ಜಿಲ್ಲಾ ನಿವೃತ್ತ ಪೋಲಿಸ್ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘ(ರಿ)ದ 8ನೇ ವಾರ್ಷಿಕ ಮಹಾಸಭೆ

ದಿನಾಂಕ 19-11-2022 ರಂದು ಉಡುಪಿ ಜಿಲ್ಲಾ ನಿವೃತ್ತ ಪೋಲಿಸ್ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘ(ರಿ) ಇವರ 8ನೇ ವಾರ್ಷಿಕ ಮಹಾಸಭೆ ಹಾಗೂ ಸಮಾರೋಪ ಸಮಾರಂಭ ಬಡಗುಬೆಟ್ಟು ಕ್ರೆಡಿಟ್-ಕೋ-ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾ ಭವನದಲ್ಲಿ ಬೆಳ್ಳಿಗೆ 11.30 ಗಂಟೆಗೆ ನಡೆದಿದ್ದು ಈ ಸಭೆಯ ಅಧ್ಯಕ್ಷತೆಯನ್ನು ನಿವೃತ್ತ ಪೋಲಿಸ್ ಅಧೀಕ್ಷರು ಮತ್ತು ಸಂಘದ ಅಧ್ಯಕ್ಷರು ಆಗಿರುವ ಶ್ರೀ ಬಿ.ಸುಧಾಕರ ಹೆಗ್ಡೆ ವಹಿಸಿದ್ದು ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಪೋಲಿಸ್ ಅಧೀಕ್ಷರಾದ ಶ್ರೀ ಅಕ್ಷಯ ಮಚ್ಚೀಂದ್ರ ಹೆಚ್ IPS, ಶ್ರೀ ಪುರುಷೋತ್ತಮ ಶೆಟ್ಟಿ ವ್ಯವಸ್ಥಾಪಕ ನಿರ್ದೇಶಕರು, ಉಜ್ವಲ್ ಡೆವಲರ‍್ಸ್ ಉಡುಪಿ, ಶ್ರೀ ಇಂದ್ರಾಳಿ ಜಯಕರ ಶೆಟ್ಟಿ ,ಬಡಗಬೆಟ್ಟು ಕ್ರೆಡಿಟ್-ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರು ಭಾವಹಿಸಿರುತ್ತಾರೆ.

