ರಸ್ತೆ ಗುಂಡಿಗಳ ಮಧ್ಯೆ ವಧು ಫೋಟೋಶೂಟ್!

ಮದುವೆ ಫೋಟೊಶೂಟ್‌ಗೆ ಬೇಕಾದಷ್ಟು ಕ್ರಿಯೇಟೀವ್ ಐಡಿಯಾಗಳಿವೆ. ಆದರೆ ಕೇರಳದ ಈ ಜೋಡಿ ಆರಿಸಿದ್ದು ಮಾತ್ರ ರಿಯಾಲಿಟಿ.

ಕೆಂಪು ಬಣ್ಣದ ಸೀರೆಯುಟ್ಟು, ಮೈತುಂಬ ಒಡವೆ ಹಾಕಿಕೊಂಡು, ಮದುವೆ ವಿಡಿಯೋದಲ್ಲಿ ತನ್ನೂರಿನ ಹದಗೆಟ್ಟ ರಸ್ತೆಗಳನ್ನು ತೋರಿಸಿದ್ದಾರೆ. ಹೊಂಡಗಳಿರುವ ರಸ್ತೆಗಳಲ್ಲೇ ಗಾಡಿ ಓಡಾಡುತ್ತಿರುವುದು, ಅದರ ಮಧ್ಯೆಯೇ ಹೊಂಡಗಳನ್ನು ದಾಟುತ್ತಾ ವಧು ನಾಜೂಕಾಗಿ ಬರುತ್ತಾಳೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಜನ ನೈಸ್ ರೋಡ್ ಎಂದು ತಮಾಷೆ ಮಾಡಿದ್ದಾರೆ.

 
 
 
 
 
 
 
 
 
 
 

Leave a Reply