ವಿ.ಕೆ. ಶಶಿಕಲಾ ನಟರಾಜನ್ ರಾಜಕೀಯ ನಿವೃತ್ತಿ

ಜಯಲಲಿತಾ ಪರಮಾಪ್ತೆ ಎಐಎಡಿಎಂಕೆ ಮಾಜಿ ನಾಯಕಿ ವಿ.ಕೆ. ಶಶಿಕಲಾ ನಟರಾಜನ್ ರಾಜಕೀಯ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದಾರೆ.


ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿ ರುವ ಶಶಿಕಲಾ ನಟರಾಜನ್ ರಾಜಕೀಯ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದಾರೆ. ಬರೋಬ್ಬರಿ ನಾಲ್ಕು ವರ್ಷಗಳ ಜೈಲು ವಾಸದ ಬಳಿಕ ವಿ.ಕೆ. ಶಶಿಕಲಾ ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಯಾಗಿದ್ದರು.


ಇದೀಗ ವಿ,ಕೆ ಶಶಿಕಲಾ ನಟರಾಜನ್ ಮಹತ್ವ ದ ನಿರ್ಧಾರ ಕೈಗೊಂಡಿದ್ದು, ವಿಧಾನಸಭೆ ಚುನಾವಣೆಗೆ ಕೆಲವೇ ವಾರಗಳಷ್ಟೇ ಬಾಕಿ ಇರುವಾಗಲೇ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ.


ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಶಶಿಕಲಾ, ‘ಜಯಾ ( ಜೆ.ಜಯಲಲಿತಾ) ಬದುಕಿದ್ದಾಗಲೂ ನಾನು ಅಧಿಕಾರ ಅಥವಾ ಸ್ಥಾನ ಪಡೆದಿರಲಿಲ್ಲ.

ಅವಳು ಸತ್ತ ಮೇಲೆಯೂ ಹಾಗೆ ಮಾಡುವು ದಿಲ್ಲ. ನಾನು ರಾಜಕೀಯದಿಂದ ದೂರ ಉಳಿದಿದ್ದೇನೆ, ಆದರೆ, ಅವರ ಪಕ್ಷ ಗೆಲ್ಲಲಿ ಎಂದು ಪ್ರಾರ್ಥಿಸುತ್ತೇನೆ, ಅವರ ಪರಂಪರೆ ಮುಂದುವರೆಯುತ್ತದೆ’ ಎಂದು ಹೇಳಿದ್ದಾರೆ.


‘ಜತೆಯಾಗಿ ಕೆಲಸ ಮಾಡುವಂತೆ ಮತ್ತು ಡಿಎಂಕೆಯನ್ನು ಸೋಲಿಸುವಂತೆ ಎಐಎಡಿ ಎಂಕೆಯ ಎಲ್ಲ ಬೆಂಬಲಿಗರಿಗೆ ನಾನು ಮನವಿ ಮಾಡುತ್ತೇನೆ. ಆಕೆಯ ಪರಂಪರೆಯನ್ನು ನಡೆಸಿಕೊಂಡು ಹೋಗುವಂತೆ ಕೆಲಸ ಮಾಡುವಂತೆ ಪಕ್ಷದ ನಾಯಕತ್ವಕ್ಕೆ ಮನವಿ ಮಾಡುತ್ತೇನೆ’ ಎಂದು ಅವರು ತಿಳಿಸಿದ್ದಾರೆ.


‘ಅಮ್ಮಾ ಅವರ ತಂಡವು ಡಿಎಂಕೆಯನ್ನು ಸೋಲಿಸಲು ಕೆಲಸ ಮಾಡಬೇಕು. ಅಮ್ಮಾ ಅವರ ಸುವರ್ಣ ಆಡಳಿತವು ಮತ್ತೆ ಬರು ವಂತೆ ಮಾಡಬೇಕು’ ಎಂದು ಅವರು ನಿವೃತ್ತ ಪತ್ರದಲ್ಲಿ ಹೇಳಿದ್ದಾರೆ.

 
 
 
 
 
 
 
 
 
 
 

Leave a Reply