ನಿವೃತ್ತಿ ವೇತನ ಜಮೆಯಾಗದು – ಎಸ್. ಎಸ್. ತೋನ್ಸೆ

ರಾಜ್ಯ ಸರಕಾರಿ ನಿವೃತ್ತ, ಕುಟುಂಬ ನಿವೃತ್ತಿ ವೇತನದಾರರ ನಿವೃತ್ತಿ ವೇತನ ಆರ್ಥಿಕ ವರ್ಷದ ಹನ್ನೊಂದು ತಿಂಗಳು ಸಾಧಾರಣವಾಗಿ ಪ್ರತಿ ತಿಂಗಳ ಕೊನೆಯ ಮೂರು ದಿನಗಳೊಳಗೆ ಅವರ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿತ್ತು. ಆದರೆ ಮಾರ್ಚ್ ತಿಂಗಳ ವೇತನ ಆ ರೀತಿ ಜಮೆಯಾಗದು. ಅದಕ್ಕಾಗಿ ನಿವೃತ್ತರು ಆತಂಕ ಪಡಬೇಕಾಗಿಲ್ಲ ಎಂದಿರುವ ನಿವೃತರ ಉಡುಪಿ ಸಂಘದ ಕಾರ್ಯದರ್ಶಿ ಎಸ್. ಎಸ್. ತೋನ್ಸೆ, ಮಾರ್ಚ್ ತಿಂಗಳು ಆರ್ಥಿಕ ವರ್ಷದ ಕೊನೆಯ ತಿಂಗಳಾದ ಕಾರಣ ಏಪ್ರಿಲ್ ತಿಂಗಳ ಪ್ರಾರಂಭದಲ್ಲಿ ಜಮೆಯಾಗುತ್ತದೆ ಎಂದಿರುತ್ತಾರೆ.

 
 
 
 
 
 
 
 
 
 
 

Leave a Reply