ಬಾಲಿವುಡ್ ನಟ ಫರಾಜ್ ಖಾನ್ ನಿಧನ 

ಮುಂಬೈ: ಬಾಲಿವುಡ್ ನಟ ಫರಾಜ್ ಖಾನ್ ಇಂದು ಕೊನೆಯುಸಿರೆಳೆದಿದ್ದಾರೆ. 90ರ ದಶಕದ ಮೆಹೆಂದಿ, ಫರೇಬ್‌ನಂತಹ ಹಲವು ಚಿತ್ರಗಳಲ್ಲಿ ನಾಯಕನಾಗಿದ್ದ ನಟ ಇಂದು ನೆನಪು ಮಾತ್ರ. ಫರಾಜ್‌ಖಾನ್‌ಗೆ ಸರ್ಪಸುತ್ತು ಆಗಿತ್ತು. ಇದು ಹೃದಯದಿಂದ ಮೆದುಳಿನ ವರೆಗೆ ಪಸರಿಸಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಫರಾಜ್ ಚಿಕಿತ್ಸೆ ಪಡೆಯುತ್ತಿದ್ದರು.

ಚಿಕಿತ್ಸೆ ಫಲಕಾರಿಯಾಗದೆ ಫರಾಜ್ ಮೃತಪಟ್ಟಿದ್ದಾರೆ. ಈ ಕುರಿತು ನಟಿ ಪೂಜಾ ಭಟ್ ಟ್ವೀಟ್ ಮಾಡಿದ್ದು, ಫರಾಜ್ ನಮ್ಮನ್ನೆಲ್ಲಾ ಅಗಲಿದ್ದಾರೆ ಎಂಬ ಸುದ್ದಿಯನ್ನು ಭಾರವಾದ ಹೃದಯದಿಂದ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

 
 
 
 
 
 
 
 
 
 
 

Leave a Reply