ಈ ಕಾರ್ಯಕ್ರಮದಲ್ಲಿ 75 ವರ್ಷ ತುಂಬಿದ್ದ 5 ಮಂದಿ ಸಂಘದ ಹಿರಿಯ ಪೋಲಿಸ್ ಅಧಿಕಾರಿಗಳನ್ನು, ಹಾಗೂ ಸತತ 7 ವರ್ಷಗಳ ಕಾಲ ಸಂಘದ ಅಧ್ಯಕ್ಷರಾಗಿದ್ದು ಪ್ರಸ್ತುತ ಗೌರವಧ್ಯಕ್ಷರಾಗಿರುವ ನಿವೃತ್ತ ಪೋಲಿಸ್ ಉಪಾಧೀಕ್ಷಕರಾದ ಡಾ|| ಪ್ರಭುದೇವ ಮಾನೆ, ಪ್ರಸ್ತುತ್ತ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಶ್ರೀ ಇಂದ್ರಾಳಿ ಜಯಕರ ಶೆಟ್ಟಿ, ಮುಖ್ಯಮಂತ್ರಿ ಪದಕ ಪುರಸ್ಕೃತರಾದ ಸಂಘದ ಸದಸ್ಯರು ಹಾಗೂ ನಿವೃತ್ತ ಪೋಲಿಸ್ ನಿರೀಕ್ಷಕರು ಆದ ಶ್ರೀ ದೇಜಪ್ಪ, 2020-21 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ ಮೈಸೂರು ಇಲ್ಲಿ ಪಿ.ಹೆಚ್.ಡಿ ಪದವಿ ಪಡೆದ ಕರಾವಳಿ ಕಾವಲು ಪಡೆಯ ಎ.ಹೆಚ್.ಸಿ ಶ್ರೀ ಸಂತೋಷ್ ಶೆಟ್ಟಿ ರವರುಗಳನ್ನು ಸನ್ಮಾನಿಸಲಾಯಿತು, ಸಂಘದ ಸದಸ್ಯರು ಹಾಗೂ ದಾನಿಗಳದ ಶ್ರೀ ನಿವೃತ್ತ ಎ.ಎಸ್.ಐ ಶ್ರೀ ಕೇಶವ ಪ್ರಭು ಹಾಗೂ ನಿವೃತ್ತ ಪೋಲಿಸ್ ಶ್ರೀ ಅಣ್ಣಪ್ಪರವರು ನೀಡಿರುವ ಪಿ.ಯು.ಸಿ ವಿಜ್ಞಾನ, ವಾಣಿಜ್ಯ, ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿರುವ ಪ್ರಥಮ ಹಾಗೂ ದ್ವಿತೀಯ ಕರ್ತವ್ಯ ನಿರತ ಹಾಗೂ ನಿವೃತ್ತ ಪೋಲಿಸ್ ಅಧಿಕಾರಿರವರ ಮಕ್ಕಳಿಗೆ ನಗದು ಪುರಸ್ಕೃತವನ್ನು ನೀಡಲಾಯಿತು. ಸಂಘದ ಉಪಾಧ್ಯಕ್ಷರಾದ ಶ್ರೀ ಎಮ್ ಮಂಜುನಾಥ ಶೆಟ್ಟಿರವರು ಸ್ವಾಗತ ಭಾಷಣ ಮಾಡಿದ್ದು, ಉಡುಪಿ ಜಿಲ್ಲಾ ಪೋಲಿಸ್ ಅಧೀಕ್ಷರಾದ ಶ್ರೀ ಅಕ್ಷಯ ಮಚ್ಚೀಂದ್ರ ಹೆಚ್ IPS ರವರು ನಿವೃತ್ತ ಪೋಲಿಸ್ ಅಧಿಕಾರಿಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದು, ಸಂಘದ ಪ್ರಧಾನ ಕಾರ್ಯದರ್ಶಿ ನಿವೃತ್ತ ಪಿ.ಎಸ್.ಐ ಶ್ರೀ ರೋಸಾರಿಯೋ ಡಿಸೋಜಾರವರು ವಾರ್ಷಿಕ ವರದಿಯನ್ನು ಓದಿದ್ದು, ಸಂಘದ ಕೋಶಾಧಿಕಾರಿ ನಿವೃತ್ತ ಪಿ.ಎಸ್.ಐ ಶ್ರೀ ನಾಗೇಶ್ ಮೇಸ್ತ ರವರು ವಾರ್ಷಿಕ ಲೆಕ್ಕ ಪತ್ರ ಮಂಡನೆ ಮಾಡಿದ್ದು, ನಿವೃತ್ತ ಪೋಲಿಸ್ ಅಧೀಕ್ಷಕರು ಹಾಗೂ ಸಭೆಯ ಅಧ್ಯಕ್ಷರಾದ ಶ್ರೀ ಬಿ ಸುಧಾಕರ ಹೆಗ್ಡೆರವರು ಅಧ್ಯಕ್ಷರ ಭಾಷಣ ಮಾಡಿದ್ದು, ನಿವೃತ್ತ ಪೋಲಿಸ್ ಅಧೀಕ್ಷಕರು ಹಾಗೂ ಪ್ರಧಾನ ಸಲಹೆಗಾರರಾದ ಶ್ರೀ ಹೆಚ್.ಡಿ. ಮೆಂಡೋನ್ಸ್ರವರು ಧವ್ಯವಾದ ಸಮರ್ಪಣೆ ಮಾಡಿದ್ದು ಅತಿಥಿಗಳಿಗೆ ಶಾಲು ಹೊದಿಸಿ ಗೌರವ ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ನಿವೃತ್ತ ಪಿ.ಎಸ್.ಐ ಶ್ರೀ ವೆಂಕಪ್ಪ ನಾಯಕ್ ನೇರವೆರಿಸಿರುತ್ತಾರೆ.

Leave a Reply