​ಉಡುಪಿ ರಥಬೀದಿ ಪೇಜಾವರ ಮಠದಲ್ಲಿ ಬೆಂಕಿ ಆಕಸ್ಮಿಕ: ಅಗ್ನಿಶಾಮಕದಳದಿಂದ ಕಾರ್ಯಾಚರಣೆ

ಉಡುಪಿ: ಉಡುಪಿ ರಥಬೀದಿಯಲ್ಲಿರುವ ಪೇಜಾವರ ಮಠದಲ್ಲಿನ ಎಸಿ(ಏರ್ ಕಂಡಿಷನ್)ಯಲ್ಲಿ ಬೆಂಕಿ ಕಾಣಸಿಕೊಂಡ ಘಟನೆ ಇಂದು ಮಧ್ಯಾಹ್ನ ವೇಳೆ ನಡೆದಿದೆ.​ ಶಾರ್ಟ್ ಸರ್ಕ್ಯೂಟ್‌ನಿಂದ ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅದರ ಹೊಗೆ ಇಡೀ ಕೊಠಡಿಗೆ ​ಆವರಿಸಿದೆ. 

 
ಕೂಡಲೇ ಮಠದ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅದರಂತೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದರು.​ ಈ ಅವಘಡದಿಂದ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.​

​​


 
 
 
 
 
 
 
 
 

Leave a Reply