು ಲಿಂಗಾಯತ ಸಮುದಾಯದ ಲಾಬಿಗೆ ಮಂಡಿಯೂರಿರುವುದು ಸ್ಪಷ್ಟವಾಗಿದೆ. ಇನ್ನು ಅರುಣಾಚಲ ಪ್ರದೇಶದ ಪೇಮಾ ಕಾಂಡು ಕೂಡ ಮೂಲ ಬಿಜೆಪಿಗರಲ್ಲ. ಇವರನ್ನು ಬಿಜೆಪಿ ಕಾಂಗ್ರೆಸ್’ನಿಂದ ಸೆಳೆದುಕೊಂಡಿತ್ತು. 2016 ರಲ್ಲಿ ಕಾಂಗ್ರೆಸ್ ತೊರೆದಿದ್ದ ಪೆಮಾ ಕಾಂಡು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ.

 ಅಸ್ಸಾಮಿನ ಮುಖ್ಯಮಂತ್ರಿ ಹೀಮಾಂತ ಬಿಸ್ವಾ ಸಿರ್ಮಾ ಕೂಡ ಕಾಂಗ್ರೆಸ್ ನಿಂದ ವಲಸೆ ಬಂದವರು. 2014 ರಲ್ಲಿ ಮೋದಿ ವಿರುದ್ಧ ಪ್ರಚಾರ ನಡೆಸಿದ್ದ ಹೀಮಾಂತ ಬಿಸ್ವಾ 2015ರ ಆಗಸ್ಟ್ ನಲ್ಲಿ ಬಿಜೆಪಿ ಸೇರ್ಪಡೆ ಯಾಗುವುದರ ಮೂಲಕ ಪ್ರಥಮ ಬಾರಿಗೆ 2016 ರಲ್ಲಿ ಅಸ್ಸಾಮಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತು.

ಎನ್ ಬಿರೆನ್ ಸಿಂಗ್ ಮಣಿಪುರದ ಬಿಜೆಪಿ ಮುಖ್ಯಮಂತ್ರಿ. ಇವರು ಕೂಡ ಕಾಂಗ್ರೆಸ್ ಪಕ್ಷದಿಂದ ವಲಸೆ ಬಂದು ಬಳಿಕ ಕಾಂಗ್ರೆಸ್ ಸೋಲಿಸಲು ಪ್ರಯತ್ನ ಪಟ್ಟರು. ನಾಗ ಪೀಪಲ್ಸ್ ಫ್ರಂಟ್ ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿಯೊಂದಿಗೆ ಸೇರಿ ಮೈತ್ರಿ ಸರಕಾರ ರಚಿಸಿ ಎನ್ ಬಿರೆನ್ ಸಿಂಗ್ ಮುಖ್ಯಮಂತ್ರಿಯಾದರು. ಅಂತೂ ಬಿಜೆಪಿಯಲ್ಲಿ ವಲಸಿಗರಿಗೆ ಮಣೆ ಜಾಸ್ತಿ ಎಂಬುದು ಮೂಲ ಬಿಜೆಪಿ ಯವರಿಗೆ ನುಂಗಲಾರದ ತುತ್ತಾಗಿದೆ 

 
 
 
 
 
 
 
 
 
 
 

Leave a Reply