Janardhan Kodavoor/ Team KaravaliXpress
27 C
Udupi
Thursday, December 3, 2020

ಮುಂಬರುವ ಮೇ. ತಿಂಗಳಿನೊಳಗೆ  ಪರ್ಕಳ ರಾಜ್ಯ ಹೆದ್ದಾರಿ ಕಾಮಗಾರಿ ಪೂರ್ಣ- ಕೆ. ರಘುಪತಿ ಭಟ್   

ಉಡುಪಿಯ ಕಡಿಯಾಳಿಯಿಂದ ಪರ್ಕಳವರೆಗಿನ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಸಂಸದರಾದ ಶೋಭಾ ಕರಂದ್ಲಾಜೆ ಅವರ ಪ್ರಯತ್ನದಿಂದ ರೂ. 99.86 ಕೋಟಿ ಅನುದಾನ ಮಂಜೂರಾಗಿ ಟೆಂಡರ್ ಪ್ರಕ್ರಿಯೆ ಮುಗಿದು ಕಳೆದ 2018ರ ಡಿಸೆಂಬರ್ ತಿಂಗಳಲ್ಲಿ ಕೆಲಸ ಆರಂಭಗೊಂಡಿತು. ಈ ರಸ್ತೆ ಹಾದು ಹೋಗುವ ಪರ್ಕಳ ಪೇಟೆಯಲ್ಲಿ ಭೂಸ್ವಾಧೀನ ಪಡಿಸಿಕೊಳ್ಳ ಬೇಕಾಗಿದ್ದು, ಈ ಪ್ರಕ್ರಿಯೆ ಅಂತಿಮ ಹಂತದಲ್ಲಿ ಇದ್ದಾಗ ಕೋವಿಡ್-19 ಸಂಬಂಧ ಲಾಕ್ ಡೌನ್ ಹೇರಿದ ದಿನಗಳಿಂದ ಎಲ್ಲಾ ಪ್ರಕ್ರಿಯೆಗಳು ಸ್ಥಗಿತವಾಗಿತ್ತು.
ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿರುವುದರಿಂದ ರಸ್ತೆ ಕಾಮಗಾರಿಗೆ ತಡೆಯಾಗಿದ್ದು, ಈ ಎಲ್ಲಾ ಪ್ರಕ್ರಿಯೆಗಳನ್ನು ಶೀಘ್ರವಾಗಿ ಮುಗಿಸಿ ಮುಂದಿನ 2021ರ ಮೇ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
 
ಭೂಸ್ವಾಧೀನ ಸಂಬಂಧ ಕಳೆದ ಫೆಬ್ರವರಿ ತಿಂಗಳಿನಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಸೇರಿದಂತೆ ಭೂಮಾಲಕರೊಂದಿಗೆ ಜಾಗ ಬಿಟ್ಟುಕೊಡುವ ಸಂಬಂಧ ಪರ್ಕಳ ಬಿ. ಎಂ. ಶಾಲೆಯಲ್ಲಿ ಸಭೆ ನಡೆಸಿ ತಕ್ಷಣ ಕಾಮಗಾರಿ ಪೂರ್ಣಗೊಳಿಸಲು ಜಾಗ ಬಿಟ್ಟು ಕೊಡುವಂತೆ ವಿನಂತಿಸಲಾಗಿತ್ತು. ಆದರೆ ಸಭೆಯಲ್ಲಿ ಯಾವುದೇ ಭೂಮಾಲಕರು ಪರಿಹಾರದ ಹಣ ಪಾವತಿಯಾಗದೆ ಜಾಗ ಬಿಟ್ಟು ಕೊಡಲು ಒಪ್ಪಿಗೆ ಸೂಚಿಸಿರುವುದಿಲ್ಲ. ಒಂದು ವರ್ಷದೊಳಗೆ 3ಡಿ ಪ್ರಕಟ ಮಾಡಬೇಕಿತ್ತು. ಆದರೆ ಕೋವಿಡ್-19 ನಿಂದ ಅದು ಆಗಲಿಲ್ಲ. ಈಗ ಮತ್ತೆ 3ಎ ಪ್ರಕಟ ಮಾಡಿ ಪ್ರಕ್ರಿಯೆ ಆರಂಭಿಸಿರುತ್ತಾರೆ.
 
