ಉಡುಪಿ: ಪಿಎಫ್‌ಐ ಕಾರ್ಯಕರ್ತರ ದಿಢೀರ್‌ ಪ್ರತಿಭಟನೆ

ಉಡುಪಿ ನಗರದಲ್ಲಿ ರಸ್ತೆ ತಡೆದು ಪಿಎಫ್‌ಐ ಕಾರ್ಯಕರ್ತರು ದಿಢೀರ್‌ ಪ್ರತಿಭಟನೆ ನಡೆದಿದ್ದು ಈ ವೇಳೆ ಪ್ರತಿಭಟನಾಕಾರರ ಮೇಲೆ ಲಘು ಲಾಠಿ ಪ್ರಹಾರ ಕೂಡಾ ನಡೆಯಿತು.

ಪಿಎಫ್‌ಐ ಎಸ್‌ಡಿಪಿಐ ಮೇಲೆ ಎನ್‌ಐಎ ದಾಳಿ ಖಂಡಿಸಿ ಪಿಎಫ್‌ಐ ಕಾರ್ಯಕರ್ತರು ಅನುಮತಿ ಪಡೆಯದೇ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಕ್ಕೆ ಪೊಲೀಸರು ಲಾಠಿ ಚಾರ್ಜ್‌ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದ್ರು. ಈ ವೇಳೆ ಹಲವು ಪಿಎಫ್ ಐ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಸ್ಥಳದಲ್ಲಿ ಬಿಗಿ ಬಂದೋಬಸ್ತ್‌ ಇದೆ.

 
 
 
 
 
 
 
 
 
 
 

Leave a Reply