ಪೆಟ್ರೋಲ್ ಡಿಸೇಲ್ ಬೆಲೆ ಇಳಿಕೆಯಾದರೂ ಜನರ ಬವಣೆ ಇನ್ನೂ ತಪ್ಪಿಲ್ಲ – ರಾಘವೇಂದ್ರ ಪ್ರಭು, ಕರ್ವಾಲು

ಜನರು ಬೆಲೆ ಏರಿಕೆಯ ಬಿಸಿಯಿಂದ ಇನ್ನು ಹೊರಗೆ ಬಂದಿಲ್ಲ.ಇತ್ತೀಚೆಗೆ ಸರ್ಕಾರ ಇಂಧನದ ಬೆಲೆ ಗಣನೀಯವಾಗಿ ಇಳಿಕೆ ಮಾಡಿದರೂ ಇದರ ಪರಿಣಾಮ ಬೇರೆ ವಲಯಗಳಿಗೆ ಆಗದಿರುವುದು ಸರಿಯಲ್ಲ ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಿದ ಸಂದರ್ಭದಲ್ಲಿ ಬಸ್ಸು ಸೇರಿದಂತೆ ಸಾರಿಗೆ ವ್ಯವಸ್ಥೆಗಳ ಟಿಕೆಟ್ ದರ ಗಗನಕ್ಕೇರಿತು. 

ಆದರೆ ಇದೀಗ ಪೆಟ್ರೋಲ್ ಡಿಸೇಲ್ ಬೆಲೆಯಲ್ಲಿ ಅನುಕ್ರಮವಾಗಿ ಲೀಟರ್ ಮೇಲೆ ಕ್ರಮವಾಗಿ 12 ಮತ್ತು 17 ರೂ ಕಡಿಮೆಯಾದರೂ ಸಾರಿಗೆ ವ್ಯವಸ್ಥೆ ಮುಖ್ಯವಾಗಿ ಬಸ್ಸು ಟಿಕೆಟ್ ದರದಲ್ಲಿ ಕಡಿಮೆಯಾಗಿಲ್ಲ. ಇದರಿಂದ ಬಡ ಮತ್ತು ಮಧ್ಯಮ ವಗ೯ದವರಿಗೆ ತೊಂದರೆಯಾಗುತ್ತಿದೆ.ಸಕಾ೯ರ ಈ ಬಗ್ಗೆ ಕಣ್ಣು ಮುಚ್ಚಿ ಕುಳಿತಿರುವುದು ಸರಿಯಲ್ಲ. ಸ್ಥಳೀಯ ಜಿಲ್ಲಾಡಳಿತಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ.

ಅದೇ ರೀತಿ ಸಾರಿಗೆ ವ್ಯವಸ್ಥೆ ಯ ಮೇಲೆ ನಾವು ಬಳಸುವ ದವಸ ಧಾನ್ಯ, ಸೇರಿದಂತೆ ದಿನ ಪ್ರತಿ ಬಳಸುವ ವಸ್ತುಗಳ ಬೆಲೆ ನಿಗದಿಗೊಳ್ಳುತ್ತವೆ. ಆದರೆ ದೇಶಾದ್ಯಂತ ಇಂಧನ ಬೆಲೆ ಕಡಿಮೆಯಾದರೂ ಯಾವುದೇ ವಸ್ತುವಿನ ಬೆಲೆ ಕಡಿಮೆಯಾಗಿಲ್ಲ. ಹೀಗಾಗಿ ಜನಸಾಮಾನ್ಯರಿಗೆ ಇಂಧನ ಬೆಲೆ ಇಳಿಕೆ ಯಾವುದೇ ಪರಿಣಾಮವಾಗಿಲ್ಲ.

ಕೂಲಿ, ಸಂಬಳದಲ್ಲಿ ಸಣ್ಣ ಮಟ್ಟದ ಏರಿಕೆಯಾದರೆ, ವಸ್ತುಗಳ ಬೆಲೆಯು 2 ರಿಂದ 3 ಪಟ್ಟು ಹೆಚ್ಚುತ್ತಿದೆ. ಹೀಗಾಗಿ ಸಂಪಾದನೆಯ ಬಹುಪಾಲು ಖಚಿ೯ನ ಬಾಬ್ತು ವಾಗುತ್ತಿದೆ ಹೊರತು, ಉಳಿತಾಯ ಹೊಡಿಕೆಯ ಪಾಲು ಆಗುತ್ತಿಲ್ಲ. ಇದರಿಂದ ಜನಸಾಮಾನ್ಯರ ಜೀವನ ವಷ೯ದಿಂದ ವಷ೯ಕ್ಕೆ ದುಸ್ತರವಾಗುತ್ತಿದೆ.

 *ಇಂಧನವನ್ನು ಜಿಎಸ್ಟಿ ವ್ಯಾಪ್ತಿಗೆ ತರಬೇಕಾಗಿದೆ* ಒಂದು ವೇಳೆ ಪೆಟ್ರೋಲ್ ಡಿಸೇಲ್ ನ್ನು ಜಿಎಸ್.ಟಿ ವ್ಯಾಪ್ತಿಗೆ ತರಬೇಕಾಗಿದೆ ಇದರಿಂದ ಬೆಲೆಗಳ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸ ಬಹುದಾಗಿದೆ. 

ಸರ್ಕಾರ ಮಧ್ಯ ಪ್ರವೇಶಿಸಲಿ : ಪೆಟ್ರೋಲ್ ಡಿಸೇಲ್ ಬೆಲೆ ಕಡಿಮೆ ಮಾಡಿದ ಪರಿಣಾಮವನ್ನು ಜನರಿಗೆ ತಲುಪಿಸಲು ಸಕಾ೯ರ ಮಧ್ಯ ಪ್ರವೇಶ ಮಾಡಿ, ಎಲ್ಲಾ ವಲಯಕ್ಕೂ ಇದರ ಪರಿಣಾಮದಿಂದ ಬೆಲೆ ಇಳಿಸಬೇಕಾಗಿದೆ.

ಮುಂದಿನ ದಿನಗಳಲ್ಲಿ ಬೆಲೆಗಳು ಏರಿಕೆಯಾವುದು ಸಾಮಾನ್ಯವಾಗಬಹುದು ಹೀಗಾಗಿ ಖಚಿ೯ನ ಮೇಲೆ ನಿಯಂತ್ರಣ ಸಾಧಿಸಿ, ಸರಳ ಜೀವನ ದ ಮೂಲಕ ಉಳಿತಾಯ ಮನೋಭಾವನೆ ಬೆಳೆಸೋಣ.

 
 
 
 
 
 
 
 
 
 
 

Leave a Reply