Janardhan Kodavoor/ Team KaravaliXpress
24.6 C
Udupi
Sunday, September 25, 2022
Sathyanatha Stores Brahmavara

ಮೈಸೂರು: ಭಗಿನಿ ಸೇವಾ ಸಮಾಜದ ಶಾಲಾ ಕಟ್ಟಡಕ್ಕೆ ಭೂಮಿ ಪೂಜೆ

ಉಡುಪಿ ಪೇಜಾವರ ಮಠದ ಅಧೀನ ಸಂಸ್ಥೆ ಮೈಸೂರಿನ ಭಗಿನಿ ಸೇವಾ ಸಮಾಜದ ನೇತೃತ್ವದಲ್ಲಿ ಮೈಸೂರಿನ ಕೃಷ್ಣಮೂರ್ತಿಪುರಮ್ ನಲ್ಲಿ ಸುಮಾರು 30 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಶಾಲೆಯ ನೂತನ ಕಟ್ಟಡಕ್ಕೆ ಭೂಮಿ ಪೂಜೆಯು ಶುಕ್ರವಾರ ನೆರವೇರಿತು .‌ ಶ್ರೀ ಪೇಜಾವರ ಮಠಾಧೀಶ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು , ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ದತ್ತ ವಿಜಯಾನಂದ ಸ್ವಾಮೀಜಿ ಜೊತೆಯಾಗಿ ಭೂಮಿ ಪೂಜೆ ನೆರವೇರಿಸಿದರು . ಶಾಸಕ ಎಸ್ ಎ ರಾಮದಾಸ್ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಎಮ್ ಜಗನ್ನಾಥ್ ಶೆಣೈ , ಕಾರ್ಯಧ್ಯಕ್ಷ ಎಮ್ ಶ್ರೀನಿವಾಸ್ , ಕಾರ್ಯದರ್ಶಿ ಆರ್ ವಾಸುದೇವ ಭಟ್ , ಕೋಶಾಧಿಕಾರಿ ಟಿ ಸ್ವರ್ಣ ಕುಮಾರ್ ವಿಶ್ವಸ್ಥರಾದ ವಂದನ ಗೋವಿಂದಕೃಷ್ಣ , ಪದ್ಮಜ ಶ್ರೀನಿವಾಸ್ , ಗುರುರಾಜ್ ಕೆ ಎಸ್ ಮೊದಲಾದವರು ಉಪಸ್ಥಿತರಿದ್ದರು .

ಸಂಸ್ಥೆಯ ಹಿನ್ನೆಲೆ : ಮಹಿಳಾ ಸಶಕ್ತೀಕರಣ ,ಸ್ವಾವಲಂಬನೆ , ಸಂಸ್ಕಾರ ,ಸಂಸ್ಕೃತಿಯ ಸಂರಕ್ಷಣೆ ಮತ್ತು ಸಂವರ್ಧನೆಯ ಸದಾಶಯದೊಂದಿಗೆ 1923 ರಲ್ಲಿ ಮೈಸೂರಲ್ಲಿ ವೈ ಕೆ ಅಮೃತಾಬಾಯಿ ಅವರಿಂದ ಭಗಿನಿ ಸೇವಾ ಸಮಾಜ ಆರಂಭಗೊಂಡಿತು . 1963 ರಲ್ಲಿ ಸಮಿತಿಯ ನೇತೃತ್ವದಲ್ಲಿ ಶಾಲೆ ಆರಂಭಗೊಂಡಿತು . 2011 ರಲ್ಲಿ ಸಮಿತಿ ಮತ್ತು ಶಾಲೆಯನ್ನು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಹಸ್ತಾಂತರಿಸಲಾಗಿತ್ತು .ಇದೀಗ ಶಾಲಾ ಕಟ್ಟಡ ಶಿಥಿಲವಾಗಿರುವುದರಿಂದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಶಾಲೆಗೆ ಸುಮಾರು 30 ಕೋಟಿ ರೂ ವೆಚ್ಚದಲ್ಲಿ ನೂತನ‌ಕಟ್ಟಡ ನಿರ್ಮಾಣಕ್ಕೆ ನಿರ್ಧರಿಸಿದ್ದಾರೆ . ಶಾಲೆಯಲ್ಲಿ ಆಧುನಿಕ ಮತ್ತು ಭಾರತೀಯ ಸಂಸ್ಕೃತಿ ಸಂಸ್ಕಾರವನ್ನು ಸಮನ್ವಯಗೊಳಿಸಿ ಉತ್ತಮ‌ಗುಣಮಟ್ಟದ ಶಿಕ್ಷಣವನ್ನು ಒದಗಿಸಲಾಗುತ್ತಿದೆ .

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!