ನೂತನ ಸಚಿವ ಸಂಪುಟದಲ್ಲಿ ಮುಸ್ಲಿಮ್ ಸಮುದಾಯ ಇನ್ ?

ಬೆಂಗಳೂರು: ಎಲ್ಲ ಸಮುದಾಯವನ್ನು ಸೇರಿಸಿಕೊಂಡು ಆಡಳಿತ ನಡೆಸುವೆ ಎಂದು ಹೇಳಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಮುಸ್ಲಿಮ್ ಸಮುದಾಯಕ್ಕೂ ಒಂದು ಸಚಿವ ಸ್ಥಾನವನ್ನು ನೀಡುವ ಕುರಿತು ಚರ್ಚೆಪ್ರಾರಂಭಗೊಂಡಿದೆ. 
ಪ್ರಸ್ತುತ ಕರ್ನಾಟಕ ಬಿಜೆಪಿಯಲ್ಲಿ ಮುಸ್ಲಿಂ ಸಮುದಾಯದ ಒಬ್ಬನೇ ಒಬ್ಬ ಶಾಸಕನಾಗಲಿ, ವಿಧಾನ ಪರಿಷತ್ ಸದಸ್ಯನಾಗಲಿ ಇಲ್ಲ. ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯಕ್ಕೆ ಸಚಿವ ಸಂಪುಟ ಸ್ಥಾನ ನೀಡುವುದು ಬಹುತೇಕ ಕಷ್ಟ. 
ಇನ್ನುಳಿದ ಏಕೈಕ ದಾರಿಯೆಂದರೆ‌ ಬಿಜೆಪಿಯ ಪ್ರಮುಖ ಮುಖಂಡರನ್ನು ವಿಧಾನ ಪರಿಷತ್’ಗೆ ಆಯ್ಕೆ ಮಾಡಿ ಅಲ್ಲಿಂದ ಸಚಿವ ಸ್ಥಾನಕ್ಕೆ ಆಯ್ಕೆ ಮಾಡುವುದು. ಪ್ರಸ್ತುತ  ಮುಸ್ಲಿಮರನ್ನು ಒಲೈಸುವ ಅಗತ್ಯತೆ   ಬಿಜೆಪಿಗೆ ಇಲ್ಲದಿರುವ ಕಾರಣ ಸಾಧ್ಯತೆ ಕ್ಷೀಣವಾಗುತ್ತಿದೆ. 
ಹೀಗೊಂದು ವೇಳೆ ಆಗಿದ್ದೆ ಆದರೆ ರಹೀಮ್ ಉಚ್ಚಿಲ, ಅನ್ವರ್ ಮನಿಪಾಡಿ ಕೋಟ್ ಹೊಲಿಸಿಕೊಂಡು ರೇಸ್ ನಲ್ಲಿ ಬರಲಿದ್ದಾರೆ.​
 
 
 
 
 
 
 
 
 

Leave a Reply