Janardhan Kodavoor/ Team KaravaliXpress
25.6 C
Udupi
Saturday, December 3, 2022
Sathyanatha Stores Brahmavara

ಪಟ್ಲ ಯು.ಎಸ್.ನಾಯಕ್ ಪ್ರೌಢಶಾಲೆಗೆ ಬಸ್ ಹಸ್ತಾಂತರ

ಉಡುಪಿ: ಕನ್ನಡ ಮಾಧ್ಯಮ ಶಾಲೆಗಳನ್ನು ಸರಕಾರ, ಅಧ್ಯಾಪಕರು, ಊರವರೂ ಮತ್ತು ಮಕ್ಕಳು ಒಂದಾಗಿ ಉತ್ತಮ ಶಿಕ್ಷಣ ಮಕ್ಕಳಿಗೆ ಕೊಡುವ ಪ್ರಯತ್ನವೇ ನಿಜವಾದ ರಾಜ್ಯೋತ್ಸವ. ಸರಕಾರಗಳ ನಿರ್ಲಕ್ಷ್ಯದಿಂದ ಕನ್ನಡ ಮಾಧ್ಯಮ ಶಾಲೆಗಳು ಆಂಗ್ಲಮಾಧ್ಯಮಕ್ಕೆ ಪರಿವರ್ತನೆ ಮಾಡುವುದು ಅತ್ಯಂತ ವಿಷಾದನೀಯ.
ಅಧ್ಯಾಪಕರ ಕೊರತೆ ನೀಗಿಸಿ, ಅಧ್ಯಾಪಕರಿಗೆ ಸರಕಾರಿ ಕೆಲಸಗಳ ಒತ್ತಡ ಕೊಡುವುದನ್ನು ನಿಲ್ಲಿಸಿ ಮತ್ತು ಆಂಗ್ಲ ಮಾಧ್ಯಮಕ್ಕೆ ಬೆಂಬಲ ಕೊಡುವುದನ್ನು ಸರಕಾರ ನಿಲ್ಲಿಸಬೇಕು.
ಕನ್ನಡ ಮಾಧ್ಯದೊಂದಿಗೆ ಇತರ ಭಾಷೆಗಳನ್ನೂ ಕಲಿಸುವ ವ್ಯವಸ್ಥೆ ಸರಕಾರ ಶೀಘ್ರವಾಗಿ ಅನುಷ್ಠಾನಕ್ಕೆ ತರದಿದ್ದರೆ ಕನ್ನಡ ಅದೃಶ್ಯವಾಗುತ್ತದೆ.
ಎಂದು ರೋಟರಿ ಮಾಜಿ ಗವರ್ನರ್ ಶ್ರೀ ರಾಜಾರಾಂ ಭಟ್ ಅವರು ನುಡಿದರು.

ಪಟ್ಲ ರೂರಲ್ ಎಜುಕೇಶನ್ ಸೊಸೈಟಿಯೊಂದಿಗೆ ಯುಎಸ್.ನಾಯಕ್ ಪ್ರೌಢಶಾಲೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ, ರೋಟರಿ ಬಸ್ಸು ಕೊಡುಗೆ ಮತ್ತು ದಿ. ಪಿ.ಆರ್. ನಾಯಕ್ ಸಂಸ್ಮರಣೆ ಕಾರ್ಯಕ್ರಮ ನಡೆಯಿತು.

ರೋ. ಗಣೇಶ ನಾಯಕ್ ಬೆಲ್ಪತ್ರೆ ಇವರು ಶಾಲಾ ಮಕ್ಕಳ ಪ್ರಯಾಣಕ್ಕೆ ಕೊಡಮಾಡಿದ ಬಸ್ಸನ್ನು ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು.
ರೋ. ದಯಾನಂದ ಶೆಟ್ಟಿಯವರು ದಿ. ಪಿ.ರವೀಂದ್ರ ನಾಯಕ್ ಅವರ ಸಂಸ್ಮರಣಾ ಭಾಷಣದಲ್ಲಿ ನಾಯಕರ ಮುಗ್ಧತೆ, ಅಜಾತಶತ್ರುತ್ವ, ದಾನಗುಣ, ಸತ್ಕಾರ್ಯಗಳಿಗೆ ಪ್ರೋತ್ಸಾಹ ಮಾಡುವ ಸದ್ಗುಣಗಳನ್ನು ಪ್ರಶಂಸಿಸಿ ಸ್ಮರಿಸಿದರು.
ಪತ್ರಕರ್ತ ರೋ. ನಿತ್ಯಾನಂದ ಪಡ್ರೆ ಅವರು ಮಾತ್ರ ಭಾಷೆ ಮಾತ್ರ ವ್ಯಕಿಯ ವಿಕಸನಕ್ಕೆ ಸುಲಭ ಮಾಧ್ಯಮ ಭಾಷೆ.

ಕನ್ನಡ ಮಾಧ್ಯಮ ಶಾಲೆಯನ್ನು ಅತ್ಯಾಧುನಿಕ ಮಾದರಿ ಶಾಲೆಯಾಗಿಸುವಲ್ಲಿ ರೂರಲ್ ಎಜುಕೇಶನ್ ಸೊಸೈಟಿಯ ಪ್ರಯತ್ನಕ್ಕೆ ಹೆಚ್ಚಿನ ಪ್ರೋತ್ಸಾಹ ಅಗತ್ಯ. ಇದು ಯಾವುದೇ ಮಾಧ್ಯಮದ ಶಾಲೆಗಳಿಗಿಂತ ಪ್ರಸಿದ್ಧಿಯನ್ನು ಪಡೆದು ವಿದ್ಯಾರ್ಥಿಗಳನ್ನು ಹೆಸರುವಾಸಿಯಾಗಲಿ ಎಂದು ಹಾರೈಸಿದರು.

ಶಾಲಾ ಸಂಚಾಲಕರಾದ ಶ್ರೀ ನಾರಾಯಣ ಶೆಣೈ ಅವರು ಈ ಶಾಲೆಯನ್ನು ಆಕರ್ಷಣೀಯ ಮತ್ತು ಸುವ್ಯವಸ್ಥಿತ ಹಂತಕ್ಕೆ ತಲುಪಿಸುವ ಹೊಣೆ ಮತ್ತು ಕರ್ತವ್ಯ ಎಲ್ಲರದ್ದು.
ದಾನಿಗಳ ಸಹಾಯ ಹಸ್ತ ಸದಾ ಶಾಲೆಗಿರಲಿ ಎಂದು ಆಶಿಸಿದರು.
ಸಭೆಯಲ್ಲಿ ರೋ. ರಾಮಚಂದ್ರ ಉಪಾಧ್ಯ, ಶ್ರೀ ಗಣೇಶ್ ನಾಯಕ್, ಡಾ. ಮುದ್ದಣ್ಣ ನಾಯಕ್, ಮುಖ್ಯೋಪಾಧ್ಯಾಯ ಶ್ರೀ ಶ್ರೀಕಾಂತ ಪ್ರಭು ಚಿ. ಜ್ಯೋತಿರಾದಿತ್ಯ ನಾಯಕ್ ಅವರು ಸಮಯೋಚಿತವಾಗಿ ಮಾತನಾಡಿದರು.

ರೋಟರಿ ಅಧ್ಯಕ್ಷ ಶ್ರೀ ನಿತ್ಯಾನಂದ ನಾಯಕ್ ಸ್ವಾಗತಿಸಿದರು, ಶ್ರೀ ಸಚ್ಚಿದಾನಂದ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು ಶ್ರೀಮತಿ ಶಶಿಕಲಾ ಧನ್ಯವಾದಗಳನ್ನಿತ್ತರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!