Janardhan Kodavoor/ Team KaravaliXpress
30.6 C
Udupi
Wednesday, August 17, 2022
Sathyanatha Stores Brahmavara

ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಸಂಸ್ಮರಣೆ*

ಅವರೇ ನೆಟ್ಟ ಸಸಿಗಳಿಗೆ ಆವರಣ ಗೋಡೆ ( ಕಟ್ಟೆ ) ಕಟ್ಟಿ ಲೋಕಾರ್ಪಣೆ*

ಗುರುವಾರ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪ್ರಥಮ ಪುಣ್ಯತಿಥಿ .‌ಬೆಂಗೂರಿನ ಪೂರ್ಣ ಪ್ರಜ್ಞ ವಿದ್ಯಾಪೀಠದಲ್ಲಿ ಶ್ರೀಗಳ ಶಿಲಾ ವೃಂದಾವನ ಪ್ರತಿಷ್ಠಾ ಪೂರ್ವಕ ಆರಾಧನೋತ್ಸವ ನಡೆದರೆ ಉಡುಪಿಯೂ ದೇಶದ ವಿವಿಧೆಡೆ ಇರುವ ಪೇಜಾವರ ಮಠದ ಶಾಖೆಗಳಲ್ಲೂ ಶ್ರೀಗಳ ಸಂಸ್ಮರಣೋತ್ಸವವು ನಡೆಯಿತು .

ಉಡುಪಿಯಲ್ಲಿ ಶ್ರೀಗಳ ಸಂಸ್ಮರಣೆಯ ವಿಶೇಷ ಕಾರ್ಯಕ್ರಮವೊಂದು ನಡೆದಿದೆ ‌ ಸ್ತಳೀಯ ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ , ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನ ಕೊಡವೂರು ಶಂಕರನಾರಾಯಣ ದೇವಸ್ಥಾನ , ಪಾಜಕದ ಆನಂದತೀರ್ಥ ವಿದ್ಯಾಲಯಗಳಲ್ಲಿ ಶ್ರೀ ವಿಶ್ವೇಶತೀರ್ಥರು ವಿವಿಧ ಸಂದರ್ಭಗಳಲ್ಲಿ ಭೇಟಿ ನೀಡಿದಾಗ ಸಸಿಗಳನ್ಬು ನೆಟ್ಟಿದ್ದು ಈಗ ಅದು ಸೊಂಪಾಗಿ ಬೆಳೆದು ನಿಂತಿವೆ . ಇವುಗಳಿಗೆ ಸುಂದರವಾಗಿ ಕಟ್ಟೆಗಳನ್ನು ಕಟ್ಟಿ ಪುಷ್ಪಾಲಂಕಾರ ಮಾಡಿ ಲೋಕಾರ್ಪಣೆಗೊಳಿಸಿ ಸಂಸ್ಮರಣೆ ಯನ್ನು ಮಾಡಲಾಯಿತು

ಮುಚ್ಲುಕೋಡು ದೇವಳದ ಆವರಣದಲ್ಲಿ ಶ್ರೀಗಳು ತಮ್ಮ 80 ನೇ ಜನ್ಮ ವರ್ಧಂತಿ ಕಾರ್ಯಕ್ರಮ ದ ಸಂದರ್ಭ 10/12/2010 ರಂದು ಸುಬ್ರಹ್ಮಣ್ಯ ಷಷ್ಟೀ ಪರ್ವದಿನದಂದು ಶ್ರೀ ವಿಶ್ವೇಶತೀರ್ಥ ಮೂಲಿಕಾ ವನ ನಿರ್ಮಾಣಕ್ಕೆ ನಾಗಕೇಸರ ಸಸಿ ನೆಟ್ಟು ಚಾಲನೆ ನೀಡಿದ್ದರು . ಅದು ಈಗ ಸಮೃದ್ಧವಾಗಿ ಬೆಳೆದಿದೆ ಮಾತ್ರವಲ್ಲ ; ಅಲ್ಲಿ 80 ವಿವಿಧ ವನಸ್ಪತಿಗಳ ಸುಂದರವಾದ ಪುಟ್ಟ ವನ ಬೆಳೆದು ನಿಂತಿದೆ.

ಪರಿಸರ ಪ್ರಕೃತಿಯ ಬಗ್ಗೆ ಅನನ್ಯ ಪ್ರೀತಿ ಹೊಂದಿದ್ದ ಶ್ರೀಗಳ ಸ್ಮರಣಾರ್ಥ ಈ ಸಸಿಗಳನ್ನು ಚೆನ್ನಾಗಿ ಪೋಷಿಸುವ ಸಂಕಲ್ಪ ಮಾಡಲಾಗಿದೆ . ಈ ಕಟ್ಟೆಗಳ ಮೇಲೆ ಶ್ರೀಗಳ ಹೆಸರು ಮತ್ತು ನೆಟ್ಟ ದಿನಾಂಕವನ್ನು ಶಿಲಾ ಫಲಕದಲ್ಲಿ ನಮೂದಿಸ ಲಾಗುತ್ತದೆ ಎಂದು ಸಂಯೋಜಿಸಿದ ವಾಸುದೇವ ಭಟ್ ಪೆರಂಪಳ್ಳಿ ತಿಳಿಸಿದ್ದಾರೆ. ಈ ಬಗ್ಗೆ ಕರಂಬಳ್ಳಿಯಲ್ಲಿ ಕೆ ರಘುಪತಿ ಭಟ್ ರಮೇಶ ಬಾರಿತ್ತಾಯ ವಾಗೀಶ, ಆನಂದತೀರ್ಥ ವಿದ್ಯಾಲಯದ ರೂಪಾ ಬಲ್ಲಾಳ್, ಗೀತಾ ಶಶಿಧರ್ , ಮುಚ್ಲುಕೋಡಿನಲ್ಲಿ ರಾಮಕೃಷ್ಣ ತಂತ್ರಿ ರಾಜಶೇಖರ ಹೆಬ್ಬಾರ್ , ಕೊಡವೂರು ದೇವಳದ ಆಡಳಿತ ಮಂಡಳಿ ಜನಾರ್ದನ ಕೊಡವೂರು ವಿಶೇಷ ಸಹಕಾರ ನೀಡಿದ್ದಾರೆ .

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!