ಈ ಸಂಬಂಧ ಮತ್ತೆ ಬೆಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಫಲಶ್ರುತಿಯಂತೆ ಮುಂದಿನ 2021ರ ಜನವರಿ 15ರೊಳಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ಮುಗಿಸಿ ಎಲ್ಲಾ ಭೂ ಮಾಲಕರಿಗೆ ಗರಿಷ್ಠ ಮಟ್ಟದ ಪರಿಹಾರದ ಮೊತ್ತವನ್ನು ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ. ಹಣ ಪಾವತಿ ಆದ ನಂತರ ಕಾಮಗಾರಿ ಆರಂಭಿಸಿ 2021ರ ಮೇ ತಿಂಗಳೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಒಂದು ವೇಳೆ ಈ ಕ್ಷಣದಲ್ಲಿ ಭೂಮಾಲಕರು ಈಗ ಜಾಗವನ್ನು ಬಿಟ್ಟುಕೊಟ್ಟು ಮತ್ತೆ ಹಣ ಪಡೆಯುವುದಾದರೆ ಒಂದು ವಾರದೊಳಗೆ ರಸ್ತೆ ಕಾಮಗಾರಿ ಆರಂಭಿಸಲು ಇಲಾಖೆ ಬದ್ಧವಾಗಿದೆ. ಇದಕ್ಕೆ ಭೂಮಾಲಕರ ಸಹಕಾರ ಅಗತ್ಯವಾಗಿದೆ ಹೇಳಿದರು.
 
ಕಾಂಗ್ರೆಸ್ ಪಕ್ಷಕ್ಕೆ ಈ ರಸ್ತೆಯ ಬಗ್ಗೆ ಪ್ರತಿಭಟನೆ ಮಾಡುವ ಯಾವ ನೈತಿಕ ಹಕ್ಕಿದೆ ಎಂದು ಶಾಸಕ ರಘುಪತಿ ಭಟ್ ಪ್ರಶ್ನಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಈ ರಸ್ತೆ ಯೋಗ್ಯವೋ ಎನ್ನುವ ಅರಿವಿಲ್ಲದೆ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಿದ್ದು ಕಾಂಗ್ರೆಸ್. ಇದರಿಂದ ಇಂದಿಗೂ ರಸ್ತೆಯ ಇಕ್ಕೆಲಗಳಲ್ಲಿರುವ ಜನ ಒದ್ದಾಟ ನಡೆಸುವಂತಾಗಿದೆ. ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಅನುದಾನ ನೀಡಿದ್ದು ಬಿಜೆಪಿ ಸರ್ಕಾರ. ಈ ರಸ್ತೆಗೆ ರೂ.99.86 ಕೋಟಿ ಹಾಗೂ ಆದಿಉಡುಪಿ – ಮಲ್ಪೆ ಚತುಷ್ಪಥ ರಸ್ತೆ ಅಭಿವೃದ್ಧಿಗೆ ರೂ.91.00 ಕೋಟಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅನುದಾನ ನೀಡಿದೆ. 
 
ಪರ್ಕಳ ಪೇಟೆಯಲ್ಲಿ ಭೂಸ್ವಾಧೀನ ನಡೆಸುವ ಸಂಬಂಧ ಈ ಹಿಂದೆ ಇದ್ದ ಬಿಜೆಪಿ ಆಡಳಿತದ ನಗರಸಭೆ ರೂ. 3.00 ಕೋಟಿ ಅನುದಾನ ಮೀಸಲಿಟ್ಟಿತ್ತು. ಆದರೆ ಕಾಂಗ್ರೆಸ್ ಆಡಳಿತಕ್ಕೆ ಬಂದ ಸಂದರ್ಭ ಈ ಹಣವನ್ನು ವಾಪಾಸು ಪಡೆದು ಭೂಸ್ವಾಧೀನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿತ್ತು. ಅಭಿವೃದ್ಧಿಗೆ ಮಾರಕವಾದ ಕಾಂಗ್ರೆಸ್ಸಿಗರು ಯಾವ ನೈತಿಕತೆಯಿಂದ ಈಗ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಈ ಹಿಂದೆ ಕಾಂಗ್ರೆಸ್ ಶಾಸಕರು ತನ್ನ ಐದು ವರ್ಷದ ಅವಧಿಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದೇ ಒಂದು ರಸ್ತೆಯನ್ನು ಚತುಷ್ಪಥವಾಗಿ ಅಭಿವೃದ್ಧಿಗೊಳಿಸಿಲ್ಲ. 
 
