ವಿದ್ಯಾನಿದಿ ಸಮಿತಿ ಪುತ್ತೂರು ವತಿಯಿಂದ ಸಾಮೂಹಿಕ ಉಪನಯನ  

ವಿದ್ಯಾದೇಗುಲ ದಲ್ಲಿ ಪೇಜಾವರ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ದತ್ತಿನಿಧಿ ಮೂಲಕ ಸಾಮೂಹಿಕ ಬ್ರಹ್ಮೋಪದೇಶ ನಡೆಯಿತು. ಜ್ಞಾನಮಂಟಪದಲ್ಲಿ ಐದು ಅಡಿ ಎತ್ತರದ ಮಹಾವಿಷ್ಣುವಿನ ಮೂರ್ತಿಯನ್ನು ಅನಾವರಣಗೊಳಿಸಿ- ಉಪನೀತವಟುಗಳು ಸಂಧ್ಯಾವಂದನೆ ಮುಂತಾದ ಬ್ರಾಹ್ಮಣ್ಯ ರ‍್ಮಗಳನ್ನು ಮಾಡುತ್ತಾ ಬಂದಲ್ಲಿ ಇಂತಹ ಸಮಿತಿಗಳು ಮಾಡುವ ಕೆಲಸ ಸಾರ್ಥಕ್ಯವನ್ನು ಪಡೆಯುವುದು ಎಂದರು .

 ಪ್ರತಿಸಲ ಬಂದಾಗಲೂ ಇಲ್ಲಿ ಅನೇಕಾನೇಕ ಹೊಸ ಹೊಸ ಕೆಲಸಗಳು ನಡೆಯುತ್ತವೆ. ಗೋಗ್ರಾಸನಿಧಿ, ಆರೋಗ್ಯ ನಿಧಿ , ಸಂಗೀತ ಶಾಲೆ, ವೇದಾಧ್ಯಯನ ತರಗತಿ, ಮುಂತಾದ ಅನೇಕ ಸಮಾಜಮುಖಿ ಕಾರ‍್ಯಕ್ರಮಗಳನ್ನು ನಡೆಸುತ್ತಿರುವುದು ಗಮನಕ್ಕೆ ಬಂದಿರುತ್ತದೆ. 

ಇನ್ನಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುವ ಶಕ್ತಿಯನ್ನು ಸಮಿತಿಗೂ ಅದರಲ್ಲಿ ದುಡಿಯುವ ಸದಸ್ಯರಿಗೂ ದಾನಿಗಳಿಗೂ, ಶ್ರೀ ಶ್ರೀಕೃಷ್ಣ -ಮುಖ್ಯಪ್ರಾಣ ದೇವರು ಕರುಣಿಸಲಿ ಎಂದು ಪೇಜಾವರ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಇದೇ ಸಂದರ್ಭದಲ್ಲಿ ಮಹಾವಿಷ್ಣು ಮೂರ್ತಿಯನ್ನು ನೀಡಿದ ದಾನಿ ವಿಮಲಾ ರಾವ್ ಜಿ, ಇವರನ್ನು ಮತ್ತು ದಾನಿಗಳಾದ ಶ್ರೀನಿವಾಸ್ ಭಟ್ ಪುತ್ತೂರು, ಶ್ರೀಪಾದ್ ಹೆಬ್ಬಾರ್ ನೆಲ್ಲಿತಡ್ಕ, ಶ್ರೀಕಾಂತ ಅರಿಮಣಿತಾಯ ಬೆಂಗಳೂರು ಇವರುಗಳನ್ನು ಅಭಿನಂದಸಿದರು. 

ಬಳಿಕ ಬ್ರಾಹ್ಮಣ ಸುವಾಸಿನಿ ಆರಾಧನೆಯೊಂದಿಗೆ ಕಾರ‍್ಯಕ್ರಮ ಮುಕ್ತಾಯವಾಯಿತು. ಸಮಿತಿಯ ಸ್ಥಾಪಕ ಅಧ್ಯಕ್ಷ ಮಾಧವ ಉಪಾಧ್ಯಾಯ, ಅಧ್ಯಕ್ಷ ಚಂದ್ರಶೇಖರ ಅಡಿಗ, ವಿದ್ಯಾದೇಗುಲದಮಹಾದಾನಿ ಎಂ.ಮಾಧವ ಭಟ್‌ ಹಾಗೂ ಸಮಿತಿಯ ಸರ್ವ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply