ಪರ್ಕಳದಲ್ಲಿ ಸುರಂಗ ಪತ್ತೆ

ಪರ್ಕಳ ಹೆದ್ದಾರಿ ಕಾಮಗಾರಿ ಆರಂಭವಾಗಿದ್ದು, ನಿನ್ನೆ ಕಾಮಗಾರಿ ವೇಳೆ ಸುರಂಗವೊಂದು ಪತ್ತೆಯಾಗಿದೆ.

ಪತ್ತೆಯಾದ ಸುರಂಗದ ಬಗ್ಗೆ ಇತಿಹಾಸ ಮತ್ತು ಪ್ರಾಚ್ಯಸಂಶೋಧಕರಾದ ಪ್ರೊಫೆಸರ್ ಟಿ ಮುರುಗೇಶಿ ಅವರಿಗೆ ಮಾಹಿತಿ ನೀಡಲಾಗಿದ್ದು ಸ್ಥಳ ಪರಿಶೀಲನೆ ನಂತರ ಇದರ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬಹುದು ಎಂದು ಹೇಳಲಾಗುತ್ತಿದೆ. ಪರ್ಕಳದ ಕೆಳಪರ್ಕಳದ ರಾಷ್ಟ್ರೀಯ ಹೆದ್ದಾರಿ169 ರ ಕಾಮಗಾರಿ ನಡೆಯುತ್ತಿದ್ದ ವೇಳೆ ಕೆಳ ಪರ್ಕಳದ ಅರ್ಧ ಕಿಲೋಮೀಟರ್ ದೂರದ ಪ್ರದೇಶದಲ್ಲಿ ನೂರೊಂದು ಬಾವಿಗಳು ಕಾಣಸಿಗುತ್ತವೆ, ಆ ಪ್ರದೇಶಕ್ಕೆ ಭೇಟಿ ನೀಡಿದಾಗ ನನಗೆ 36 ಬಾವಿಗಳು ಕಂಡಿವೆ ಎಂದು ಸ್ಥಳೀಯರಾದ ಗಣೇಶ್ ರಾಜ್ ಸರಳಬೆಟ್ಟು ತಿಳಿಸಿದ್ದಾರೆ.
ಇದೀಗ ಪತ್ತೆಯಾದ ಸುರಂಗ ಸಾರ್ವಜನಿಕರಲ್ಲಿ ಕುತೂಹಲ ಮೂಡಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಅಧ್ಯಯನದ ಬಳಿಕವಷ್ಟೇ ಪತ್ತೆಯಾಗಲಿದೆ

 
 
 
 
 
 
 
 
 
 
 

Leave a Reply