ಇರುವ ರಸ್ತೆಗೆ ಡಾಮರು ಹಾಕಿದ್ದು ಬಿಟ್ಟರೆ ಯಾವುದೇ ಹೊಸ ಯೋಜನೆ ಇಲ್ಲ. ಭೂಸ್ವಾಧೀನ ಪ್ರಕ್ರಿಯೆ ನಡೆಸಿ ಯಾವುದೇ ರಸ್ತೆ ಅಗಲೀಕರಣಗೊಳಿಸಿಲ್ಲ. ಬಿಜೆಪಿಯ ಈ ಎರಡು ವರ್ಷದ ಅವಧಿಯಲ್ಲಿ ಎಷ್ಟು ಅಭಿವೃದ್ಧಿ ಕಾರ್ಯಗಳು ಆಗಿದೆ, ಭೂಸ್ವಾಧೀನಗೊಳಿಸಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದೆ ಎನ್ನುವುದನ್ನು ಕಾಂಗ್ರೆಸ್ಸಿಗರು ಕಣ್ತೆರೆದು ನೋಡಿ. ಅಭಿವೃದ್ಧಿಯಲ್ಲಿ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಮಲ್ಪೆ-ಪಡುಕೆರೆ ಭಾಗದಲ್ಲಿ ಅಂತರ್ ರಾಷ್ಟ್ರೀಯ ಮಟ್ಟದ ಮರಿನಾ ನಿರ್ಮಿಸಿ~ಶಾಸಕ ರಘುಪತಿ ಭಟ್ ಬೇಡಿಕೆ

ಮಲ್ಪೆ-ಪಡುಕೆರೆ ಸಮುದ್ರ ಭಾಗವು ಮರಿನಾ ನಿರ್ಮಿಸಲು ಸೂಕ್ತವಾಗಿದೆ ಎಂಬ ಬಗ್ಗೆ ತಜ್ಞರ ವರದಿ ಆಧಾರದ ಮೇಲೆ ಪ್ರವಾಸೋದ್ಯಮದ ಜತೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಆರ್ಥಿಕತೆ ಅಭಿವೃದ್ಧಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಮಲ್ಪೆ-ಪಡುಕೆರೆ ಭಾಗದಲ್ಲಿ ಅಂತರ್ ರಾಷ್ಟ್ರೀಯ...

ವ್ಯಕ್ತಗೊಂಡ ಪ್ರಮೋದಾಂತರಂಗ

ನನ್ನನ್ನು ಜನಪ್ರತಿನಿಧಿಯಾಗಿ ಆಯ್ಕೆ ಮಾಡಿದಾಗ ನನ್ನ ಮನಸ್ಸಿನಲ್ಲಿ ನಾನು ಅಧಿಕಾರಕ್ಕಾಗಿ ಕೆಲಸ ಮಾಡಬಾರದು, ನನ್ನ ಕೆಲಸ ಜನರಿಗೆ ಅಧಿಕಾರ ನೀಡುವಂತಿರಬೇಕು ಎಂಬುದಾಗಿತ್ತು. ನಾನು ಕೇವಲ ರಾಜಕೀಯ ಮಾಡುವುದಿದ್ದರೇ ಹೇಗೂ ಮಾಡಬಹುದು, ರಾಜಕೀಯ ವೃತ್ತಿಯಲ್ಲ ಅದೊಂದು...

Click: Swathi Shenoy

Indian Roller.... State bird of Karnataka.. Clicked at Haleangadi

ಪಣಂಬೂರಿನಲ್ಲಿ ಸಚಿವರಿಂದ ಪೊಲೀಸ್ ವಸತಿ ಗೃಹಗಳ ಉದ್ಘಾಟನೆ

ಮಂಗಳೂರು: ಪೊಲೀಸ್ ವಸತಿ ಯೋಜನೆ 2020ರ ಅಡಿಯಲ್ಲಿ ಮಂಗಳೂರು ನಗರ ಪೊಲೀಸ್ ಸಿಬ್ಬಂದಿಗಾಗಿ ಪಣಂಬೂರಿನಲ್ಲಿ ರೂ.21.57 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಪೊಲೀಸ್ ವಸತಿ ಗೃಹಗಳನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಗುರುವಾರ...

‘ಪೊರ್ಲುಡೆ ಪೊರ್ಲು ನಮ್ಮ ತುಳುನಾಡು’~ತುಳು ಲಿಪಿ ಪರೀಕ್ಷೆ 

ಮಲ್ಪೆ~ ​‘ಪೊರ್ಲುಡೆ ಪೊರ್ಲು ನಮ್ಮ ತುಳುನಾಡು’. ತುಳುವರ ಮಾತೃಭಾಷೆ ತುಳು. ಈ ಸುಂದರ​ಭಾಷೆಯನ್ನು ಎಷ್ಟು ಬಣ್ಣಿಸಿದರೂ ಸಾಲದು. ಮೇರು ಮಟ್ಟದ ಇತಿಹಾಸ ಇರುವ ತುಳುಭಾಷೆಗೆ ಸ್ವಂತ ಲಿಪಿ ಇದೆ​ಎಂದು ಡಾ|ವೆಂಕಟರಾಜ ಪುಣಿಂಚಿತ್ತಾಯರು ತಮ್ಮ...
error: Content is protected !!